ಆ್ಯಪ್ನಗರ

ಇಬ್ಬರು ಮೃತಪಟ್ಟಿರುವುದು ಅಘಾತ ತಂದಿದೆ; ಉಮಾಶ್ರೀ

ಹುಬ್ಬಳ್ಳಿ: ಬಂಡಿವಾಡದಲ್ಲಿಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿನನ್ನು ಕಾರು ಜಖಂಗೊಂಡಿದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಆದರೆ, ಘಟನೆಯಲ್ಲಿಇಬ್ಬರು ಮೃತಪಟ್ಟಿರುವುದು ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಕಂಬನಿ ಮಿಡಿದಿದ್ದಾರೆ.

Vijaya Karnataka 22 Nov 2020, 5:00 am
ಹುಬ್ಬಳ್ಳಿ: ಬಂಡಿವಾಡದಲ್ಲಿಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿನನ್ನು ಕಾರು ಜಖಂಗೊಂಡಿದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಆದರೆ, ಘಟನೆಯಲ್ಲಿಇಬ್ಬರು ಮೃತಪಟ್ಟಿರುವುದು ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಕಂಬನಿ ಮಿಡಿದಿದ್ದಾರೆ.
Vijaya Karnataka Web 21 SANTOSH UMASHRI_21
ಬಂಡಿವಾಡದಲ್ಲಿಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿಗಾಯಗೊಂಡು ಕಿಮ್ಸ್‌ನಲ್ಲಿಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಸಚಿವೆ ಉಮಾಶ್ರೀ.

ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ''ನನ್ನ ವಾಹನ ಜಖಂಗೊಂಡಿರೋದಕ್ಕೆ ಬೇಸರವಿಲ್ಲ. ಈ ಅಪಘಾತದಲ್ಲಿಎರಡು ಜೀವಗಳು ಕಳೆದುಕೊಳ್ಳುವಂತಾಯಿತು. ಅದರಿಂದ ನನಗೆ ತುಂಬಾ ನೋವಾಗಿದೆ'' ಎಂದರು.

''ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಏಕೆ ಎಂಬುದು ಗೊತ್ತಿಲ್ಲ. ಆತನನ್ನು ನನ್ನ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಇಡೀ ಘಟನೆಯಿಂದ ನಾನು ನೊಂದಿದ್ದೇನೆ. ಕಾರು ಹಾಳಾದರೆ ಮತ್ತೊಂದು ಖರೀದಿಸಬಹುದು. ಆದರೆ ಕಳೆದುಕೊಂಡಿರುವ ಎರಡು ಜೀವಗಳು ಮರಳಿ ಬರುವುದಿಲ್ಲ'' ಎಂದು ಸಂತಾಪ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ