ಆ್ಯಪ್ನಗರ

ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಡಾ.ಆರ್‌.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ವನಿಕೇತನ ಸಭಾಭವನದಲ್ಲಿಗುರುವಾರ ಕರ್ನಾಟಕ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಎಂಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.

Vijaya Karnataka 13 Oct 2019, 5:00 am
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಡಾ.ಆರ್‌.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ವನಿಕೇತನ ಸಭಾಭವನದಲ್ಲಿಗುರುವಾರ ಕರ್ನಾಟಕ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಎಂಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.
Vijaya Karnataka Web student welcome ceremony
ವಿದ್ಯಾರ್ಥಿಗಳ ಸ್ವಾಗತ ಸಮಾರಂಭ


ಉದ್ಘಾಟಕರಾಗಿ ಆಗಮಿಸಿದ್ದ ಕವಿವಿ ಪಂಪ ಅಧ್ಯಯನ ಕೇಂದ್ರ ಸಂಯೋಜಕ ಡಾ. ಶಾಂತಿನಾಥ ದಿಬ್ಬದ್‌ ಮಾತನಾಡಿ, ಸಮಾಜದಲ್ಲಿಹಲವು ಧರ್ಮಗಳು ಅಸ್ತಿತ್ವದಲ್ಲಿದ್ದರೂ ಅವುಗಳೆಲ್ಲಉಪನದಿಗಳಾಗಿ ಸೇರುವುದು ಸರೋವರವನ್ನು. ಪಂಪನ ಸ್ಥಳೀಯತೆ, ವೈಚಾರಿಕತೆ, ಧರ್ಮದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಪಂಪ ಭಾರತದ ಅನೇಕ ಪದ್ಯಗಳನ್ನು ಉಲ್ಲೇಖಿಸುತ್ತಾ ವರ್ತಮಾನದ ಸಾಹಿತ್ಯದ ಬಗೆಗೆ ಅವರು ಚರ್ಚಿಸಿದರು.

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ. ಪಂಡಿತ ಕೆ. ರಾಠೋಡ ಮಾತನಾಡಿ, ತಮಿಳುಗರಿಗೆ ತಮಿಳು ಸಾಹಿತ್ಯ ಉಪನಿಷತ್ತಾದರೆ, ಮರಾಠಿಗರಿಗೆ ಮರಾಠಿ ಸಾಹಿತ್ಯವು ಪಂಚಪ್ರಾಣವಾಗಿದೆ. ಈ ನಿಟ್ಟಿನಲ್ಲಿಕನ್ನಡಿಗರು ಕನ್ನಡ ಸಾಹಿತ್ಯವನ್ನು ಕಟ್ಟುವಲ್ಲಿಎಲ್ಲರೂ ಶ್ರಮಿಸಬೇಕು ಎಂದರು.

ಅಧ್ಯಯನ ಪೀಠದ ಅಧ್ಯಕ್ಷ ಡಾ.ರಾಜೇಂದ್ರ ನಾಯಕ ಮಾತನಾಡಿದರು. ಡಾ.ಕೆ.ಅನ್ಬನ್‌, ಡಾ.ಜೆ.ಎಂ.ನಾಗಯ್ಯ, ಕನ್ನಡ ಅಧ್ಯಯನ ಪೀಠದ ಎಲ್ಲಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು, ಸಂಶೋಧನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೈತ್ರಾ ಪ್ರಾರ್ಥಿಸಿದರು.ಕೇಮಣ್ಣ ನಿರೂಪಿಸಿದರು. ಶ್ರೀನಿವಾಸ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ