ಆ್ಯಪ್ನಗರ

ಕೆಲ ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಹುಬ್ಬಳ್ಳಿ: ದೂದ್‌ಸಾಗರ ಬಳಿ ಗುಡ್ಡ ಕುಸಿದು ಬೃಹತ್‌ ಕಲ್ಲುಗಳು ರೈಲ್ವೆ ಹಳಿ ಮೇಲೆ ಉರುಳಿ ಬಿದ್ದ ಕಾರಣ ಗೋವಾ ಮತ್ತು ಕರ್ನಾಟಕ ನಡುವಣ ರೈಲು ಸಂಪರ್ಕ ಕಡಿತಗೊಂಡಿದ್ದು, ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಹಜರತ್‌ ನಿಜಾಮುದ್ದೀನ್‌(17305), ಹುಬ್ಬಳ್ಳಿ-ವಾಸ್ಕೋ ಡಿ ಗಾಮಾ(06948) ಮತ್ತು ವಾಸ್ಕೋ ಡಿ ಗಾಮಾ-ಬೆಂಗಳೂರು(02779) ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

Vijaya Karnataka 22 Aug 2018, 7:25 pm
ಹುಬ್ಬಳ್ಳಿ: ದೂದ್‌ಸಾಗರ ಬಳಿ ಗುಡ್ಡ ಕುಸಿದು ಬೃಹತ್‌ ಕಲ್ಲುಗಳು ರೈಲ್ವೆ ಹಳಿ ಮೇಲೆ ಉರುಳಿ ಬಿದ್ದ ಕಾರಣ ಗೋವಾ ಮತ್ತು ಕರ್ನಾಟಕ ನಡುವಣ ರೈಲು ಸಂಪರ್ಕ ಕಡಿತಗೊಂಡಿದ್ದು, ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Vijaya Karnataka Web some rail traffic can be canceled and route change
ಕೆಲ ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಹುಬ್ಬಳ್ಳಿ-ಹಜರತ್‌ ನಿಜಾಮುದ್ದೀನ್‌(17305), ಹುಬ್ಬಳ್ಳಿ-ವಾಸ್ಕೋ ಡಿ ಗಾಮಾ(06948) ಮತ್ತು ವಾಸ್ಕೋ ಡಿ ಗಾಮಾ-ಬೆಂಗಳೂರು(02779) ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ವಾಸ್ಕೋ ಡಿ ಗಾಮಾ-ಹಜರತ್‌ ನಿಜಾಮುದ್ದಿನ ಎಕ್ಸಪ್ರೆಸ್‌ (12779) ರೈಲು ಮಡಗಾವ್‌, ಮಜೋರ್ಡಾ, ಕುಡಾಲ, ಸಾವಂತವಾಡಿ, ರತ್ನಾಗಿರಿ, ಚಿಪ್ಲು, ಖೇಡ, ರೊಹಾ, ಪನ್ವೇಲ್‌, ಕಲ್ಯಾಣ, ಇಜತಪುರಿ, ಮ್ಯಾನ್ಮಾಡ, ಕುಲೇಂ, ಕ್ಯಾಸಲ್‌ರಾಕ್‌, ಲೋಂಡಾ, ಮಿರಜ್‌, ಸಾತಾರ ಮಾರ್ಗವಾಗಿ ಸಂಚರಿಸಲಿದೆ.

ತೆರವು ಕಾರ್ಯಾಚರಣೆ:

ಹಳಿ ಮೇಲೆ ಬಿದ್ದಿರುವ ಬೃಹತ್‌ ಗಾತ್ರದ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ವೇಳೆಗೆ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ವಿಶ್ವಾಸವಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ