ಆ್ಯಪ್ನಗರ

ಪಂಚಗೃಹ ಹಿರೇಮಠದ ಪರಂಪರೆ ಅಗಾಧ

ಧಾರವಾಡ: ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಪಂಚಗೃಹ ಹಿರೇಮಠವು ಅಪೂರ್ವ ವಿನ್ಯಾಸದ ವಿಶಿಷ್ಟ ಕಟ್ಟಡವನ್ನು ಹೊಂದಿದ್ದು, ಪ್ರವಾಸಿಗರ ಗಮನಸೆಳೆಯು ನೆಚ್ಚಿನ ತಾಣವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆತರಿಕೆರೆ ತಾಲೂಕಿನ ಹುಣಸಘಟ್ಟದ ಶ್ರೀಗುರುಹಾಲಸ್ವಾಮಿಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Vijaya Karnataka 30 Oct 2019, 5:00 am
ಧಾರವಾಡ: ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಪಂಚಗೃಹ ಹಿರೇಮಠವು ಅಪೂರ್ವ ವಿನ್ಯಾಸದ ವಿಶಿಷ್ಟ ಕಟ್ಟಡವನ್ನು ಹೊಂದಿದ್ದು, ಪ್ರವಾಸಿಗರ ಗಮನಸೆಳೆಯು ನೆಚ್ಚಿನ ತಾಣವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆತರಿಕೆರೆ ತಾಲೂಕಿನ ಹುಣಸಘಟ್ಟದ ಶ್ರೀಗುರುಹಾಲಸ್ವಾಮಿಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
Vijaya Karnataka Web the heritage of the five room hiremath is overwhelming
ಪಂಚಗೃಹ ಹಿರೇಮಠದ ಪರಂಪರೆ ಅಗಾಧ


ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಮಠದ ಉಭಯ ಶ್ರೀಗಳು ನೀಡಿದ ಗೌರವ ಸ್ವೀಕರಿಸಿ ಸೋಮವಾರ ಅವರು ಮಾತನಾಡಿದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿಲಭ್ಯವಿರುವ ಪ್ರಾಚೀನ ದಾಖಲೆಗಳು ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಸಾವಿರ ವರ್ಷದ ಬಹುದೊಡ್ಡ ಇತಿಹಾಸ ಇರುವುದನ್ನು ಸ್ಪಷ್ಟಪಡಿಸುತ್ತವೆ. ರಂಭಾಪುರಿ ಜಗದ್ಗುರು ಪೀಠಕ್ಕೆ ಭಾರತದ ವಿವಿಧ ರಾಜ್ಯಗಳಲ್ಲಿಒಟ್ಟು 12ಸಾವಿರ ಶಾಖಾಮಠಗಳಿವೆ. ಅವು ಅಲ್ಲಲ್ಲಿಯೇ ಪ್ರಾದೇಶಿಕವಾಗಿ ಬಸವಪೂರ್ವ ಯುಗದಿಂದಲೂ ಧರ್ಮ ಜಾಗೃತಿ ಕೈಂಕರ್ಯವನ್ನು ಮಾಡುತ್ತಿದ್ದು, ತಮ್ಮದೇ ಆದ ಧಾರ್ಮಿಕ ಘನತೆಯನ್ನು ಹಾಗೂ ವೈಶಿಷ್ಟತ್ರ್ಯಪೂರ್ಣ ಧರ್ಮ ಪರಂಪರೆ ಹೊಂದಿವೆ ಎಂದರು.

ಇದೇ ವೇಳೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರನ್ನು ಶಾಲುಹೊದಿಸಿ ಗೌರವಿಸಿದರು.

ಬಿ.ಸಿ. ಕೊಳ್ಳಿ, ವಿ.ಬಿ.ಕೆಂಚನಗೌಡರ, ಶಿವಾನಂದ ತಡಕೋಡ, ಚಂಬಣ್ಣ ಪೂಜಾರ, ಜಿ.ಬಿ. ಹುಲ್ಲೂರ, ಮೃತ್ಯುಂಜಯ ಹಿರೇಮಠ, ಶಿವಾನಂದಸ್ವಾಮಿ ಹಿರೇಮಠ, ಧರ್ಮಣ್ಣ ರಸಾಳೆ, ಈರಯ್ಯ ಹಿರೇಮಠ, ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ