ಆ್ಯಪ್ನಗರ

ವಿಷ್ಣು ಭಾವಚಿತ್ರಕ್ಕೆ ವಿಶೇಷ ಪೂಜೆ

ಹುಬ್ಬಳ್ಳಿ : ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ರವರ 9ನೇ ಪುಣ್ಯ ಸ್ಮರಣೆಯನ್ನು ವಿಷ್ಣು ಸೇನಾ ಸಮಿತಿ ವತಿಯಿಂದ ಭಾನುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಚರಿಸಲಾಯಿತು. ಇದೇ ವೇಳೆ ಅಭಿಮಾನಿಗಳು ವಿಷ್ಣು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಸಮಿತಿಯಿಂದ ಸಿದ್ಧಪಡಿಸಿದ ವಿಷ್ಣುವರ್ಧನ್‌ ಭಾವಚಿತ್ರವುಳ್ಳ ಕೋಟಿಗೊಬ್ಬ 2019 ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

Vijaya Karnataka 31 Dec 2018, 5:00 am
ಹುಬ್ಬಳ್ಳಿ : ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ರವರ 9ನೇ ಪುಣ್ಯ ಸ್ಮರಣೆಯನ್ನು ವಿಷ್ಣು ಸೇನಾ ಸಮಿತಿ ವತಿಯಿಂದ ಭಾನುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಚರಿಸಲಾಯಿತು. ಇದೇ ವೇಳೆ ಅಭಿಮಾನಿಗಳು ವಿಷ್ಣು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಸಮಿತಿಯಿಂದ ಸಿದ್ಧಪಡಿಸಿದ ವಿಷ್ಣುವರ್ಧನ್‌ ಭಾವಚಿತ್ರವುಳ್ಳ ಕೋಟಿಗೊಬ್ಬ 2019 ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.
Vijaya Karnataka Web special worship for vishnus portrait
ವಿಷ್ಣು ಭಾವಚಿತ್ರಕ್ಕೆ ವಿಶೇಷ ಪೂಜೆ

ವಿಷ್ಣು ಸೇನಾ ಸಮಿತಿ ಧಾರವಾಡ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಡಾ.ವಿಷ್ಣುವರ್ಧನ್‌ ಸ್ಮಾರಕ ವಿವಾದ ಹಾಗೇ ಇದೆ. ಸರಕಾರಗಳು ಸ್ಮಾರಕ ನಿರ್ಮಾಣದಲ್ಲಿ ನಿರ್ಲಕ್ಷ ್ಯ ತೋರುತ್ತಿರುವುದು ಎದ್ದು ಕಾಣುತ್ತಿದೆ. ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈಸೂರು ಹಾಗೂ ಅಭಿಮಾನ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕನ್ನಡ ಪರ ಹೋರಾಟಗಾರ ಅಮೃತ ಇಜಾರೆ ಮಾತನಾಡಿ, ವಿಷ್ಣುವರ್ಧನ ಹೆಸರಿನಲ್ಲಿ ಸರಕಾರ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು. ಯಾವುದಾದರೂ ಸರಕಾರಿ ಸ್ಥಳಗಳಿಗೆ ಡಾ.ವಿಷ್ಣುವರ್ಧನ ಹೆಸರು ಇಡಬೇಕು. ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಚಂದ್ರು ಹೊನ್ನನವರ, ವಿನೋದ ಕ್ಯಾರಕಟ್ಟಿ, ಅಶೋಕ ಹಾದಿಮನಿ, ನವೀನ ಗಾಣಿಗೇರ, ಸುರೇಶ ಖಾನಾಪೂರ, ಮಂಜುನಾಥ, ಮಂಜುನಾಥ ಹೊಸಮನಿ, ಹನುಮಂತ ಮೊದಲಾವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ