ಆ್ಯಪ್ನಗರ

ರಾಜ್ಯಮಟ್ಟದ 4ನೇ ಲೇಖಕಿಯರ ಸಮ್ಮೇಳನ 14ಕ್ಕೆ

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಐಬಿಎಂಆರ್‌ ಶಿಕ್ಷಣ ಸಂಸ್ಥೆಗಳ ಸಹಕಾರದಲ್ಲಿನ.14 ಬೆಳಗ್ಗೆ 10.30 ಕ್ಕೆ ನಡೆಯುವ ರಾಜ್ಯಮಟ್ಟದ 4ನೇ ಲೇಖಕಿಯರ ಸಮ್ಮೇಳನಕ್ಕೆ ಗದಗ ಜಿಲ್ಲಾ ಆಯುಷ್‌ ಅಧಿಕಾರಿ ಹಾಗೂ ಲೇಖಕಿ ಡಾ. ಸುಜಾತಾ ಪಾಟೀಲ ಚಾಲನೆ ನೀಡಲಿದ್ದಾರೆ ಎಂದು ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

Vijaya Karnataka 11 Nov 2019, 5:00 am
ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಐಬಿಎಂಆರ್‌ ಶಿಕ್ಷಣ ಸಂಸ್ಥೆಗಳ ಸಹಕಾರದಲ್ಲಿನ.14 ಬೆಳಗ್ಗೆ 10.30 ಕ್ಕೆ ನಡೆಯುವ ರಾಜ್ಯಮಟ್ಟದ 4ನೇ ಲೇಖಕಿಯರ ಸಮ್ಮೇಳನಕ್ಕೆ ಗದಗ ಜಿಲ್ಲಾ ಆಯುಷ್‌ ಅಧಿಕಾರಿ ಹಾಗೂ ಲೇಖಕಿ ಡಾ. ಸುಜಾತಾ ಪಾಟೀಲ ಚಾಲನೆ ನೀಡಲಿದ್ದಾರೆ ಎಂದು ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
Vijaya Karnataka Web state level 4th authors conference 14th
ರಾಜ್ಯಮಟ್ಟದ 4ನೇ ಲೇಖಕಿಯರ ಸಮ್ಮೇಳನ 14ಕ್ಕೆ


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾಡಿನ ಹಿರಿಯ ಲೇಖಕಿ ಯಲಬುರ್ಗಾದ ಶಾಂತಾ ಕೆ.ಬಸವರಾಜ್‌ ಸರ್ವಾಧ್ಯಕ್ಷರಾಗಿದ್ದು, ಅತ್ತಿವೇರಿ ಬಸವಾಶ್ರಮದ ಬಸವೇಶ್ವರಿ ಮಾತಾ ಸಾನ್ನಿಧ್ಯ ವಹಿಸುವರು. ಶಿಕ್ಷಣ ತಜ್ಞ ಒಟಲೆ ಅವಮನ ಕುಮಾರ, ಪರಿಷತ್ತಿನ ಚನ್ನಬಸಪ್ಪ ಧಾರವಾಡ ಶೆಟ್ರು, ಶಂಕರ ಕುಂಬಿ, ಡಾ.ಎಚ್‌.ವಿ.ಬೆಳಗಲಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಾಧಕ ಮಹಿಳೆಯರಾದ ಡಾ.ಸುಧಾ ಹುಲ್ಲೂರ,ಸುಮಾ ಮಹೇಂದ್ರಕರ, ಪದ್ಮಜಾ ಉಮರ್ಜಿ , ಶಿಲ್ಪಾ ದಂಡೀನ, ಗೀತಾಂಜಲಿ ಕಡಿವಾಳ ಸೇರಿದಂತೆ ಹತ್ತು ಜನರನ್ನು ಹಾಗೂ ಪ್ರತಿಭಾವಂತ ಮಕ್ಕಳಾದ ಹಾಸನದ ಮೈತ್ರಿ ಮನಗಂಡಿ, ಹೊಸಪೇಟೆ ಯ ಕೆ.ಎಸ್‌.ವೇದಶ್ರೀ, ಸಂಕ್ಲಿಪುರ ಅನನ್ಯ ಹಿರೇಮಠ, ಹರ್ಲಾಪುರದ ಪ್ರಿಯಾ ಸಂಕಿನಮಠ, ಶ್ರೇಯಸ್‌ ಕೊಡ್ಲಿ, , ಕೀರ್ತನಾ ಪೂಜಾರ ಅವರನ್ನು ಗೌರವಿಸಲಾಗುವುದು ಎಂದು ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು ತಿಳಿಸಿದ್ದಾರೆ.

ನಂತರ ಜರಗುವ ಮಹಿಳಾಪರ ಚಿಂತನೆ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಡಾ ಸರ್ವಮಂಗಳಾ ಕುದುರಿ ವಹಿಸಲಿದ್ದು, ಪೊ› ಪ್ರಜ್ಞಾ ಮತ್ತಿಹಳ್ಳಿ ದಿಕ್ಸೂಚಿ ನುಡಿ, ಮಾಯಾ ಚಿಕ್ಕೇರೂರ, ಡಾ.ಅಂಜನಾ ಕೃಷ್ಣಪ್ಪ ಹಾಗೂ ರೋಹಿಣಿ ಎಸ್‌ ರಾವ್‌ ಪ್ರಬಂಧ ಮಂಡಿಸುವರು,

ಸಂಜೆ ಕವಿಗೋಷ್ಟಿಯ ಅಧ್ಯಕ್ಷತೆ ಹಿರಿಯ ಕವಿ ಗಂಗಾಧರ ನಂದಿ ವಹಿಸಲಿದ್ದು, ಸಿದ್ದೇಶ್ವರ ಹಿರೇಮಠ ಆಶಯ ನುಡಿ ನುಡಿಯಲಿದ್ದು, ನಾಡಿನ ನಲ್ವತ್ತು ಜನ ಕವಿಗಳು ಮತ್ತು ಕವಿಯತ್ರಿಯರು ಚುಟುಕು ವಾಚನ ಮಾಡುವರು. ಶೋಭಾ ಉಜ್ಜನಶೆಟ್ಟರಿಂದ ಕನ್ನಡಗೀತೆ ಜರುಗಲಿವೆ ಎಂದು ಜಿಲ್ಲಾಧ್ಯಕ್ಷ ಡಾ. ಎಚ್‌.ವಿ.ಬೆಳಗಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ