ಆ್ಯಪ್ನಗರ

ಕುಟುಂಬದೊಂದಿಗೆ ಕಾಲ ಕಳೆದ ಚಿಕ್ಕನಗೌಡ್ರ

ಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಳೆದ 20 ದಿನಗಳಿಂದ ಬ್ಯುಸಿಯಾಗಿದ್ದ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ, ಮತದಾನ ಮುಗಿದ ಮರುದಿನ ಸೋಮವಾರ ಸಂಪೂರ್ಣ ರಿಲ್ಯಾಕ್ಸ್‌ ಮೂಡಿನಲ್ಲಿದ್ದರು. ದಿನದ ಬಹುತೇಕ ಸಮಯವನ್ನು ಅದರಗುಂಚಿ ಮನೆಯಲ್ಲಿ ಕುಟುಂಬ, ಮೊಮ್ಮಕಳು ಹಾಗೂ ಕಾರ್ಯಕರ್ತರೊಂದಿಗೆ ಕಳೆದರು.

Vijaya Karnataka 21 May 2019, 5:00 am
ಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಳೆದ 20 ದಿನಗಳಿಂದ ಬ್ಯುಸಿಯಾಗಿದ್ದ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ, ಮತದಾನ ಮುಗಿದ ಮರುದಿನ ಸೋಮವಾರ ಸಂಪೂರ್ಣ ರಿಲ್ಯಾಕ್ಸ್‌ ಮೂಡಿನಲ್ಲಿದ್ದರು. ದಿನದ ಬಹುತೇಕ ಸಮಯವನ್ನು ಅದರಗುಂಚಿ ಮನೆಯಲ್ಲಿ ಕುಟುಂಬ, ಮೊಮ್ಮಕಳು ಹಾಗೂ ಕಾರ್ಯಕರ್ತರೊಂದಿಗೆ ಕಳೆದರು.
Vijaya Karnataka Web HBL-2005-2-3-CHICKEN-5

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಮನೆಯಲ್ಲಿ ಕುಟುಂಬದವರೊಂದಿಗೆ ಚಹಾ ಸೇವಿಸುತ್ತಿರುವ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ.


ಉಪ ಚುನಾವಣೆಗೆ ಪಕ್ಷದ ಟಿಕೆಟ್‌ ಖಚಿತವಾಗುತ್ತಿದ್ದಂತೆ ನಿತ್ಯ ಬೆಳಗ್ಗೆ 6 ರಿಂದ ರಾತ್ರಿ 2 ರಿಂದ 3 ರವರೆಗೂ ಸದಾ ರೋಡ್‌ ಶೋ, ಸಭೆ, ಪಕ್ಷದ ಸಮಾರಂಭ ಹೀಗೆ ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದ ಚಿಕ್ಕನಗೌಡ್ರರು ಸೋಮವಾರ ಬೆಳಗ್ಗೆ 7.30 ಎದ್ದು ಸ್ನಾನ, ಪೂಜೆ ನೆರವೇರಿಸಿದರು. ಪತ್ರಿಕೆಗಳನ್ನು ಓದಿದರು. ನಂತರ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೇರಿ ಉಪಹಾರ ಸೇವಿಸುತ್ತಾ ಮಾತು, ಹರಟೆ ನಡೆಸಿದರು. ಅಲ್ಲದೇ ಮೊಮ್ಮಕ್ಕಳ ಜತೆಗೆ ಸ್ವಲ್ಪ ಹೊತ್ತು ಆಟವಾಡಿ ಖುಷಿಪಟ್ಟರು.

ಕಾರ್ಯಕರ್ತರೊಂದಿಗೆ ಚರ್ಚೆ

ಕುಂದಗೋಳ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮದ ಕಾರ್ಯಕರ್ತರು ಬೆಳಗ್ಗೆ 9.30 ಮನೆಗೆ ಆಗಮಿಸಿದ್ದ ತಾಲೂಕಿನ ಪಕ್ಷದ ಕಾರ‍್ಯಕರ್ತರೊಂದಿಗೆ ಮತದಾನದ ಕುರಿತು ಚರ್ಚಿಸಿದರು. ಅಲ್ಲದೇ ಪ್ರತಿ ಗ್ರಾಮ ಹಾಗೂ ಪ್ರತಿ ಮತಗಟ್ಟೆಗಳಲ್ಲಿ ಮತದಾನ ಮಾಹಿತಿ ವಿವರ ಪಡೆದರು.

ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಭೇಟಿ ನೀಡುವುದು ಹಾಗೂ ಹಿರಿಯ ಬಿಜೆಪಿ ಮುಖಂಡರ ಜತೆಗೆ ಸಭೆಗಳು ಹಾಗೂ ಚುನಾವಣಾ ಕುರಿತು ಚರ್ಚಿಸುವುದು ಹಾಗೂ ಯಾವ ರೀತಿಯಾಗಿ ಚುನಾವಣೆಯನ್ನು ಎದುರಿಸಬೇಕು ಎಂಬುದರ ಕುರಿತು ಹಿರಿಯ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಚರ್ಚಿಸುವುದರಲ್ಲೇ ಬ್ಯುಸಿಯಾಗಿದ್ದೆ. ನಾಮಪತ್ರ ಸಲ್ಲಿಸಿದ ದಿನದಿಂದ ಮತದಾನದ ದಿನದವರೆಗೂ ಬಿಜೆಪಿಯ ಘಟಾನುಘಟಿ ನಾಯಕರೊಂದಿಗೆ ಹಗಲೂ ರಾತ್ರಿಯನ್ನೇದೆ ತಿರುಗಾಡಿದ್ದೆ. ಮತದಾನ ಮುಗಿದ ಮೇಲೆ ನಿರಾಳನಾಗಿದ್ದೇನೆ. ಇಂದು ಮನೆ ಬಿಟ್ಟು ಎಲ್ಲಿಯೂ ಹೊರ ಹೋಗುವುದಿಲ್ಲ. ಮನೆಯಲ್ಲಿಯೇ ಕುಟುಂಬದವರೊಂದಿಗೆ ಕಾಲ ಕಳೆಯುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ್ರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ