ಆ್ಯಪ್ನಗರ

ಬೇಸಿಗೆ ರಜಾ ದಿನಗಳು ಮಕ್ಕಳಿಗೆ ಶಿಕ್ಷೆಯಾಗದಿರಲಿ

ಧಾರವಾಡ : ಮಗು ಎಂದರೆ ಸೃಜನಶೀಲತೆ. ಪ್ರತಿ ಮಗು ನಿರಂತರ ಚಟುವಟಿಕೆಯೊಂದಿಗೆ ಕ್ರೀಯಾಶೀಲವಾಗಿ ಸದಾ ಹೊಸತನ ಹುಡುಕಾಟದಲ್ಲಿ ಇರುತ್ತದೆ ಎಂದು ವಿದುಷಿ ನಾಗರತ್ನಾ ಹಡಗಲಿ ಹೇಳಿದರು. ನಗರದ ಮಾಳಾಪೂರದಲ್ಲಿನ ಗುಬ್ಬಚ್ಚಿಗೂಡು ಶಾಲೆ¿å ಆವರಣದಲ್ಲಿ ನಡೆದ ಸೃಜನೋತ್ಸವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

Vijaya Karnataka 20 Mar 2019, 5:00 am
ಧಾರವಾಡ : ಮಗು ಎಂದರೆ ಸೃಜನಶೀಲತೆ. ಪ್ರತಿ ಮಗು ನಿರಂತರ ಚಟುವಟಿಕೆಯೊಂದಿಗೆ ಕ್ರೀಯಾಶೀಲವಾಗಿ ಸದಾ ಹೊಸತನ ಹುಡುಕಾಟದಲ್ಲಿ ಇರುತ್ತದೆ ಎಂದು ವಿದುಷಿ ನಾಗರತ್ನಾ ಹಡಗಲಿ ಹೇಳಿದರು. ನಗರದ ಮಾಳಾಪೂರದಲ್ಲಿನ ಗುಬ್ಬಚ್ಚಿಗೂಡು ಶಾಲೆ¿å ಆವರಣದಲ್ಲಿ ನಡೆದ ಸೃಜನೋತ್ಸವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
Vijaya Karnataka Web summer holidays should not be punished for children
ಬೇಸಿಗೆ ರಜಾ ದಿನಗಳು ಮಕ್ಕಳಿಗೆ ಶಿಕ್ಷೆಯಾಗದಿರಲಿ

ಮಕ್ಕಳ ಹೊಸತನದ ಹುಡುಕಾಟಕ್ಕೆ ಸೃಜನಶೀಲತೆಯ ಮೆರಗು ಕೊಟ್ಟು ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಬೇಸಿಗೆ ರಜಾದಿನಗಳು ಶಿಕ್ಷೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಅತಿಥಿಯಾಗಿ ಆಗಮಿಸಿದ್ದ ಪ್ರಕಾಶ ಬಾಳಿಕಾಯಿ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಗುರುತಿಸಲು ಮತ್ತು ಅಂತಹ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಲು ಈ ತರಹದ ಶಿಬಿರಗಳು ಅವಶ್ಯವಾಗಿವೆ ಎಂದರು.

ಎ.ಜಿ.ಸೊಲಗಿ ಮಾತನಾಡಿ, ಶಿಕ್ಷ ಕರಾದವರು ಪ್ರತಿಯೊಂದು ಮಗುವಿನ ಮನಸ್ಸನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮಕ್ಕಳಿಗೆ ಪಾಠಮಾಡಲು ಅರ್ಹರಾಗುತ್ತಾರೆ ಎಂದರು.

ನಾಗರಾಜ ಹಡಗಲಿ, ಶಾಲಾ ಆಡಳಿತಾಧಿಕಾರಿ ವಿಜಯಲಕ್ಷ್ಮಿ ಸುಭಾಂಜಿ, ಭಾರತಿ ಸಾಬಳೆ, ಪ್ರಗತಿ ಸಾಬಳೆ, ರೇಷ್ಮಾ ಮುಲ್ಲಾನವರ, ಗೀತಾ ಬೈಲವಾಡ, ಲತಾ ಹನಮನಹಳ್ಳಿ, ವಿಜಯಲಕ್ಷ್ಮಿ ಗೊಡಚಿಮಠ, ಜ್ಯೋತಿ ಜಾಧವ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಡಾ.ಎ.ಎಲ್‌.ದೇಸಾಯಿ ಸ್ವಾಗತಿಸಿದರು. ಲಕ್ಷ್ಮಿ ಜಾಧವ ನಿರೂಪಿಸಿದರು. ಶುಭಾ ಬಸ್ತವಾಡ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ