ಆ್ಯಪ್ನಗರ

ಸೂಕ್ತ ತನಿಖೆ ನಡೆಸಿ: ಚಿಕ್ಕುಂಬಿ

ಧಾರವಾಡ : ನಗರದ ಕೆಲಗೇರಿ ಬಳಿಯ ಬ್ಲಾಕ್‌ ನಂ.222/3ರ ಹಾಗೂ 222/4 ಜಮೀನುಗಳ ಭೂ ಪರಿವರ್ತನೆಯನ್ನು ಕಾನೂನು ಬಾಹಿರವಾಗಿ ಮಾಡಲಾಗಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಸಂತ್ರಸ್ತ ವಿಜಯಕುಮಾರ ಚಿಕ್ಕುಂಬಿ ಮನವಿ ಮಾಡಿದ್ದಾರೆ.

Vijaya Karnataka 14 Jan 2019, 5:00 am
ಧಾರವಾಡ : ನಗರದ ಕೆಲಗೇರಿ ಬಳಿಯ ಬ್ಲಾಕ್‌ ನಂ.222/3ರ ಹಾಗೂ 222/4 ಜಮೀನುಗಳ ಭೂ ಪರಿವರ್ತನೆಯನ್ನು ಕಾನೂನು ಬಾಹಿರವಾಗಿ ಮಾಡಲಾಗಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಸಂತ್ರಸ್ತ ವಿಜಯಕುಮಾರ ಚಿಕ್ಕುಂಬಿ ಮನವಿ ಮಾಡಿದ್ದಾರೆ.
Vijaya Karnataka Web take a proper investigation chikkumbi
ಸೂಕ್ತ ತನಿಖೆ ನಡೆಸಿ: ಚಿಕ್ಕುಂಬಿ


ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿವರ್ತನೆ ಬಗ್ಗೆ ಜಿಲ್ಲಾಧಿಕಾರಿ ದೀಪಾ ಎಂ. ಅವರಿಗೆ ನ್ಯಾಯ ನೀಡುವಂತೆ ಸೂಕ್ತ ದಾಖಲೆ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಅಲ್ಲದೇ ಭೂ ಪರಿವರ್ತನೆ ರದ್ದತಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ ಎಂದು ದೂರಿದ್ದಾರೆ.

ಭೂ ಪರಿವರ್ತನೆ ಮಾಡುವಾಗ 12 ರಿಂದ 13 ನಿಯಮಗಳು ಇರುತ್ತವೇ. ಅವುಗಳನ್ನು ಪರಿಗಣಿಸದೇ ಭೂ ಪರಿವರ್ತನೆ ಮಾಡಲಾಗಿದೆ. ಅಲ್ಲದೇ ಭೂ ಮಾಲೀಕರು ನನ್ನ ಹಕ್ಕು ಇರುವ ಜಮೀನಿನಲ್ಲಿ ಅನ್ಯಾಯ ಮಾಡಿದ್ದು ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಆರೋಪಿದರು.

ಈಗಾಗಲೇ ಈ ಬಗ್ಗೆ ಲೋಕಾಯುಕ್ತಕ್ಕೆ ದೂರ ನೀಡಿದ್ದೇನೆ. ದೂರಿನಲ್ಲಿ ಭೂ ಮಾಲೀಕರ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಆದೇಶ ರದ್ದುಪಡಿಸಿ ಸೂಕ್ತ ನ್ಯಾಯ ನೀಡುವಂತೆ ತಿಳಿಸಿದ್ದೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ