ಆ್ಯಪ್ನಗರ

ನಿಗದಿತ ವೇಳಾಪಟ್ಟಿಯಂತೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

ಧಾರವಾಡ : ಪ್ರಾಥಮಿಕ ಶಾಲಾ ಸಹ ಶಿಕ್ಷ ಕ ವೃಂದದ ಘಟಕದ ಹೊರಗಿನ (ಔಟ್‌ ಆಫ್‌ ಯುನಿಟ್‌) ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತರು ನಿಗದಿಗೊಳಿಸುವ ವೇಳಾಪಟ್ಟಿಗೆ ಅನುಗುಣವಾಗಿ ಕೌನ್ಸೆಲಿಂಗ್‌ ನಡೆಸಲಾಗುವುದು.

Vijaya Karnataka 16 Aug 2019, 8:06 pm
ಧಾರವಾಡ : ಪ್ರಾಥಮಿಕ ಶಾಲಾ ಸಹ ಶಿಕ್ಷ ಕ ವೃಂದದ ಘಟಕದ ಹೊರಗಿನ (ಔಟ್‌ ಆಫ್‌ ಯುನಿಟ್‌) ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತರು ನಿಗದಿಗೊಳಿಸುವ ವೇಳಾಪಟ್ಟಿಗೆ ಅನುಗುಣವಾಗಿ ಕೌನ್ಸೆಲಿಂಗ್‌ ನಡೆಸಲಾಗುವುದು.
Vijaya Karnataka Web teacher transfer counseling as scheduled
ನಿಗದಿತ ವೇಳಾಪಟ್ಟಿಯಂತೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌


ಶಿಕ್ಷ ಕರ ಆದ್ಯತಾ ಪಟ್ಟಿಯಲ್ಲಿಯ ಸಂಖ್ಯೆಗೆ ಅನುಗುಣವಾಗಿ ಕೌನ್ಸೆಲಿಂಗ್‌ಗೆ ಹಾಜರಾಗಬೇಕಾದ ಶಿಕ್ಷ ಕ-ಶಿಕ್ಷ ಕಿಯರು ಕೌನ್ಸೆಲಿಂಗ್‌ ವೇಳಾಪಟ್ಟಿ ಕುರಿತಂತೆ ಶಿಕ್ಷ ಣ ಇಲಾಖೆಯ ಅಧಿಕೃತ ಜಾಲತಾಣ ಡಿಡಿಡಿ.s್ಚhಟಟ್ಝಛಿd್ಠ್ಚaಠಿಜಿಟ್ಞ.ka್ಟ.್ಞಜ್ಚಿ.ಜ್ಞಿ ಗೆ ನಿತ್ಯವೂ ಭೇಟಿ ನೀಡಿ ತಮ್ಮ ಕೌನ್ಸೆಲಿಂಗ್‌ ದಿನಾಂಕಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇಲ್ಲಿಯ ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಣದ ಸಹ ನಿರ್ದೇಶಕ ಹಾಗೂ ವರ್ಗಾವಣೆ ಪ್ರಾಧಿಕಾರಿ ಡಾ.ಬಿ.ಕೆ.ಎಸ್‌. ವರ್ಧನ್‌ ಸೂಚಿಸಿದ್ದಾರೆ.

ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಚಿಕ್ಕೋಡಿ ಹಾಗೂ ಶಿರಸಿ ಜಿಲ್ಲೆಗಳ ಶಿಕ್ಷ ಕ-ಶಿಕ್ಷ ಕಿಯರು ಕೌನ್ಸೆಲಿಂಗ್‌ಗೆ ಹಾಜರಾಗುವಾಗ ತಮ್ಮ ಫೋಟೊ ಸಹಿತ ಸಕ್ಷ ಮ ಪ್ರಾಧಿಕಾರಿಯಿಂದ ಪಡೆದ ಸೇವಾ ದೃಢೀಕರಣ ಪತ್ರ, ನೇಮಕಾತಿ ಆದೇಶ ಪತ್ರ, ಕಾಯಂ ಪೂರ್ವ ಸೇವಾ ಅವಧಿ ಘೋಷಣಾ ಪತ್ರ, ತಮ್ಮ ಸೇವಾ ಅವಧಿಯಲ್ಲಿ ಈಗಾಗಲೇ ಎಷ್ಟು ಬಾರಿ ವರ್ಗಾವಣೆಗೊಂಡಿರುವರೋ ಆ ಎಲ್ಲಾ ವರ್ಗಾವಣೆಗಳ ಆದೇಶ ಪ್ರತಿಗಳು ಅಥವಾ ಸೇವಾ ಪುಸ್ತಕದ ಝರಾಕ್ಸ್‌ ಪ್ರತಿ ಹಾಗೂ ವರ್ಗಾವಣೆಯಲ್ಲಿ ಆದ್ಯತೆ ಕೋರಿರುವ ಶಿಕ್ಷ ಕ-ಶಿಕ್ಷ ಕಿಯರು ತಮ್ಮ ಆದ್ಯತೆಗೆ ನಿಗದಿಪಡಿಸಿರುವ ಪ್ರಮಾಣಪತ್ರಗಳ ಮೂಲಪ್ರತಿಗಳನ್ನು ಕಡ್ಡಾಯವಾಗಿ ಕೌನ್ಸೆಲಿಂಗ್‌ ವೇಳೆ ಪರಿಶೀಲನೆಗೆ ತರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ