ಆ್ಯಪ್ನಗರ

ಸಿದ್ಧಾರ್ಥ ಸಾವಿನ ಕುರಿತು ಅನುಮಾನ; ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕು: ಎಸ್‌.ಆರ್. ಹಿರೇಮಠ್‌

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ಧಾರ್ಥ ಸಾವು ನಿಗೂಢವಾಗಿದ್ದು, ಹಲವರು ಉದ್ಯಮಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿ ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ್‌ ಸಹ ಉದ್ಯಮಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 31 Jul 2019, 2:58 pm
ಧಾರವಾಡ: ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಸಾವಿನ ಕುರಿತು ಎಸ್.ಆರ್.ಹಿರೇಮಠ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಆಗ್ರಹಿಸಿದ್ದಾರೆ.
Vijaya Karnataka Web sr hiremath


ಉದ್ಯಮಿ ವಿ.ಜಿ. ಸಿದ್ಧಾರ್ಥ ನಿಗೂಢ ಸಾವು ಪ್ರಕರಣ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ವಿ.ಜಿ.ಸಿದ್ಧಾರ್ಥ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದರು.

ಇನ್ನು, ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ವಿ.ಜಿ.ಸಿದ್ಧಾರ್ಥ ಅವರು ಸಾವಿನ ಮೊದಲು ಬರೆದ ಪತ್ರದಲ್ಲಿ ಸತ್ಯ ಮರೆಮಾಚಲಾಗಿದೆ. ಪತ್ರವನ್ನು ಉದ್ದೇಶ ಪೂರಕವಾಗಿ ಬರೆದಂತೆ ಇದೆ. ಅವರ ಸಾವಿನ ಕುರಿತು ಸರಕಾರ ಉನ್ನತ ತನಿಖೆ ನಡೆಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್‌.ಆರ್. ಹಿರೇಮಠ್‌ ಒತ್ತಾಯಿಸಿದರು.

ಜತೆಗೆ, ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣದಲ್ಲಿ ವಿ.ಜಿ.ಸಿದ್ದಾರ್ಥ ಅವರು ಭಾಗಿಯಾಗಿದ್ದರು. ಸಿಂಗಾಪುರ ಹಾಗೂ ಹಾಂಕಾಂಗ್ನಲ್ಲಿರುವ ಆಲ್ಫಾಗ್ರಾಫ್ ಕಂಪೆನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ಈ ಹಗರಣದಲ್ಲಿ ಸಿದ್ಧಾರ್ಥ್ ಭಾಗಿ ಆಗಿರುವ ಅನುಮಾನ ತನಿಖಾ ಸಂಸ್ಥೆ ವ್ಯೆಕ್ತಪಡಿಸಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ಒಬ್ಬ ರಾಜಕಾರಣಿ ಸಹ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅಳಿಯ ಸಿದ್ಧಾರ್ಥಗೆ ಕಿರುಕುಳ ನೀಡಿದ್ದಾರೆ. ಅವರ ಹೆಸರನ್ನು ನಾನು ಈಗ ಬಹಿರಂಗ ಪಡಿಸಲಾರೆ. ಆದರೆ ಈ ಹಗರಣಗಳ ಕುರಿತು ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಹಗರಣಗಳನ್ನು ಬಹಿರಂಗಪಡಿಸಿ ಅವರ ಸಾವಿನ ಸತ್ಯವನ್ನು ಹೊರತರುವಲ್ಲಿ ತನಿಖೆ ನಡೆಸಬೇಕು. ಸಿದ್ಧಾರ್ಥ ಕುಟುಂಬಕ್ಕೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ ಎಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್‌.ಆರ್. ಹಿರೇಮಠ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ