ಆ್ಯಪ್ನಗರ

ದಾಸ ಸಾಹಿತ್ಯ ಗಂಗಾ ನದಿಯಂತೆ ಪ್ರವಹಿಸಿದೆ

ಧಾರವಾಡ : ದಾಸ ಸಾಹಿತ್ಯವು ಗಂಗಾ ನದಿಯಂತೆ ಅವ್ಯಾಹತವಾಗಿ ಪ್ರವಹಿಸುತ್ತಲೇ ಇದೆ. ಗಂಗೋತ್ರಿಯಲ್ಲಿ ಹುಟ್ಟಿ ಮುಂದೆ ಬೃಹದಾಕಾರವಾಗಿ ಹರಿದಂತೆ ಸಾಹಿತ್ಯವೂ ಸಹ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದು ಪ್ರವಚನಕಾರ ಪಂ.ವೆಂಕಟನರಸಿಂಹಾಚಾರ‍್ಯ ಜೋಶಿ ಹೇಳಿದರು.

Vijaya Karnataka 9 Apr 2019, 5:00 am
ಧಾರವಾಡ : ದಾಸ ಸಾಹಿತ್ಯವು ಗಂಗಾ ನದಿಯಂತೆ ಅವ್ಯಾಹತವಾಗಿ ಪ್ರವಹಿಸುತ್ತಲೇ ಇದೆ. ಗಂಗೋತ್ರಿಯಲ್ಲಿ ಹುಟ್ಟಿ ಮುಂದೆ ಬೃಹದಾಕಾರವಾಗಿ ಹರಿದಂತೆ ಸಾಹಿತ್ಯವೂ ಸಹ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದು ಪ್ರವಚನಕಾರ ಪಂ.ವೆಂಕಟನರಸಿಂಹಾಚಾರ‍್ಯ ಜೋಶಿ ಹೇಳಿದರು.
Vijaya Karnataka Web DRW-07RANGA08
ಧಾರವಾಡ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದಿಂದ ಪಂ.ವೆಂಕಟನರಸಿಂಹಾಚಾರ‍್ಯ ಜೋಶಿ ಅವರನ್ನು ಸನ್ಮಾನಿಸಲಾಯಿತು.


ಇಲ್ಲಿಯ ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನವು 'ಶನಿವಾರ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್‌.ಬಿ. ಗುತ್ತಲ ಮಾತನಾಡಿ, ಉತ್ತರಾದಿ ಮಠಾಧೀಶರ ಆಶೀರ್ವಾದಗಳೊಂದಿಗೆ ಸ್ಥಾಪಿತವಾದ ಈ ಸಂಸ್ಥೆಯು ನಮ್ಮ ಶ್ರೇಷ್ಠ ಪರಂಪರೆ, ಸಂಸ್ಕೃತಿಗಳನ್ನು ಇಂದಿನ, ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಲು ಧರ್ಮ ಜಾಗೃತಿಯ ಕಾರ್ಯ ಮಾಡುತ್ತಲೇ ಬಂದಿದೆ ಎಂದು ಹೇಳಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಬ್ರಾಹ್ಮಣ ಸಭಾದ ಉಪಾಧ್ಯಕ್ಷ , ನ್ಯಾಯವಾದಿ ವೆಂಕಟೇಶ ದೇಸಾಯಿ ಅಧ್ಯಕ್ಷ ತೆ ವಹಿಸಿದ್ದರು.

ಡಾ.ಎಚ್‌.ಎ.ಕಟ್ಟಿ, ಪ್ರೊ.ವೈ.ಪಿ.ವ್ಯಾಸಮುದ್ರಿ, ಪ್ರಹ್ಲಾದ ಗುತ್ತಲ, ರವಿ ಜೋಶಿ, ಪ್ರಕಾಶ ಕುಲಕರ್ಣಿ, ವೇದಾ ಜೋಶಿ, ಹೇಮಾ ರಾವ್‌, ಕಲ್ಪನಾ ಒಡೆಯರ, ಛಾಯಾ ಹೇಮಾದ್ರಿ, ನಳಿನಿ ರಾವ್‌ ಮತ್ತಿತರರು ಉಪಸ್ಥಿತರಿದ್ದರು. ಮಿತ್ರವೃಂದ ಭಜನಾ ಮಂಡಳಿಯ ಸದಸ್ಯೆಯರು ಪ್ರಾರ್ಥಿಸಿದರು. ರೋಹಿಣಿ ರಾವ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ