ಆ್ಯಪ್ನಗರ

ಟಿವಿ, ಮೊಬೈಲ್‌ ಅಂಗೈನ ಶತ್ರುಗಳು

ಧಾರವಾಡ: ನಗರದ ಗಾಂಧಿಚೌಕ ಬಳಿಯ ಚಿತ್ಪಾವನ ಸಭಾಗೃಹದಲ್ಲಿಚಿತ್ಪಾವನ ಬ್ರಾಹ್ಮಣ ಸಂಘದ ಆಶ್ರಯದಲ್ಲಿಸಂಕ್ರಾಂತಿ ಉತ್ಸವ ಮತ್ತು ಶಿಷ್ಯವೇತನ ವಿತರಣೆ ಸಮಾರಂಭ ಸೋಮವಾರ ನಡೆಯಿತು.

Vijaya Karnataka 4 Feb 2020, 5:00 am
ಧಾರವಾಡ: ನಗರದ ಗಾಂಧಿಚೌಕ ಬಳಿಯ ಚಿತ್ಪಾವನ ಸಭಾಗೃಹದಲ್ಲಿಚಿತ್ಪಾವನ ಬ್ರಾಹ್ಮಣ ಸಂಘದ ಆಶ್ರಯದಲ್ಲಿಸಂಕ್ರಾಂತಿ ಉತ್ಸವ ಮತ್ತು ಶಿಷ್ಯವೇತನ ವಿತರಣೆ ಸಮಾರಂಭ ಸೋಮವಾರ ನಡೆಯಿತು.
Vijaya Karnataka Web the enemies of tv and mobile palms
ಟಿವಿ, ಮೊಬೈಲ್‌ ಅಂಗೈನ ಶತ್ರುಗಳು


ಮುಖ್ಯ ಅತಿಥಿ ಡಾ.ಸೌಭಾಗ್ಯ ಕುಲಕರ್ಣಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳÜಲ್ಲಿವಿದ್ಯಾಭ್ಯಾಸ ಸುಲಭದ ಮಾತಲ್ಲ. ಟಿವಿ, ಮೊಬೈಲ್‌ಗಳಂಥ ಅಂಗೈಯೊಳಗಿನ ಶತ್ರುಗಳಿಂದ ದೂರವಿದ್ದು ಛಲ ಮತ್ತು ಆತ್ಮವಿಶ್ವಾಸಗಳಿಂದ ಹೋರಾಡಿ ವಿದ್ಯಾಸಂಪನ್ನರಾದಾಗ ಸಕಾರಾತ್ಮಕ ಜೀವನದ ನೆಲೆ ಸಿಗಬಹುದಾಗಿದೆ ಎಂದರು.

ಇಂದಿನ ಯುವ ಪೀಳಿಗೆ ಈ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ರೋಲ್‌ ಮಾಡೆಲ್‌ ಆದಾಗ ಅಂಥ ಕುಟುಂಬಗಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ಪಾವನ ಸಂಘದ ಅಧ್ಯಕ್ಷ ಎನ್‌.ಟಿ.ಪರಾಂಜಪೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಗಣ್ಯರಾದ ಜಿ.ಬಿ.ಕಾನಡೆ, ಶಶಿಕಾಂತ ಜೋಶಿ, ಜಿ.ಎಚ್‌.ಸೊಹನಿ, ನಾಗೇಶ ಕರಂದೀಕರ, ಪ್ರಭಾಕರ ತಾಮ್ಹಣಕರ, ಕೇಶವ ಘಾಣೇಕರ, ವಸಂತ ಕರಮರಕರ, ಸುಧೀರ ಮೋಡಕ, ಅರವಿಂದ ಜೋಶಿ, ಸೀಮಾ ಪರಾಂಜಪೆ, ರೂಪಾ ದಾತೆ, ಸ್ವಸ್ತಿಕಾ ಕಾನಿಟಕರ, ಮಂಗಲ ಫಾಟಕ, ಶಾಂತಾ ಗೋಡಬೋಲೆ, ಶಾರದಾ ಜೋಶಿ, ಗೀತಾ ಸೊಹನಿ, ಸುಚಿತಾ ಜೋಶಿ, ಆರೋಹಿ ಪರಾಂಜಪೆ, ಶುಭಾ ಫಾಟಕ ಮುಂತಾದವರು ಉಪಸ್ಥಿತರಿದ್ದರು. ಲಾವಣ್ಯ ಮರಾಠೆ ಪ್ರಾರ್ಥಿಸಿದರು. ಪ್ರಕಾಶ ಗೋಡಬೋಲೆ ಸ್ವಾಗತಿಸಿದರು. ಪಿ.ಆರ್‌.ರಿಸಬೂಡ ಶಿಷ್ಯವೇತನ ಕುರಿತಾದ ವರದಿ ವಾಚಿಸಿದರು. ಎನ್‌.ಎಸ್‌.ಕಾಳೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ