ಆ್ಯಪ್ನಗರ

ಧೈರ್ಯದಿಂದ ಸವಾಲು ಎದುರಿಸಿ

ಧಾರವಾಡ : ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಗೆ ಸರಿಸಾಟಿಯಾಗಿ ನಿಲ್ಲಬೇಕಾದರೆ ಕಲಿಕಾ ಪದ್ದತಿಯಲ್ಲಿ ಹಾಗೂ ಪಠ್ಯದಲ್ಲಿ ಪರಿಷ್ಕ್ರರಣೆಯ ಅಗತ್ಯ ಬಹಳವಿದೆ ಎಂದು ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್‌.ಆರ್‌.ಬಿರಾದಾರ ಹೇಳಿದರು.

Vijaya Karnataka 21 Jul 2019, 5:00 am
ಧಾರವಾಡ : ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಗೆ ಸರಿಸಾಟಿಯಾಗಿ ನಿಲ್ಲಬೇಕಾದರೆ ಕಲಿಕಾ ಪದ್ದತಿಯಲ್ಲಿ ಹಾಗೂ ಪಠ್ಯದಲ್ಲಿ ಪರಿಷ್ಕ್ರರಣೆಯ ಅಗತ್ಯ ಬಹಳವಿದೆ ಎಂದು ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್‌.ಆರ್‌.ಬಿರಾದಾರ ಹೇಳಿದರು.
Vijaya Karnataka Web take on the challenge with courage
ಧೈರ್ಯದಿಂದ ಸವಾಲು ಎದುರಿಸಿ


ನಗರದ ಕೆಎಲ್‌ಇ ಶ್ರೀ ಮೃತ್ಯುಂಜಯ ಕಲಾ ವಾಣಿಜ್ಯ ಹಾಗೂ ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ಕೇಂದ್ರದಲ್ಲಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ, ಕವಿವಿ ಅರ್ಥಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಅರ್ಥಶಾಸ್ತ್ರ ಪ್ರಾಧ್ಯಾಪಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಬಿಎ ಪ್ರಥಮ ಸೆಮಿಸ್ಟರನ ಅರ್ಥಶಾಸ್ತ್ರ ವಿಷಯ ಪರಿಷ್ಕ್ರತ ಪಠ್ಯಕ್ರಮದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಪಠ್ಯಕ್ರಮ ಪರಿಷ್ಕ್ರರಣೆಯ ಸಂದರ್ಭದಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಸ್ತುತ ವಿಷಯ ಅದರಲ್ಲಿ ಅಳವಡಿಸಿ ವಿದ್ಯಾರ್ಥಿಗಳ ಜ್ಞಾನ ಕ್ಷೀತಿಜ ಹೆಚ್ಚಿಸಬೇಕಾಗಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಪ್ರೊ.ವಿ.ವಿ.ಪಾಟೀಲ ಮಾತನಾಡಿ, ಅರ್ಥಶಾಸ್ತ್ರ ಅಧ್ಯಯನ ಇಂದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಮಹತ್ವದ ಸ್ಥಾನ ಪಡೆಯುತ್ತಲಿದೆ. ಶಿಕ್ಷ ಕರು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವ ಹಾಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕೆಂದು ಹೇಳಿದರು.

ಡಾ.ಎಸ್‌.ಟಿ.ಬಾಗಲಕೋಟಿ ಸೂಕ್ಷ ್ಮ ಅರ್ಥಶಾಸ್ತ್ರ, ಎಸ್‌.ಬಿ.ನಾರಿ ಸಮಗ್ರ ಅರ್ಥಶಾಸ್ತ್ರ ಕುರಿತು ವಿಷಯ ಸಾದರಪಡಿಸಿದರು. ಡಾ.ಎಲ್‌.ಆರ್‌.ಅಂಗಡಿ, ಡಾ.ಬಿ.ಎ.ಬೆಳವಟಗಿ, ಡಾ.ಎಂ.ಎನ್‌.ಕಾಮನಳ್ಳಿ, ಡಾ.ಉಜ್ಜಯನಿಮಠ, ಡಾ.ಎಸ್‌.ಎ.ಮುಳಗುಂದ, ಡಾ.ಬಿ.ಎಸ್‌.ನರೇಗಲ್‌ ಹಾಗೂ ಸುಮಾರು 100ಕ್ಕೂ ಹೆಚ್ಚು ಮಹಾವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಪ್ರೊ.ವಿದ್ಯಾ ಭಟ್‌ ನಿರ್ವಹಿಸಿದರು. ಪ್ರೊ.ಎಸ್‌.ಎಸ್‌.ಸಂಗೋಳ್ಳಿ ಹಾಗೂ ಡಾ.ಶಿಲ್ಪಾ ದಾನಪ್ಪನವರ ನಿರೂಪಿಸಿದರು. ಡಾ.ಎಂ.ಪಿ.ಅನುರಾಧಾ ಸ್ವಾಗತಿಸಿದರು. ಡಾ.ನೀಲಕ್ಕ ಸಿ.ಪಾಟೀಲ ಪರಿಚಯಿಸಿದರು. ಡಾ.ಸಿ.ಎಚ್‌.ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ