ಆ್ಯಪ್ನಗರ

ಶ್ರೀದತ್ತ ಜಯಂತಿ ಉತ್ಸವ:ನಾನಾ ಧಾರ್ಮಿಕ ಕಾರ‍್ಯಕ್ರಮ

ಹುಬ್ಬಳ್ಳಿ: ಕಲಘಟಗಿ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಡಿ.5ರಿಂದ ಡಿ.12ರವರೆಗೆ ಶ್ರೀದತ್ತ ಜಯಂತಿ ಉತ್ಸವದ ಕಾರ್ಯಕ್ರಮಗಳು ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿಜರುಗಲಿದೆ.

Vijaya Karnataka 4 Dec 2019, 5:00 am
ಹುಬ್ಬಳ್ಳಿ: ಕಲಘಟಗಿ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಡಿ.5ರಿಂದ ಡಿ.12ರವರೆಗೆ ಶ್ರೀದತ್ತ ಜಯಂತಿ ಉತ್ಸವದ ಕಾರ್ಯಕ್ರಮಗಳು ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿಜರುಗಲಿದೆ.
Vijaya Karnataka Web sridatta jayanti utsav nana religious action
ಶ್ರೀದತ್ತ ಜಯಂತಿ ಉತ್ಸವ:ನಾನಾ ಧಾರ್ಮಿಕ ಕಾರ‍್ಯಕ್ರಮ


ಡಿ.5ರಿಂದ ದತ್ತನ ದೇವಸ್ಥಾನದಲ್ಲಿಪ್ರತಿದಿನ ಬೆಳಗ್ಗೆ 4ಕ್ಕೆæ ದೇವರಿಗೆ ಕಾಕಡಾರತಿ,ಪಂಚಾಮೃತ ಆಭಿಷೇಕ, ರುದಾಭಿಷೇಕ, ದತ್ತ ಪಾರಾಯಣ ಹಾಗೂ ಡಿ.7ರಂದು ಅವಿವಾಹಿತ ಕನ್ಯಾ ವರರಿಗೆ ಅಪೇಕ್ಷಿತ ಕನ್ಯಾ ವರ ಪ್ರಾಪ್ತಿಗಾಗಿ ಸ್ವಯಂವರ ಪಾರ್ವತಿ ಹವನ ಕಾರ್ಯಕ್ರಮ ಬೆಳಗ್ಗೆ 10ಕ್ಕೆ ನಡೆಯಲಿದೆ. ಸಂಜೆ 6ಕ್ಕೆ ರಾಘವೇಂದ್ರ ಹೊಸಳ್ಳಿ ತಂಡದ ವತಿಯಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.

ಡಿ.8ರಂದು ಗೀತಾ ಜಯಂತಿ ನಿಮಿತ್ತ ಮಹಿಳೆಯರಿಂದ ಗೀತಾವಾಚನ, ವೇ.ಮೂ. ಪಂ.ರಮೇಶಭಟ್ಟ ಜೋಶಿ ಅವರಿಂದ ಪ್ರವಚನ, ಡಿ.9ರಂದು ಮಧ್ಯಾಹ್ನ 12ಕ್ಕೆ ವಟುಭಿಕ್ಷಾ,

ರಾತ್ರಿ 8ಕ್ಕೆ ಶಾರದಾ ಭಜನಾ ಮಂಡಳಿಯಿಂದ ಭಕ್ತಿಸಂಗೀತ ಸೇವೆ, ಡಿ.10ರಂದು ಬೆಳಗ್ಗೆ 10ಕ್ಕೆ ಪವಮಾನ ಹೋಮ, 11ಕ್ಕೆ ಶ್ರೀ ಸತ್ಯನಾರಾಯಣ ಮಹಾಪೂಜೆ, ರಾತ್ರಿ 8ಕ್ಕೆ ಮಾಧುರಿ ಪೂಜಾರ, ದೀಪಾ ಪಂಡಿತ, ಆರುಂಧತಿ ಕುಲಕರ್ಣಿ ಸಂಗಡಿಗರು, ಸಂಜೆ 6ಕ್ಕೆ ವೇಣುಗೋಪಾಲ ಭಜನಾ ಮಂಡಳಿ ವತಿಯಿಂದ ಭಕ್ತಿಸಂಗೀತ ಸೇವೆ ನಡೆಯಲಿದೆ.

ಡಿ.11ರಂದು ದತ್ತ ಜಯಂತಿಯಂದು ಬೆಳಗ್ಗೆ 7ಕ್ಕೆ ಶ್ರೀದತ್ತನಿಗೆ ರುದ್ರಾಭಿಷೇಕ, 9.30ಕ್ಕೆ ಶ್ರೀ ಗುರುಚರಿತ್ರೆ ಪಾರಾಯಣ ನಡೆದು ನಂತರ ಸಂಜೆ 6ಕ್ಕೆ ದತ್ತ ಜನ್ಮೋತ್ಸವದ ನಿಮಿತ್ತ ದತ್ತನ ತೊಟ್ಟಿಲೋತ್ಸವ ಮತ್ತು ದೀಪಾರಾಧನೆ ನಡೆಯಲಿದೆ.

ಡಿ.12ರಂದು ದತ್ತಯಾಗ ಹಾಗೂ ಬುತ್ತಿಪೂಜೆ, ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ, ಸಂಜೆ ಮಂತ್ರಪುಷ್ಪ ಹಾಗೂ ಅಷ್ಟಾವಧಾನ ಸೇವೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಕೆ. ಪಾಟೀಲಕುಲಕರ್ಣಿ ಹಾಗೂ ಕಾರ್ಯದರ್ಶಿ ಚಿದಂಬರ ಜೋಶಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ