ಆ್ಯಪ್ನಗರ

ಅಣ್ಣಿಗೇರಿಗೆ ಎಸ್‌ಪಿ ಭೇಟಿ, 5 ಬೈಕ್‌ ಜಪ್ತಿ

ಅಣ್ಣಿಗೇರಿ: ಅಣ್ಣಿಗೇರಿಗೆ ಜಿಲ್ಲಾಪೋಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಭೇಟಿ ಮಾಡಿ ಪಟ್ಟಣದಲ್ಲಿವಿನಾಕಾರಣ ಸಂಚರಿಸುತ್ತಿರುವ 5ಕ್ಕೂ ಹೆಚ್ಚು ಬೈಕ್‌ಗಳನ್ನ ಸೀಜ್‌ ಮಾಡಿದರು.

Vijaya Karnataka 28 Mar 2020, 5:00 am
ಅಣ್ಣಿಗೇರಿ: ಅಣ್ಣಿಗೇರಿಗೆ ಜಿಲ್ಲಾಪೋಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಭೇಟಿ ಮಾಡಿ ಪಟ್ಟಣದಲ್ಲಿವಿನಾಕಾರಣ ಸಂಚರಿಸುತ್ತಿರುವ 5ಕ್ಕೂ ಹೆಚ್ಚು ಬೈಕ್‌ಗಳನ್ನ ಸೀಜ್‌ ಮಾಡಿದರು.
Vijaya Karnataka Web sp visits annigeri 5 bike confiscation
ಅಣ್ಣಿಗೇರಿಗೆ ಎಸ್‌ಪಿ ಭೇಟಿ, 5 ಬೈಕ್‌ ಜಪ್ತಿ


ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರವನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿರುವ ಎಲ್ಲರೋಗಿಗಳನ್ನು ಸರದಿಯಲ್ಲಿಬರುವಂತೆ, ಅಂತರ ಕಾಯ್ದುಕೊಳ್ಳುವಂತೆ ಕಾಲಂಗಳನ್ನು ಹಾಕಿಸಿದರು. ಎಲ್ಲರೋಗಿಗಳನ್ನು ಸೂಕ್ತ ರೀತಿಯಲ್ಲಿಪರೀಕ್ಷಿಸುವಂತೆ ಸಲಹೆ ನೀಡಿದರು.

ಜುಮ್ಮಾ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಸಮಾಜದವರೆಲ್ಲಶಾಂತತೆಯನ್ನು ಕಾಯ್ದು ಕೊಳ್ಳುವಂತೆ ಮನವಿ ಮಾಡಿದರು. ಪಟ್ಟಣದ ಹರಣಶಿಕಾರಿ ಓಣಿಗೆ ಬೇಟಿ ನೀಡಿ ಅಲ್ಲಿಎದುರಿಗೇ ವಿನಾಕಾರಣ ಬೈಕ್‌ನಲ್ಲಿಸಂಚರಿಸಿದ 5ಕ್ಕೂ ಹೆಚ್ಚು ಬೈಕ್‌ಗಳನ್ನು ಜಪ್ತಿ ಮಾಡಿದರು.

ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ, ನವಲಗುಂದ ತಾಲೂಕಿನ ಸಿಪಿಐ ಎಸ್‌. ಆರ್‌, ಮಠಪತಿ, ಅಣ್ಣಿಗೇರಿ ಪಿಎಸ್‌ಐ ಎಲ್‌.ಕೆ.ಜೂಲಕಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅಣ್ಣಿಗೇರಿ ಆರೋಗ್ಯ ಅಧಿಕಾರಿ ಡಾ. ಅಗರವಾಲ್‌, ಧಾರಡದ ಐ.ಬಿ.ಎಸ್‌. ಪಿ. ಎಂ,ಎಚ್‌. ಬಿದರಿ, ರವಿಕುಮಾರ ನಾಯ್ಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ