ಆ್ಯಪ್ನಗರ

ಆದೇಶ ಪಾಲಿಸದ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ಅಮಾನತು

ಧಾರವಾಡ : 2019- 20ರ ಸಾಲಿನ ಮುಂಗಾರು ಬೆಳೆ ಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವನ್ನು ತರ್ತುಗತಿಯಲ್ಲಿಪೂರ್ಣ ಗೊಳಿಸಲು ಕಲಘಟಗಿ ತಹಸೀಲ್ದಾರ ಅವರ ಮಾಡಿದ್ದ ಆದೇಶಕ್ಕೆ ವಿರುದ್ಧವಾಗಿ ನಡೆದಕೊಂಡು ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ಜಿಲ್ಲಾಧಿಕಾರಿ ಎಂ.ದೀಪಾ ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಆದೇಶ ಮಾಡಿದ್ದಾರೆ.

Vijaya Karnataka 20 Oct 2019, 5:00 am
ಧಾರವಾಡ : 2019- 20ರ ಸಾಲಿನ ಮುಂಗಾರು ಬೆಳೆ ಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವನ್ನು ತರ್ತುಗತಿಯಲ್ಲಿಪೂರ್ಣ ಗೊಳಿಸಲು ಕಲಘಟಗಿ ತಹಸೀಲ್ದಾರ ಅವರ ಮಾಡಿದ್ದ ಆದೇಶಕ್ಕೆ ವಿರುದ್ಧವಾಗಿ ನಡೆದಕೊಂಡು ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ಜಿಲ್ಲಾಧಿಕಾರಿ ಎಂ.ದೀಪಾ ಅವರು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಆದೇಶ ಮಾಡಿದ್ದಾರೆ.
Vijaya Karnataka Web suspicion of two grama lakkadhikari
ಆದೇಶ ಪಾಲಿಸದ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ಅಮಾನತು

ಕಲಘಟಗಿಯ ಗ್ರಾ.ಲೆ ಯೋಗೇಂದ್ರಕುಮಾರ ಮುದಕಣ್ಣವರ , ಬಿ.ಗುಡಿಹಾಳದ ಗ್ರಾ.ಲೆ ಶಿವುಕುಮಾರ ಲಮಾಣಿ ಅಮಾನತ್ತಾದ ಗ್ರಾಮಲೆಕ್ಕಾಧಿಗಳಾಗಿದ್ದಾರೆ. ಬೆಳೆಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವನ್ನು ಮಾಡದಂತೆ ತಮ್ಮ ಸಹೋದ್ಯೋಗಿಗಳಿಗೆ ಪ್ರಚೋದನೆ ನೀಡಿದ್ದಲ್ಲದೇ, ಕಲಘಟಗಿ ತಹಸೀಲ್ದಾರ ವಾಟ್‌ ಆ್ಯಪ್‌ ಗ್ರೂಪ್‌ನಿಂದ ಕಡ್ಡಾಯವಾಗ ಹೊರಬರುವಂತೆ ಎಲ್ಲಸಿಬ್ಬಂದಿಗೆ ಒತ್ತಾಯ ಮಾಡಿ ಸರಕಾರದ ಕೆಲಸಕ್ಕೆ ಹಿನ್ನೆಡೆ ಮಾಡಿದ ಹಿನ್ನೆಲೆ ಅಮಾನತು ಮಾಡಿ, ಕುಂದಗೋಳ ತಹಸೀಲ್ದಾರ ವ್ಯಾಪ್ತಿಗೆ ವರ್ಗಾಯಿಸಲಾಗಿದೆ.

ಅಲ್ಲದೇ ಈ ಗ್ರಾಮ ಲೆಕ್ಕಾಧಿಕಾರಿಗಳು ಕುಂದಗೋಳ ತಹಸೀಲ್ದಾರ ಅವರ ಪೂರ್ನಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ಬಿಟ್ಟು ಬೇರೆಡೆ ಹೋಗುವಂತಿಲ್ಲಎಂದು ಆದೇಶದಲ್ಲಿಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ