ಆ್ಯಪ್ನಗರ

ಡಿ.19 ರಂದು ಸೂಪರ್‌ ಸ್ಟಾರ್‌ ರೈತ ಪುರಸ್ಕಾರ

ಹುಬ್ಬಳ್ಳಿ: ದೇಶದ ಆಹಾರ ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿಕೃಷಿ ಕ್ಷೇತ್ರದ ಪಾತ್ರ ದೊಡ್ಡದು. ಈ ಯಶಸ್ವಿ ಕೃಷಿಯ ಹಿಂದೆ ಅನ್ನದಾತನ ಪರಿಶ್ರಮ ದೊಡ್ಡದಿದೆ. ಆತನ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿವಿಜಯ ಕರ್ನಾಟಕ ಸೂಪರ್‌ ಸ್ಟಾರ್‌ ರೈತ ಪುರಸ್ಕಾರ ಆಯೋಜಿಸಲಾಗುತ್ತಿದ್ದು, ಈ ಬಾರಿ 2ನೇ ಆವೃತ್ತಿ ಅಭಿಯಾನ ಈಧಿಗಾಧಿಗಲೇ ರಾಧಿಜ್ಯಾಧಿದ್ಯಂತ ಆರಂಭಗೊಂಡಿದೆ.

Vijaya Karnataka 17 Dec 2019, 5:00 am
ಹುಬ್ಬಳ್ಳಿ: ದೇಶದ ಆಹಾರ ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿಕೃಷಿ ಕ್ಷೇತ್ರದ ಪಾತ್ರ ದೊಡ್ಡದು. ಈ ಯಶಸ್ವಿ ಕೃಷಿಯ ಹಿಂದೆ ಅನ್ನದಾತನ ಪರಿಶ್ರಮ ದೊಡ್ಡದಿದೆ. ಆತನ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿವಿಜಯ ಕರ್ನಾಟಕ ಸೂಪರ್‌ ಸ್ಟಾರ್‌ ರೈತ ಪುರಸ್ಕಾರ ಆಯೋಜಿಸಲಾಗುತ್ತಿದ್ದು, ಈ ಬಾರಿ 2ನೇ ಆವೃತ್ತಿ ಅಭಿಯಾನ ಈಧಿಗಾಧಿಗಲೇ ರಾಧಿಜ್ಯಾಧಿದ್ಯಂತ ಆರಂಭಗೊಂಡಿದೆ.
Vijaya Karnataka Web SSR 2nd edition Logo


2018ರಲ್ಲಿಆರಂಭಿಸಿದ ಈ ಪುರಸ್ಕಾರ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಕೃಷಿ ಕ್ಷೇತ್ರದಲ್ಲಿವಿನೂತನ ಪದ್ಧತಿ, ಅವಿಸ್ಮರಣೀಯ ಸಾಧನೆ ಮಾಡಿ ಅನ್ನದಾತರಿಗೆ ಪ್ರೇರಣೆಯಾಗಿ ತೆರೆಮರೆಯಲ್ಲಿರುವ ರೈತರನ್ನು ಮುನ್ನೆಲೆಗೆ ತಂದು ಪುರಸ್ಕರಿಸುವುದೇ ಸೂಪರ್‌ ಸ್ಟಾರ್‌ ರೈತ ಕಾರ್ಯಕ್ರಮದ ಉದ್ದೇಶ. ಧಾರವಾಡ ಜಿಲ್ಲೆಯ ಸೂಪರ್‌ ಸ್ಟಾರ್‌ ಪುರಸ್ಕಾರ ಡಿ.19ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಆವರಣ, ವಿದ್ಯಾವರ್ಧಕ ಸಂಘದ ಮೂಜಗಂ ಸಭಾಭವನದಲ್ಲಿನಡೆಯಲಿದೆ.

ಉದ್ಘಾಟನೆ: ಡಿ.19ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಂ.ದೀಪಾ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ.ನಿಂಬಣ್ಣವರ, ಜಿಲ್ಲಾಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೇ ಕೆಂಪೇಗೌಡ ಪಾಟೀಲ್‌, ಸಮಾಜ ಸೇವಕ ಹಾಗೂ ಉದ್ಯಮಿ ಡಾ.ಸಿಎಚ್‌.ವಿ.ಎಸ್‌.ವಿ. ಪ್ರಸಾದ್‌, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಸಿ.ಸತೀಶ, ಅಂತಾರಾಷ್ಟ್ರೀಯ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಶರಣಪ್ಪ ಕೊಟಗಿ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ರಮೇಶ ಬಾಬು ಭಾಗವಹಿಸಲಿದ್ದಾರೆ.

ಯಾವಾಗ:
ಡಿ.19, ಗುರುವಾರ
ಸ್ಥಳ: ವಿದ್ಯಾವರ್ಧಕ ಸಂಘದ ಮೂಜಗಂ ಸಭಾಭವನ, ಮೂರುಸಾವಿರಮಠ, ಹುಬ್ಬಳ್ಳಿ
ಸಮಯ: ಬೆಳಗ್ಗೆ 10 ಗಂಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ