ಆ್ಯಪ್ನಗರ

ಸಜ್ಜನ ವ್ಯಕ್ತಿತ್ವದಿಂದ ಸಮಾಜ ಸುಂದರ

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ವಾಣಿಜ್ಯ ವಿಭಾಗದ ಪದವಿ ಹಾಗೂ ಪದವಿ ಪೂರ್ವ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ನೆರವೇರಿತು.

Vijaya Karnataka 3 Feb 2020, 5:00 am
ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ವಾಣಿಜ್ಯ ವಿಭಾಗದ ಪದವಿ ಹಾಗೂ ಪದವಿ ಪೂರ್ವ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ನೆರವೇರಿತು.
Vijaya Karnataka Web social is beautiful from the personality of the outfit
ಸಜ್ಜನ ವ್ಯಕ್ತಿತ್ವದಿಂದ ಸಮಾಜ ಸುಂದರ


ಸಾಹಿತಿ ಎಂ.ಡಿ. ಗೋಗೇರಿ ಮಾತನಾಡಿ, ವಿದ್ಯಾ ಸಂಸ್ಥೆ ಎನ್ನುವುದು ಸಜ್ಜನ ವ್ಯಕ್ತಿತ್ವದ ಸಂಸ್ಥೆ, ಈ ಸಜ್ಜನಿಕೆಯನ್ನು ನಮ್ಮಲ್ಲಿಅಳವಡಿಸಿದಾಗ ಸಮಾಜ ಕೋಮು, ಮತ, ಧರ್ಮಗಳ ದ್ವೇಷಭಾವನೆ ಅಳಿಸಿ ಸಾಮರಸ್ಯ, ಏಕತೆ ಮೂಡಿ, ಸಮಾಜ ಮತ್ತು ದೇಶವನ್ನು ಸುಂದರವಾಗಿ ನಿರ್ಮಾಣ ಮಾಡಬಹುದು ಎಂದರು.

ಇದಕ್ಕೂ ಮೊದಲು ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು. ಪ್ರಾಚಾರ್ಯ ಗೋವಿಂದ ಭಟ್ಟರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಸರ್ವಮಂಗಳಾ ಪಿ.ಆರ್‌.ನಿರೂಪಿಸಿದರು. ಪ್ರೊ. ಸಾಜಿದ್‌ ಎಂ.ಎನ್‌, ಪ್ರೊ.ಮಧುಶ್ರೀ, ಪ್ರೊ. ಶಿಲ್ಪಾ ಜೈನ್‌ ಪ್ರೊ. ಶಶಿಕಲಾ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ