ಆ್ಯಪ್ನಗರ

ಸಾಹಿತ್ಯಕ್ಕೆ ದಾರ್ಶನಿಕರ ಕೊಡುಗೆ ಅಪಾರ

ಧಾರವಾಡ: ವಿಶ್ವ ಸಾಹಿತ್ಯಕ್ಕೆ ಭಾರತೀಯ ದಾರ್ಶನಿಕರ ಕೊಡುಗೆ ಅಪಾರವಾದುದು. ಮಾನವೀಯ ನೆಲೆಗಟ್ಟಿನ ವ್ಯಕ್ತಿತ್ವ ವಿಕಸನವು ನವಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿಕನಕದಾಸರ ಸಾಹಿತ್ಯವನ್ನು ಅಭ್ಯಸಿಸುವುದು ಅಗತ್ಯ ಎಂದು ಕನ್ನಡ ಪ್ರಾಧ್ಯಾಪಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.

Vijaya Karnataka 12 Feb 2020, 5:00 am
ಧಾರವಾಡ: ವಿಶ್ವ ಸಾಹಿತ್ಯಕ್ಕೆ ಭಾರತೀಯ ದಾರ್ಶನಿಕರ ಕೊಡುಗೆ ಅಪಾರವಾದುದು. ಮಾನವೀಯ ನೆಲೆಗಟ್ಟಿನ ವ್ಯಕ್ತಿತ್ವ ವಿಕಸನವು ನವಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿಕನಕದಾಸರ ಸಾಹಿತ್ಯವನ್ನು ಅಭ್ಯಸಿಸುವುದು ಅಗತ್ಯ ಎಂದು ಕನ್ನಡ ಪ್ರಾಧ್ಯಾಪಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.
Vijaya Karnataka Web the contribution of philosophers to literature is immense
ಸಾಹಿತ್ಯಕ್ಕೆ ದಾರ್ಶನಿಕರ ಕೊಡುಗೆ ಅಪಾರ


ನಗರದ ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯದಲ್ಲಿಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಹಯೋಗದೊಂದಿಗೆ ನಡೆದ ಪ್ರಚಾರೋಪನ್ಯಾಸ ಮಾಲೆ-3ರ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಕನಕದಾಸ ಒಬ್ಬ ಕಾಲಜ್ಞಾನಿ. ಐದುನೂರು ವರ್ಷಗಳ ಹಿಂದೆ ಅವರು ಆಡಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಸಾರ್ವಕಾಲಿಕವಾದವು ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಡಾ.ಸಂಗಮೇಶ ಚಲವಾದಿ ಭಕ್ತಿ ಪಂಥ ಮತ್ತು ಕನಕದಾಸರು ವಿಷಯ ಕುರಿತು ಉಪನ್ಯಾಸ ನೀಡಿದರು. ಡಾ.ಸಿ.ಡಿ. ದೊಡ್ಡಮನಿ ಕನಕದಾಸರ ಕೀರ್ತನೆಗಳು ಸಾಮಾಜಿಕ ನೆಲೆಯ ಹಿನ್ನೆಲೆಯ ವಿಷಯ ಕುರಿತು ಮಾತನಾಡಿದರು.

ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಬಿ.ವಿ.ಯಕ್ಕುಂಡಿಮಠ ಕನಕ ಅಧ್ಯಯನ ಪೀಠದ ಸಾಧನೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕಮಲಾ ಢವಳೆ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ