ಆ್ಯಪ್ನಗರ

ನೆರವು ನೀಡಲು ಅಡುಗೆ ಮಾಡುವವರ ಒತ್ತಾಯ

ಧಾರವಾಡ : ಲಾಕ್‌ಡೌನ್‌ನಿಂದ ಬ್ರಾಹ್ಮಣ ಸಮುದಾಯದ ಅಡುಗೆ ಮಾಡುವವರು ಹಾಗೂ ಸಹಾಯಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರ ಸೂಕ್ತ ನೆರವು ನೀಡಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ಗೆ ಬುಧವಾರ ಉತ್ತರ ಕರ್ನಾಟಕ ಬ್ರಾಹ್ಮಣ ಅಡುಗೆಯವರು ಮತ್ತು ಸಹಾಯಕರ ಸಂಘದವರು ಮನವಿ ಸಲ್ಲಿಸಿದರು.

Vijaya Karnataka 29 May 2020, 5:00 am
ಧಾರವಾಡ : ಲಾಕ್‌ಡೌನ್‌ನಿಂದ ಬ್ರಾಹ್ಮಣ ಸಮುದಾಯದ ಅಡುಗೆ ಮಾಡುವವರು ಹಾಗೂ ಸಹಾಯಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರ ಸೂಕ್ತ ನೆರವು ನೀಡಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ಗೆ ಬುಧವಾರ ಉತ್ತರ ಕರ್ನಾಟಕ ಬ್ರಾಹ್ಮಣ ಅಡುಗೆಯವರು ಮತ್ತು ಸಹಾಯಕರ ಸಂಘದವರು ಮನವಿ ಸಲ್ಲಿಸಿದರು.
Vijaya Karnataka Web the cooks insistence on providing assistance
ನೆರವು ನೀಡಲು ಅಡುಗೆ ಮಾಡುವವರ ಒತ್ತಾಯ

2 ತಿಂಗಳಿಂದ ಯಾವುದೇ ಸಭೆ ಸಮಾರಂಭಗಳು ನಡೆಯದ ಕಾರಣ ಕೆಲಸ ಇಲ್ಲದೇ ಮನೆಯಲ್ಲಿಯೇ ಇದ್ದೇವೆ. ಇದರಿಂದ ಜೀವನೋಪಾಯ ನಡೆಸುವುದು ಕಷ್ಟ್ಟಕರವಾಗಿದೆ. ಜುಲೈ ತಿಂಗಳಿಂದ ಶಾಲೆಗಳು ಆರಂಭವಾಗುವುದರಿಂದ ಶಾಲೆಯ ಶುಲ್ಕ, ಮನೆ ಬಾಡಿಗೆ ಹಾಗೂ ಇತರ ಶುಲ್ಕವನ್ನು ಪಾವತಿಸಲು ಪರದಾಡುವಂತಾಗಿದೆ. ಆದ್ದರಿಂದ ಸರಕಾರ ಧನಸಹಾಯ ನೀಡಬೇಕು ಎಂದು ಮನವಿಯಲ್ಲಿಒತ್ತಾಯಿಸಿದ್ದಾರೆ.

ಸಮಾರಂಭಗಳಿಗೆ ಕೇವಲ 50 ಜನರಿಗೆ ಅನುಮತಿ ನೀಡಲಾಗಿದ್ದು, ಅದನ್ನು ದಯವಿಟ್ಟು 100 ಜನರಿಗಿಂತ ಹೆಚ್ಚು ಭಾಗವಹಿಸಲು ಅನುಮತಿ ನೀಡಬೇಕು. ಅದರಿಂದ ನಮಗೆ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ವಿನಂತಿಸಲಾಗಿದೆ. ಗಿರೀಶ ಪಾಟೀಲ, ಸಂಜಯ ಕಪಟಕರ, ಉಪಾಧ್ಯಾ, ಬಬಲಾದಿ, ಕುಲಕರ್ಣಿ, ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ