ಆ್ಯಪ್ನಗರ

ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ: ತೊಲಗಿ

ಅಳ್ನಾವರ : ನೂತನ ತಾಲೂಕು ಕೇಂದ್ರ ಆದ ನಂತರ ನಡೆದ ಪ್ರಥಮ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಸದಸ್ಯರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಲಾನಾ ತಯಬ್‌ ತೊಲಗಿ ಹೇಳಿದರು.

Vijaya Karnataka 20 Jun 2019, 5:00 am
ಅಳ್ನಾವರ : ನೂತನ ತಾಲೂಕು ಕೇಂದ್ರ ಆದ ನಂತರ ನಡೆದ ಪ್ರಥಮ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಸದಸ್ಯರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಲಾನಾ ತಯಬ್‌ ತೊಲಗಿ ಹೇಳಿದರು.
Vijaya Karnataka Web strive for the development of the town
ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ: ತೊಲಗಿ


ಇಲ್ಲಿನ ಅಮೃತ ನಗರ ಬಡಾವಣೆಯಲ್ಲಿ ಹಮ್ಮಿಕೊಂಡ ಪಟ್ಟಣ ಪಂಚಾಯಿತಿ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ವಾರ್ಡ್‌ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜನಪ್ರತಿನಿಧಿಗಳು ತಮ್ಮ ಕಾರ್ಯ ವೈಖರಿಯಿಂದ ಜನರ ಮನ್ನಣೆ ಗಳಿಸಬೇಕು ಎಂದರು.

ಸದಸ್ಯ ನದೀಮ ಕಂಟ್ರ್ಯಾಕ್ಟರ ಮಾತನಾಡಿ, ನಾಗರಿಕ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಜನರ ಸೇವೆಗಾಗಿ ಹಗಲಿರುಳು ದುಡಿಯುವದರ ಜತೆಗೆ. ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಮೂಲ ಸೌಲಭ್ಯ ಒದಗಿಸಲು ಸರ್ವ ಸದಸ್ಯರ ಸಹಕಾರದೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಜೈಲಾನಿ ಸುದರ್ಜಿ, ಸುನಂದಾ ಕಲ್ಲು, ಪೆದ್ದರಾಜಾ ಯಲಕಪಾಟಿ ,ಗೋರಿ ಅವರನ್ನು ಸತ್ಕರಿಸಲಾಯಿತು. ಮುಖ್ಯ ಅಥಿತಿಯಾಗಿ ಹಳಿಯಾಳದಿಂದ ಆಗಮಿಸಿದ ಅಲ್ಪ ಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಎ.ಎಸ್‌. ದಲಾಲ ಹಾಗೂ ಹಳಿಯಾಳ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸುಬಾನಿ ಬಾಗವಾನ ಅವರನ್ನು ಸನ್ಮಾನಿಸಲಾಯಿತು.

ನಬಿಸಾಬ ಮುಜಾವರ, ಅಸ್ಪಾಕ ಮಕಾನದಾರ, ಉಮ್ರಾನ ಬೇಪಾರಿ, ಇಫ್ರಾನ ಬಾಗವಾನ, ಶರೀಫ್‌ ಕರಚಕೊಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ