ಆ್ಯಪ್ನಗರ

ಭತ್ತ ಖರೀದಿ ಕೇಂದ್ರ ಆರಂಭ

ಧಾರವಾಡ: 2019-20ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ಎಪಿಎಂಸಿ ಗೋದಾಮುಗಳಲ್ಲಿಪ್ರಾರಂಭಿಸಲಾಗಿದೆ.

Vijaya Karnataka Web 4 Jan 2020, 5:00 am
ಧಾರವಾಡ: 2019-20ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ಎಪಿಎಂಸಿ ಗೋದಾಮುಗಳಲ್ಲಿಪ್ರಾರಂಭಿಸಲಾಗಿದೆ.
Vijaya Karnataka Web start of paddy purchasing center
ಭತ್ತ ಖರೀದಿ ಕೇಂದ್ರ ಆರಂಭ


ಭತ್ತ ಬೆಳೆದ ರೈತರು ವ್ಯಾಪ್ತಿಗೆ ಬರುವ ಈ ಖರೀದಿ ಕೇಂದ್ರಗಳಲ್ಲಿಹೆಸರು ನೋಂದಣಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಎಂ.ದೀಪಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜನವರಿ ಮೊದಲನೆಯ ವಾರದಿಂದ ರೈತರ ನೋಂದಣಿ ಆರಂಭವಾಗಿದೆ. ಕೃಷಿ ಇಲಾಖೆಯಿಂದ ನೀಡಿದ ಫ್ರುಟ್ಸ್‌ ನೋಂದಣಿ ಸಂಖ್ಯೆ ಒದಗಿಸಿ ರೈತರು ನೋಂದಣಿ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಯ ಮಾಹಿತಿ ಫ್ರುಟ್ಸ್‌ ದತ್ತಾಂಶದಲ್ಲಿಲಭ್ಯವಿಲ್ಲದಿದ್ದರೆ ರೈತರು ತಕ್ಷಣ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಬೆಳೆ ಮಾಹಿತಿ ಫ್ರುಟ್ಸ್‌ ದತ್ತಾಂಶದಲ್ಲಿಸೇರ್ಪಡೆ ಮಾಡಿ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿನೋಂದಾಯಿಸಬೇಕು ಎಂದು ತಿಳಿಸಿದ್ದಾರೆ.

ಖರೀದಿ ಮಿತಿ: ರೈತರು ಬೆಳೆದ ಪ್ರತಿ ಎಕರೆಯಿಂದ 16 ಕ್ವಿಂಟಲ್‌, ಪ್ರತಿ ರೈತರಿಂದ ಗರಿಷ್ಟ 40ಕ್ವಿಂಟಲ್‌ ಭತ್ತ ಖರೀದಿಸಲಾಗುವುದು. ರೈತರು ಫ್ರುಟ್ಸ್‌ ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿದ ನಂತರ ತಾವು ಬೆಳೆದ ಭತ್ತದ ಮಾದರಿಯೊಂದಿಗೆ ಬಂದು ತಾವು ಖರೀದಿಗೆ ನೀಡಬಹುದಾದ ದಿನಾಂಕ ಮತ್ತು ನಿಯೋಜಿಸಿದ ಅಕ್ಕಿ ಗಿರಣಿಯ ವಿವರ ಪಡೆಯಬೇಕು. ನಿಗದಿಪಡಿಸಿದ ದಿನಾಂಕದಂದು ರೈತರ ಭತ್ತವನ್ನು ಅಕ್ಕಿ ಗಿರಣಿಗಳಿಂದ ಖರೀದಿಸಲಾಗುವುದು ಮತ್ತು ಖರೀದಿ ಪ್ರಮಾಣದ ಸ್ವೀಕೃತಿ ನೀಡುತ್ತಾರೆ. ಖರೀದಿ ಏಜೆನ್ಸಿಯ ಜಿಲ್ಲಾವ್ಯವಸ್ಥಾಪಕರು ರೈತರಿಗೆ ಖರೀದಿ ಮೊತ್ತದ ಬಿಲ್‌ ಸಿದ್ದಪಡಿಸುತ್ತಾರೆ. ಖರೀದಿ ಮೊತ್ತದ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಸಂದಾಯ ಮಾಡಲು ಕ್ರಮವಹಿಸುತ್ತಾರೆ.

ಭತ್ತ ಪ್ರಮುಖ ಅಂಶಗಳ ಗುಣಮಟ್ಟ: ಶೇ.17 ತೇವಾಂಶ, ಶೇ.3 ಜೊಳ್ಳು , ಶೇ.13 ಭತ್ತದ ಕಾಳು, ಶೇ.4 ಬಣ್ಣ ಮಾಸಿದ, ಮುರಿದ ಮತ್ತು ಹುಳು ಹಿಡಿದ ಕಾಳು, ಶೇ.1 ಮಿಶ್ರಣ ಕಲ್ಲು, ಮಣ್ಣು ಪ್ರಮಾಣದ ಅಂಶ ಪರಿಗಣಿಸಲಾಗುವುದು. ಒಂದು ವೇಳೆ ಗುಣಮಟ್ಟದಲ್ಲಿಯಾವುದೇ ನೂನ್ಯತೆ ಕಂಡುಬಂದಲ್ಲಿಸಂಪೂರ್ಣ ಪ್ರಮಾಣ ತಿರಸ್ಕರಿಸಲಾಗುವುದು.

ಜಿಲ್ಲೆಯ ರೈತರು ಈ ಎಲ್ಲಾಅಂಶ ಅನುಸರಿಸಿ ಭತ್ತ ಖರೀದಿ ಕೇಂದ್ರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ