ಆ್ಯಪ್ನಗರ

ಕ್ರೀಡೆಯಿಂದ ಉಜ್ವಲ ಭವಿಷ್ಯ: ನಾಗಭೂಷಣ

ಧಾರವಾಡ : ಕ್ರೀಡೆಗಳಲ್ಲಿ ಹೆಚ್ಚು ಕ್ರೀಯಾಶೀಲವಾಗುವುದರಿಂದ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಪ್ರಾಧ್ಯಾಪಕ ಡಾ.ಎಸ್‌.ಎಂ.ನಾಗಭೂಷಣ ಹೇಳಿದರು. ನಗರದ ರಾಯಾಪೂರದ ಎಸ್‌ಜೆಎಂವಿ ಮಹಾಂತ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಆಶ್ರಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ ಏಕ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

Vijaya Karnataka 21 Feb 2019, 5:00 am
ಧಾರವಾಡ : ಕ್ರೀಡೆಗಳಲ್ಲಿ ಹೆಚ್ಚು ಕ್ರೀಯಾಶೀಲವಾಗುವುದರಿಂದ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಪ್ರಾಧ್ಯಾಪಕ ಡಾ.ಎಸ್‌.ಎಂ.ನಾಗಭೂಷಣ ಹೇಳಿದರು. ನಗರದ ರಾಯಾಪೂರದ ಎಸ್‌ಜೆಎಂವಿ ಮಹಾಂತ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ ಆಶ್ರಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ ಏಕ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
Vijaya Karnataka Web DRW-20MAILAR05
ಧಾರವಾಡದ ರಾಯಾಪೂರದಲ್ಲಿರುವ ಮಹಾಂತ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ ಏಕ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿರಸಿಯ ಎಂಇಎಸ್‌ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಸಾಧಕ ಪ್ರತಿಭೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೀರ್ತಿ ಮತ್ತು ಸ್ಪೂರ್ತಿಗಳಿಗೆ ಉತ್ತಮ ಆರೋಗ್ಯಕರ ಜೀವನ ಅಗತ್ಯ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇತ್ತಿಚೀನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಂದ ದೂರಳಿಯುತ್ತಿದ್ದಾರೆ ಎಂದರು.

ಡಾ.ಸಿ.ಎಂ.ಕಡಕೋಳ ಮಾತನಾಡಿ, ಸೋಲು ಗೆಲುವಿನ ಮೆಟ್ಟಿಲು ಕ್ರೀಡಾಪಟುಗಳ ಆರಂಭದಲ್ಲಿ ಸೋಲು ಅನುಭವಿಸಿದರೆ ಹತಾಶರಾಗದೇ ನಿರಂತರ ಹೆಚ್ಚು ತಾಲೀಮು ನಡೆಸಿ ಸ್ವಯಂ ಆತ್ಮ ವಿಶ್ವಾಸದಿಂದ ಮುನ್ನಡೆದರೆ ಗೆಲುವಿನ ಹಾದಿ ಸನೀಹವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶಿರಸಿಯ ಎಂಇಎಸ್‌ ವಾಣಿಜ್ಯ ಕಾಲೇಜು ಪ್ರಥಮ, ಶಿರಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಶಿಗ್ಗಾಂವಿಯ ಎಸ್‌ಆರ್‌ಜೆವಿ ಕಲಾ ಕಾಲೇಜು ದ್ವಿತೀಯ ಸ್ಥಾನ ಹಾಗೂ ವಾಣಿಜ್ಯ ಕಾಲೇಜು ತೃತೀಯ ಸ್ಥಾನ ಪ್ರಶಸ್ತಿ ಪಡೆದವು.

ಬಿ.ಜಿ.ರಕರಡ್ಡಿ, ಡಿ.ನಾಗರಾಜಪ್ಪ, ಡಾ.ಎಸ್‌.ಎಚ್‌.ಪಂಚಾಕ್ಷ ರಿ, ಪ್ರೊ.ಎಸ್‌.ಕೆ.ಕುಂದರಗಿ, ಪ್ರೊ.ಜಿ.ಸಿ.ಕಡ್ಡಿಪುಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ