ಆ್ಯಪ್ನಗರ

ಕಾಂಗ್ರೆಸ್‌ ನುಡಿದಂತೆ ನಡೆದಿದೆ

ಹುಬ್ಬಳ್ಳಿ : ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಹಾಗೂ ತಿಮ್ಮಸಾಗರ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಭಾನುವಾರ ಮತಯಾಚಿಸಿದರು.

Vijaya Karnataka 6 May 2019, 5:00 am
ಹುಬ್ಬಳ್ಳಿ : ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಹಾಗೂ ತಿಮ್ಮಸಾಗರ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಭಾನುವಾರ ಮತಯಾಚಿಸಿದರು.
Vijaya Karnataka Web DRW-5 NADAF 6
ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕು ಅಂಚಟಗೇರಿ ಹಾಗೂ ತಿಮ್ಮಸಾಗರದ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಭಾನುವಾರ ಮತಯಾಚಿಸಿದರು.


ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಬಡವರ, ರೈತರ, ಸರ್ವ ಧರ್ಮ ಸಮಾಜದ ಹಿತಕಾಯುವುದಕ್ಕಾಗಿ ಬದ್ಧವಾಗಿದೆ. ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದು ಹಸಿದವರಿಗೆ ಅನ್ನ, ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷ ಣ, ಬಡಜನರಿಗೆ ಆರೋಗ್ಯ ಭಾಗ್ಯ, ಕ್ಷೀರಧಾರೆ, ಸಮವಸ್ತ್ರ ಭಾಗ್ಯ, ಸಹಕಾರಿ ಬ್ಯಾಂಕ್‌ನಲ್ಲಿರುವ ರೈತರ 50 ಸಾವಿರ ರೂ. ಸಾಲ ಮನ್ನಾ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನಗಳಿಗೆ ಅನುದಾನ ಮಸಿದಿ-ಮಂದಿರಗಳಿಗೂ ಅನುದಾನ, ಬಡವರಿಗೆ ಆಶ್ರಯ ಮನೆ, ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದೆ ಎಂದರು.

ಗ್ರಾಮದ ಹಿರಿಯ ಮುಖಂಡರಾದ ಬಿ.ಎಚ್‌.ವಾಲಿಕಾರ, ತಾಜುದ್ದಿನ ಬರದೂರ, ಉಮೇಶಗೌಡ್ರ ಪಾಟೀಲ, ಸೋಮಲಿಂಗಪ್ಪ ಕಮತನವರ, ಕನಕಪ್ಪ ಚವರಗುಡ್ಡ, ತಿಪ್ಪಣ್ಣ ಮಾಳಗಿಬಾವಿ, ಶರಣುಗೌಡ ಪಾಟೀಲ, ಮಂಜು ಬೆಂತೂರ, ಫಕ್ಕೀರಪ್ಪ ಕಟಗಿ, ಅಕ್ಕಮ್ಮ ಹೊಸಮನಿ, ಛಬ್ಬಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುರೆಡ್ಡಿ ಬಿಡ್ನಾಳ, ದಾದಾಪೀರ ಬಿಜಾಪುರ, ನಿಲವ್ವ ಮತ್ತಿಹಳ್ಳಿ, ಎಂ.ಎಚ್‌. ಜಿಗಳುರ, ಸಹದೇವಪ್ಪ ಹರಕುಣಿ, ಬಿಬಿಜಾನ ನಾಯ್ಕರ ಅಕ್ಕಮ್ಮ ಹೊಸಮನಿ, ಮಾಬುಸಾಬ ಮುಂದಿನಮನಿ, ಲಕ್ಷ್ಮೀ ಸಂಕಣ್ಣವರ, ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ದೃತಿ ಉಮೇಶ ಸಾಲ್ಮನಿ, ಗಿರೀಜಾ ಧೂಳಿಕೊಪ್ಪ, ಮಹಾದೇವಿ ಮರಿಗೌಡ್ರ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ