ಆ್ಯಪ್ನಗರ

ಸರ್ವರ್‌ ಸಮಸ್ಯೆಗೆ ಪರಿಹಾರ ಕೊಡಿ

ಧಾರವಾಡ: ಸರ್ವರ ಸಮಸ್ಯೆಯಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸರ್ವರ್‌ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.

Vijaya Karnataka 23 Jan 2020, 5:00 am
ಧಾರವಾಡ: ಸರ್ವರ ಸಮಸ್ಯೆಯಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸರ್ವರ್‌ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
Vijaya Karnataka Web solve the server problem
ಸರ್ವರ್‌ ಸಮಸ್ಯೆಗೆ ಪರಿಹಾರ ಕೊಡಿ


ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ನಾಗರೀಕ ಹಿತರಕ್ಷಣಾ ಸಂಘದ ಪದಾಧಿಕಾರಿಗಳು, ಸರಕಾರಿ ಕಾರ್ಯಗಳು ಸರ್ವರ್‌ ಮೂಲಕ ನಡೆಯುತ್ತವೆ. ಸರ್ವರ್‌ ಸೇವೆಯಿಂದ ಸಾಕಷ್ಟು ಜನರಿಗೆ ಅನುಕುಲವಾಗಿತ್ತು. ಆದರೆ, ಇತ್ತಿಚಿನ ದಿನಗಳಲ್ಲಿಕರ್ನಾಟಕಾದಲ್ಲಿನ ಸಾರ್ವಜನಿಕ ಸೇವೆಗಳಾದ ಬ್ಯಾಂಕಿಂಗ್‌, ಬಿಎಸ್‌ಎನ್‌ಎಲ್‌, ತಹಶೀಲದಾರ ಕಚೇರಿ ಸೇವೆಗಳು, ಅಂಚೆ ಸೇವೆಗಳು ಮತ್ತು ಬಡವರಿಗೆ ನೀಡುತ್ತಿರುವ ಉಚಿತ ಅಕ್ಕಿ ಪೂರೈಸುವ ಪಡಿತರ ಚೀಟಿ ಅಂಗಡಿಗಳಿಗೆ ಸೂಕ್ತ ಸರ್ವರ್‌ ಇಲ್ಲದ ಕಾರಣ ಜನರು ಪರದಾಡುವಂತಾಗಿದೆ. ಇದರಿಂದ ಕುಟುಂಬದ ಸದಸ್ಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ಅಂಗಡಿ, ಕಚೇರಿಗಳಿಗೆ ಅಲೆಯುವಂತಾಗಿದೆ. ಸರಕಾರ ಕೂಡಲೇ ಸೂಕ್ತ ಕ್ರಮಕೈಗೊಂಡು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರಕಾರದ ಸರ್ವರ್‌ ನಿರ್ವಹಣೆ ಪಡೆದಿರುವು ಎನ್‌ಐಸಿ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ಇರುವುದು ಇಷ್ಟು ಸಮಸ್ಯೆಗೆ ಕಾರಣವಾಗಿದ್ದು, ಸಂಸ್ಥೆ ತನ್ನ ಲಾಭಕಾಗಿ ಮಾತ್ರ ಸರ್ವರ್‌ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಇದರಿಂದ ಉಪಯೋಗವಾಗುತ್ತಿಲ್ಲ. ಹೀಗಾಗಿ ಸಂಸ್ಥೆಯ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೂಂಡು, ಸರಕಾರಕ್ಕೆ ಆಗುತ್ತಿರುವ ಹೊರೆ ತಪ್ಪಿಸಬೇಕು. ಸವರ್‌ರ್‍ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಪದಾಧಿಕಾರಿಗಳಾದ ಉದಯ ಲಾಡ್‌, ಮೋಹನ ಅರ್ಕಸಾಲಿ, ಶಿವಾನಂದ ಕವಳಿ, ರಾಜೇಶ ಚಾಂದಗುಡೆ, ಶಂಕರ ಕೋಟಿ, ಸಿದ್ದು ಕಲ್ಯಾಣಶೆಟ್ಟಿ, ರಮೇಶ ದೊಡವಾಡ, ಶ್ರೀಶೈಲ ಕಮತರ, ನಾಗರಾಜ ಹಂಗರಕಿ, ಪ್ರಕಾಶ ಮುತಗಿ, ವಿನೋದ ಕುಸುಗಲ್‌, ಧೀರಜ ರಸಾಳೆ, ಶ್ರೀಕಾಂತ ಮುಂಗೋಡಿಕರ, ಪುಂಡಲೀಕ ಸವದತ್ತಿ, ಮಲ್ಲಿಕಾರ್ಜುನ ಹಳೇಮನಿ, ಮೋಹನ ರಾಮದುರ್ಗ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ