ಆ್ಯಪ್ನಗರ

‘ತಲಾಷ್‌’ ಸಾಮಾಜಿಕ ನಾಟಕ ಪ್ರದರ್ಶನ ಇಂದು

ಹುಬ್ಬಳ್ಳಿ : ದಿವಂಗತ ರಮೇಶಗೌಡ ರೆಡ್ಡಿ ಅವರ ಸ್ಮರಣಾರ್ಥ ಜೀವಿ ಕಲಾ ಬಳಗ ವತಿಯಿಂದ ಸೋಮು ರೆಡ್ಡಿ ವಿರಚಿತ 'ತಲಾಷ್‌' ಎಂಬ ಸಾಮಾಜಿಕ ನಾಟಕವು ಆ.25ರಂದು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

Vijaya Karnataka 25 Aug 2019, 5:00 am
ಹುಬ್ಬಳ್ಳಿ : ದಿವಂಗತ ರಮೇಶಗೌಡ ರೆಡ್ಡಿ ಅವರ ಸ್ಮರಣಾರ್ಥ ಜೀವಿ ಕಲಾ ಬಳಗ ವತಿಯಿಂದ ಸೋಮು ರೆಡ್ಡಿ ವಿರಚಿತ 'ತಲಾಷ್‌' ಎಂಬ ಸಾಮಾಜಿಕ ನಾಟಕವು ಆ.25ರಂದು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
Vijaya Karnataka Web thalashs social drama show today
‘ತಲಾಷ್‌’ ಸಾಮಾಜಿಕ ನಾಟಕ ಪ್ರದರ್ಶನ ಇಂದು


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಟಕ ರಚನಕಾರ ಸೋಮು ರೆಡ್ಡಿ, ಆಮಿಷಕ್ಕೊಳಗಾದ ವ್ಯಕ್ತಿ ಯಾವ ಸ್ತರಕ್ಕೆ ಇಳಿಯಬಹುದು. ಸಮಾಜಕ್ಕೆ ಅಂಟಿರುವ ಪಿಡುಗಗಳ ಅನಾವರಣವೇ ತಲಾಷ್‌ ನಾಟಕದ ಪ್ರಮುಖ ಕಥೆ. 25ರಂದು ಮಧ್ಯಾಹ್ನ 3 ಮತ್ತು ಸಂಜೆ 6ಗಂಟೆಗೆ ಎರಡು ಪ್ರದರ್ಶನ ಗೊಳ್ಳಲಿದೆ ಎಂದರು.

ನಿದೇರ್ಶಕ ಗದಿಗೆಯ್ಯಹಿರೇಮಠ ಮಾತನಾಡಿ, ಈ ನಾಟಕವು ಸಮಾಜದ ವಿವಿಧ ಸ್ತರದಲ್ಲಿ ಸೇವೆ ಸಲ್ಲಿಸುವ ಕಲಾಸಕ್ತರನ್ನೊಳಗೊಂಡ ಕಲಾಬಳಗ ಇಲ್ಲಿದೆ. ಧಾರಾವಾಹಿ, ಸಿನಿಮಾ, ವೃತ್ತಿ ರಂಗಭೂಮಿಯಲ್ಲಿ ನಟಿಸಿರುವ ಕಲಾವಿರು ಸೇರಿದಂತೆ ಹೊಸಬರು ಬಣ್ಣ ಹಚ್ಚಿದ್ದಾರೆ. ತಲಾಷ್‌ ಸಾಹಿತ್ಯ ಕೃತಿಯಾಗಿ ಹೆಸರು ಗಳಿಸಿದೆ. ಸದ್ಯ ನಾಟಕ ರೂಪ ಪಡೆದಿದೆ ಎಂದರು.

ನಾಟಕ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ವಹಿಸಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ ನಾಟಕ ಪ್ರದರ್ಶನ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತಿ ರಂಗಕರ್ಮಿ ಯಶವಂತ ಸರದೇಶಪಾಂಡೆ, ಅಧ್ಯಕ್ಷ ತೆ ಗದಿಗೆಯ್ಯ ಹಿರೇಮಠ ಹಾಗೂ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ವಿಪ ಸದಸ್ಯ ಮೋಹನ ಲಿಂಬಿಕಾಯಿ, ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಮಾನಿ, ಚಂದ್ರಕಾಂತ ಹಿರೇಮಠ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ