Please enable javascript.ಸಮಾಜ, ರಾಜ್ಯದ ಪ್ರಗತಿಗೆ ಸಮಯ ಮೀಸಲಿಡಿ - take time for social and state progress - Vijay Karnataka

ಸಮಾಜ, ರಾಜ್ಯದ ಪ್ರಗತಿಗೆ ಸಮಯ ಮೀಸಲಿಡಿ

Vijaya Karnataka 3 Jun 2019, 5:00 am
Subscribe

ಹುಬ್ಬಳ್ಳಿ : ಸಂಸದರಾಗಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಈ ಹಿಂದೆ ಶ್ರಮಿಸಿದಂತೆ ಸಚಿವರಾಗಿಯೂ ಅದನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೆ ಮಂತ್ರಿ ಎಂಬ ಗಾಂಭೀರ್ಯ ಹೆಚ್ಚಿಸಿಕೊಳ್ಳದೇ ಶ್ರೀಸಾಮಾನ್ಯರೊಂದಿಗೆ ಬೆರೆಯಬೇಕು ಎಂದು ಆರ್‌ಎಸ್‌ಎಸ್‌ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ತಾಕೀತು ಮಾಡಿದರು.

DRW-2JOSHI23
ಹುಬ್ಬಳ್ಳಿಯಲ್ಲಿ ಆರ್‌ಆರ್‌ಎಸ್‌ ಪ್ರಾಂತ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ನಡೆದ ಬೈಠಕ್‌ನಲ್ಲಿ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿದರು.
ಹುಬ್ಬಳ್ಳಿ : ಸಂಸದರಾಗಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಈ ಹಿಂದೆ ಶ್ರಮಿಸಿದಂತೆ ಸಚಿವರಾಗಿಯೂ ಅದನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೆ ಮಂತ್ರಿ ಎಂಬ ಗಾಂಭೀರ್ಯ ಹೆಚ್ಚಿಸಿಕೊಳ್ಳದೇ ಶ್ರೀಸಾಮಾನ್ಯರೊಂದಿಗೆ ಬೆರೆಯಬೇಕು ಎಂದು ಆರ್‌ಎಸ್‌ಎಸ್‌ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ತಾಕೀತು ಮಾಡಿದರು.

ಇಲ್ಲಿಯ ಆರ್‌ಎಸ್‌ಎಸ್‌ ಪ್ರಾಂತ ಕಚೇರಿ ಕೇಶವ ಕುಂಜಕ್ಕೆ ಆಗಮಿಸಿದ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭಾನುವಾರ ಸ್ವಾಗತಿಸಿದ ಕಾಗವಾಡ ಅವರು, ಸಚಿವರಿಗೆ ಕೆಲ ಹಿತವಚನಗಳನ್ನು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಜನತೆ ಜವಾಬ್ದಾರಿ ಹೆಚ್ಚಿಸಿದಂತೆ, ನಿಮ್ಮ ಮೇಲೆಯೂ ನೂರರಷ್ಟು ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸಮಯವನ್ನು ಸಮಾಜ ಮತ್ತು ರಾಜ್ಯದ ಒಟ್ಟು ಬೆಳವಣಿಗೆಗೆ ಮೀಸಲಿಡಬೇಕೆಂದು ಸಲಹೆ ನೀಡಿದರು.

ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಸಚಿವರು ಕೈಗೊಳ್ಳುವ ಎಲ್ಲ ಒಳ್ಳೆಯ ಕಾರ್ಯಗಳಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಭರವಸೆ ನೀಡಿದರು.

ಸಾಮಾನ್ಯ ಸ್ವಯಂ ಸೇವಕರಾಗಿ ಶಾಖೆಗೆ ಬರಲು ಪ್ರಾರಂಭಿಸಿದ ಪ್ರಹ್ಲಾದ ಜೋಶಿ ಅವರು ಸಂಘ ನೀಡಿದ ಸಂಸ್ಕಾರ, ಶಿಕ್ಷಣದ ಪರಿಣಾಮದ ಜತೆಗೆ ಸ್ವ ಪರಿಶ್ರಮದೊಂದಿಗೆ ಕೇಂದ್ರದ ಮಂತ್ರಿಯಾಗಿದ್ದಾರೆ. ಇದು ಹು-ಧಾ ಸ್ವಯಂ ಸೇವಕರು ಮತ್ತು ಉತ್ತರ ಕರ್ನಾಟಕ ಸ್ವಯಂ ಸೇವಕರು ಅಭಿಮಾನ ಪಡುವ ಸಂಗತಿ. ಇದನ್ನು ಅನೇಕ ಸ್ವಯಂ ಸೇವಕರು ಸಂಭ್ರಮಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಾಂತ ಪ್ರಚಾರಕ ಸುಧಾಕರ, ಸಹ ಪ್ರಾಂತ ಕಾರ್ಯವಾಹ ಶ್ರೀಧರ ನಾಡಿಗೇರ, ಹು-ಧಾ ಸಂಘ ಚಾಲಕರು ಶಿವಾನಂದ ಅವಟಿ, ಸಹ ಸಂಘ ಚಾಲಕರು ಗೋವಿಂದಪ್ಪ ಗೌಡಪ್ಪಗೋಳ, ಜಯತೀರ್ಥ ಕಟ್ಟಿ, ಸುಧೀರ ಸರಾಫ್‌, ಮಹೇಶ ಟೆಂಗಿನಕಾಯಿ, ಶಿವು ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ