ಆ್ಯಪ್ನಗರ

ಮಕ್ಕಳಿಗೆ ಮಾತೃಭಾಷೆ ಕಲಿಸಿ:ಸಿದ್ದಾಂತಿ

ಹುಬ್ಬಳ್ಳಿ : ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಮತ್ತು ಗಣಿತ ವಿಷಯ ಪರಿಪೂರ್ಣವಾಗಿ ಕಲಿಸಬೇಕು. 7ನೇ ತರಗತಿವರೆಗೆ ಈ ಎರಡು ವಿಷಯ ಮಕ್ಕಳು ಪರಿಪೂರ್ಣವಾಗಿ ಕಲಿತ ನಂತರ ವಿಜ್ಞಾನ ಮತ್ತ ಇತರ ವಿಷಯ ಸುಲಭ ಗ್ರಹಿಸುವ ಜ್ಞಾನ ಪಡೆಯುತ್ತಾರೆ ಎಂದು ಶಿಕ್ಷಣ ತಜ್ಞ ಮೋಹನ್‌ ಸಿದ್ಧಾಂತಿ ಹೇಳಿದರು.

Vijaya Karnataka 24 Jun 2019, 5:00 am
ಹುಬ್ಬಳ್ಳಿ : ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಮತ್ತು ಗಣಿತ ವಿಷಯ ಪರಿಪೂರ್ಣವಾಗಿ ಕಲಿಸಬೇಕು. 7ನೇ ತರಗತಿವರೆಗೆ ಈ ಎರಡು ವಿಷಯ ಮಕ್ಕಳು ಪರಿಪೂರ್ಣವಾಗಿ ಕಲಿತ ನಂತರ ವಿಜ್ಞಾನ ಮತ್ತ ಇತರ ವಿಷಯ ಸುಲಭ ಗ್ರಹಿಸುವ ಜ್ಞಾನ ಪಡೆಯುತ್ತಾರೆ ಎಂದು ಶಿಕ್ಷಣ ತಜ್ಞ ಮೋಹನ್‌ ಸಿದ್ಧಾಂತಿ ಹೇಳಿದರು.
Vijaya Karnataka Web DRW-23 NADAF 2
ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) ಕುರಿತು ಚಿಂಥನ ಮಂಥನ ದುಂಡು ಮೇಜಿನ ಸಭೆಯಲ್ಲಿ ಶಿಕ್ಷಣ ತಜ್ಞರು ಸಲಹೆ ನೀಡಿದರು.


ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) ಕುರಿತು ಚಿಂಥನ ಮಂಥನ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು. ಬೋಧನಾ ಮಾಧ್ಯಮ ಮಾತೃಭಾಷೆಯಲ್ಲಿದ್ದರೆ ಮಾತ್ರ ಮಕ್ಕಳಿಗೆ ವಿಷಯ ಗ್ರಹಿಸಲು ಅನುಕೂಲವಾಗುತ್ತದೆ. ಶಿಕ್ಷಣದಲ್ಲಿ ಕೌಶಲವಿರಬೇಕು ಎಂದು ಹೇಳಿದರು.

ಸಿಎಂಡಿಆರ್‌ ನಿರ್ದೇಶಕ ವಿನೋದ ಅಣ್ಣಿಗೇರಿ ಮಾತನಾಡಿ, ದೇಶದಲ್ಲಿ ಶಿಕ್ಷಣಕ್ಕಾಗಿ ಜಿಡಿಪಿಯ ಶೇ.6ರಷ್ಟು ಹಣ ಖರ್ಚು ಮಾಡಲಾಗುತ್ತದೆ. ಶಿಕ್ಷಣ ವ್ಯವಸ್ಥೆಯ ಯೋಜನೆ ಮತ್ತು ಹಣಕಾಸಿನ ನಡುವೆ ಸರಿಯಾದ ಹೊಂದಾಣಿಕ ಇರಬೇಕಿದೆ. ಶಿಕ್ಷಣಕ್ಕಾಗಿ ಮಾಡುವ ವೆಚ್ಚ ಸರಿಯಾಗಿ ಪರಿಗಣಿಸಲಾಗುತ್ತಿಲ್ಲ.ರಾಷ್ಟ್ರೀಯ ಶಿಕ್ಷಣ ಖಾತೆ ಪ್ರಾರಂಭಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕ ಕಾನೂನು ವಿವಿ ಉಪಕುಲಪತಿ ಪ್ರೊ.ಈಶ್ವರ ಭಟ್‌ ಮಾತನಾಡಿ, ಕರಡು ಎನ್‌ಇಪಿ ವೈಜ್ಞಾನಿಕವಾಗಿ ಭಾರತೀಯ ಶಿಕ್ಷಣ ಪದ್ದತಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಕಾನೂನು ಶಿಕ್ಷಣಕ್ಕಾಗಿ ದ್ವಿಭಾಷಾ ಶಿಕ್ಷಣದ ಕಲ್ಪನೆ ಇರುವುದು ಅಗತ್ಯ ಎಂದರು.

ಐಎಂಎಸ್‌ಆರ್‌ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರಸಾದ್‌ ರೂಡಗಿ, ಶಿಕ್ಷಣ ತಜ್ಞ ಪಟಗುಂಡಿ, ಪ್ರೊ.ಬಿ.ಎಚ್‌. ನಾಗೂರ್‌,

ಮೋಹನ್‌ ಲಿಂಬಿಕಾಯಿ, ಹೊಸ ಶಿಕ್ಷಣ ನೀತಿ 2019ರ ಕರಡನ್ನು ಸ್ವಾಗತಿಸಿದರು. ಮಾಧ್ಯಮಿಕ ಶಿಕ್ಷಕ ಸಂಘ ಅಧ್ಯಕ್ಷ ಸಂದೀಪ ಬೂದಿಹಾಳ, ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷ ಡಾ.ರಘು ಅಕಮಂಚಿ, ಉಪಾಧ್ಯಕ್ಷ ಡಾ.ಗುರುನಾಥ ಬಡಿಗೇರ, ಸಂಯೋಜಕ ಡಾ.ಪ್ರಸನ್ನ ಫಂಡರಿ ಸೇರಿದಂತೆ ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ