ಆ್ಯಪ್ನಗರ

ಕನ್ನಡ ನಾಡು ನುಡಿ ಉಳಿವಿಗೆ ಶ್ರಮಿಸಿ

ಹುಬ್ಬಳ್ಳಿ: ನೈರುತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ನೈರುತ್ಯ ರೈಲ್ವೆಯ ಶತಾಬ್ದಿ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ನೈರುತ್ಯ ರೈಲ್ವೆ ಉಪ ಮುಖ್ಯ ವಾಣಿಜ್ಯ ಪ್ರಬಂಧಕ ಕೆ.ವಿ.ಗೋಪಿನಾಥ ಮಾತನಾಡಿ, ಹಂಚಿಹೋಗಿದ್ದ ಕರ್ನಾಟಕವನ್ನು 1956 ರಲ್ಲಿಏಕೀಕರಣಗೋಳಿಸಿ ಕನ್ನಡ

Vijaya Karnataka 30 Nov 2019, 5:00 am
ಹುಬ್ಬಳ್ಳಿ: ನೈರುತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ನೈರುತ್ಯ ರೈಲ್ವೆಯ ಶತಾಬ್ದಿ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
Vijaya Karnataka Web strive for the survival of kannada nadu
ಕನ್ನಡ ನಾಡು ನುಡಿ ಉಳಿವಿಗೆ ಶ್ರಮಿಸಿ

ನೈರುತ್ಯ ರೈಲ್ವೆ ಉಪ ಮುಖ್ಯ ವಾಣಿಜ್ಯ ಪ್ರಬಂಧಕ ಕೆ.ವಿ.ಗೋಪಿನಾಥ ಮಾತನಾಡಿ, ಹಂಚಿಹೋಗಿದ್ದ ಕರ್ನಾಟಕವನ್ನು 1956 ರಲ್ಲಿಏಕೀಕರಣಗೋಳಿಸಿ ಕನ್ನಡ ನಾಡುನುಡಿ ಉಳಿಯಲು ಹಲವಾರು ಕನ್ನಡ ಹೋರಾಟಗಾರರು ಮಾರ್ಗದರ್ಶನವೇ ಇಂದಿನ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಕಾರಣ. ಆದ್ದರಿಂದ ಎಲ್ಲರೂ ಕನ್ನಡ ನಾಡು ನುಡಿ ಉಳಿವಿಗೆ ಶ್ರಮಿಸಬೇಕು ಎಂದರು.

ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಭಾಷೆಯ ಕುರಿತು ನಮ್ಮ ಮನಸ್ಸನ್ನು ಬತ್ತಿಯನ್ನಾಗಿಸಿ ಕನ್ನಡ ಸಾಹಿತ್ಯ, ಸಂಸ್ಕ್ರತಿ, ಪರಂಪರೆ ಎಂಬ ಎಣ್ಣೆಯನ್ನು ಹಾಕಿದಾಗ ಹತ್ತುವ ಜ್ಯೋತಿ ಪ್ರಕಾಶಮಾನವಾಗಿ ನಮ್ಮ ಬಾಳನ್ನು ಬೆಳಗುತ್ತದೆ. ಅದೇ ರೀತಿ ಕನ್ನಡ ಪ್ರಜ್ಞೆ ನಮ್ಮ ಜ್ಞಾನವನ್ನು ಬೆಳಗುತ್ತದೆ ಎಂದು ಹೇಳಿದರು.

ಸಾಹಿತಿ ಪ್ರೊ.ಕೆ.ಎಸ್‌. ಕೌಜಲಗಿ ಮಾತನಾಡಿ, ಕನ್ನಡನಾಡಿನ ಇತಿಹಾಸ, ಏಕೀಕರಣದ ಹೋರಾಟದ ಹಾದಿ ಮತ್ತು ಕನ್ನಡನಾಡಿನ ಸಂಸ್ಕ್ರತಿ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸತ್ಯ ಪ್ರಕಾಶ ಶಾಸ್ತ್ರಿ, ನೈರುತ್ಯ ರೈಲ್ವೆ ಮಜ್ದೂರ ಯೂನಿಯನ ಪ್ರಧಾನ ಕಾರ್ಯದರ್ಶಿ ಎ.ಎಂ.ಡಿಕ್ರೋಜ್‌ ಇದ್ದರು. ಗುರು ಎಸ್‌.ಛಲವಾದಿ ಹಾಗೂ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ