ಆ್ಯಪ್ನಗರ

ರಾಜ್ಯಮಟ್ಟದ ವಚನ ಗಾಯನ ಸ್ಪರ್ಧೆ ಆ.27ಕ್ಕೆ

ಧಾರವಾಡ : ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ(ರಿ) ಟ್ರಸ್ಟ್‌ನಿಂದ ಹಿಂದೂಸ್ತಾನಿ ಗಾಯನ ಶೈಲಿಯ ರಾಜ್ಯಮಟ್ಟದ ವಚನ ಗಾಯನ ಸ್ಪರ್ಧೆ ಆ.27 ರಂದು ನಗರದ ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ(ರಿ) ಟ್ರಸ್ಟ್‌ನಲ್ಲಿ ನಡೆಯಲಿದೆ.

Vijaya Karnataka 24 Jul 2019, 5:00 am
ಧಾರವಾಡ : ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ(ರಿ) ಟ್ರಸ್ಟ್‌ನಿಂದ ಹಿಂದೂಸ್ತಾನಿ ಗಾಯನ ಶೈಲಿಯ ರಾಜ್ಯಮಟ್ಟದ ವಚನ ಗಾಯನ ಸ್ಪರ್ಧೆ ಆ.27 ರಂದು ನಗರದ ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ(ರಿ) ಟ್ರಸ್ಟ್‌ನಲ್ಲಿ ನಡೆಯಲಿದೆ.
Vijaya Karnataka Web state level vocal vocal competition
ರಾಜ್ಯಮಟ್ಟದ ವಚನ ಗಾಯನ ಸ್ಪರ್ಧೆ ಆ.27ಕ್ಕೆ


ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಸ್ಪರ್ಧೆ ನಿಯಮಗಳು: ಸ್ಪರ್ಧಾಳುಗಳು 12ನೇ ಶತಮಾನದ ಶರಣರ ವಚನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಎರಡು ವಚನಗಳನ್ನು ಪ್ರಸ್ತುತ ಪಡಿಸಲು 10 ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. 15 ರಿಂದ 21 ವರ್ಷದವರೆಗಿನ ವಯೋಮಿತಿಯ ಸ್ಪರ್ಧಾರ್ಥಿಗಳು ಭಾಗವಹಿಸಬಹುದು.

ಸಾಹಿತ್ಯ ಸ್ಪಷ್ಟತೆ ಮತ್ತು ವೇದಿಕೆಯಲ್ಲಿ ಗೌರವಯುತ ವೇಷಭೂಷಣದಲ್ಲಿರಬೇಕು. ನೋಂದಣಿ ಶುಲ್ಕ 100 ರೂ. ಇದ್ದು, ಆಧಾರ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸಬುಕ್‌ ಪ್ರತಿ ತರಬೇಕು. ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನ 5000 ರೂ., ದ್ವಿತೀಯ ಬಹುಮಾನ 4000 ರೂ., ತೃತೀಯ ಬಹುಮಾನ 3000 ರೂ. ನೀಡಲಾಗುವುದು.

ಮಾಹಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ, ದೂ: 0836-2442909 ಸಂಪರ್ಕಿಸಬಹುದು ಎಂದು ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ