ಆ್ಯಪ್ನಗರ

ಮಲಪ್ರಭಾ ಕಾಲುವೆ ನೀರು ಬಿಡಲು ಆಗ್ರಹ

ನವಲಗುಂದ : ಸ್ಥಗಿತಗೊಳಿಸಿದ ಮಲಪ್ರಭಾ ಕಾಲುವೆ ನೀರು ಡಿ.31ರವರೆಗೆ ಬಿಡುಗಡೆ ಮಾಡಬೇಕು ಹಾಗೂ ರೈತರ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ನೂರಾರು ರೈತರು ಬುಧವಾರ ಇಲ್ಲಿನ ನೀಲಮ್ಮನ ಕೆರೆ ವೃತ್ತದಲ್ಲಿ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Vijaya Karnataka 20 Dec 2018, 5:00 am
ನವಲಗುಂದ : ಸ್ಥಗಿತಗೊಳಿಸಿದ ಮಲಪ್ರಭಾ ಕಾಲುವೆ ನೀರು ಡಿ.31ರವರೆಗೆ ಬಿಡುಗಡೆ ಮಾಡಬೇಕು ಹಾಗೂ ರೈತರ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ನೂರಾರು ರೈತರು ಬುಧವಾರ ಇಲ್ಲಿನ ನೀಲಮ್ಮನ ಕೆರೆ ವೃತ್ತದಲ್ಲಿ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web DRW-19-NVL-1
ಮಲಪ್ರಭಾ ಕಾಲುವೆಗೆ ಡಿ.31ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.


ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್‌ ಮಾತನಾಡಿ, ನೀರಾವರಿ ಆಶ್ರೀತ ರೈತರಿಗೆ ಇದುವರೆಗೆ ಮಲಪ್ರಭಾ ಕಾಲುವೆಯಿಂದ ಬಿಟ್ಟಿರುವ ನೀರು ಬೆಳೆಗಳಿಗೆ ಸಾಕಾಗುತ್ತಿಲ್ಲ. ರೈತರ ಬೆಳೆ ಸಂಪೂರ್ಣ ಬೆಳೆಯಲು ಇನ್ನಷ್ಟು ಕಾಲ ನೀರಿನ ಅವಶ್ಯವಿರುವುದರಿಂದ ಡಿ.31ರವರೆಗೆ ಮಲಪ್ರಭಾ ಕಾಲುವೆಗೆ ನೀರು ಹರಿಸುವುದು ಅನಿರ್ವಾವಾಗಿದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನೀರು ಬಿಡಲು ಕ್ರಮ ಕೈಗೊಳ್ಳಬೇಕೆಂದರು.

ರೈತ ಮುಖಂಡರಾದ ಡಿ.ವಿ.ಕುರಟ್ಟಿ, ಎ.ಪಿ.ಗುರಿಕಾರ ಮಾತನಾಡಿ, ಸರಕಾರ ರೈತರ ಸಾಲ ಮನ್ನಾ ವಿಷಯದಲ್ಲಿ ರಾಜ್ಯ ಸರಕಾರ ಹಲವಾರು ಷರತ್ತು ವಿಧಿಸುವ ಮೂಲಕ ಸಾಲ ಮನ್ನಾ ಯೋಜನೆ ವಿಳಂಬಗೊಳಿಸುವ ಹಾಗೂ ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆ ತಲುಪದಂತೆ ಕ್ರಮ ವಹಿಸಲು ಮುಂದಾಗಿದೆ. ಇದರಿಂದ ಬಹಳಷ್ಟು ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗುವ ಹುನ್ನಾರ ಅಡಗಿದ್ದು, ಸರಕಾರದ ಕಣ್ಣಿರೊರೆಸುವ ತಂತ್ರವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರಕಾರ ಉತ್ತರ ಕರ್ನಾಟಕ ಭಾಗಕ್ಕೆ ಹಲವಾರು ಕಚೇರಿ ಸ್ಥಳಾಂತರಿಸುವ ನಿರ್ಧಾರವನ್ನು ಬೆಳಗಾವಿಯ ಅಧೀವೇಶನದಲ್ಲಿಯೇ ತೀರ್ಮಾನಿಸಿ ಸುವರ್ಣ ವಿಧಾನಸೌಧದಲ್ಲಿಯೇ ಈ ಭಾಗಕ್ಕೆ ಅವಶ್ಯವಿರುವ ಸರಕಾರದ ಪ್ರಮುಖ ಕಚೇರಿ ಸ್ಥಳಾಂತರಿಸಲು ಕ್ರಮ ಜರುಗಿಸಬೇಕು. ಕಳಸಾ ಬಂಡೂರಿ ಮಹಾದಾಯಿ ಯೋಜನೆ ಅನುಷ್ಠಾನ ವಿಷಯದಲ್ಲಿ ರೈತ ಮುಖಂಡರು, ಸರ್ವಪಕ್ಷ ಸದಸ್ಯರು, ಕಾನೂನು ಹಾಗೂ ನೀರಾವರಿ ತಜ್ಞರ ಸಭೆ ಕರೆದು ಕೂಲಂಕುಶ ಚರ್ಚಿಸಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರೇಡ್‌-2 ತಹಸೀಲ್ದಾರ ಎಂ.ಜೆ.ಹೊಕ್ರಾಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಪಿಎಸ್‌ಐ ಜಯಪಾಲ್‌ ಪಾಟೀಲ್‌ ಈ ಸಂದರ್ಭದಲ್ಲಿ ಇದ್ದರು.

ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ತಾಪಂ ಸದಸ್ಯ ಕಲ್ಲಪ್ಪ ಹುಬ್ಬಳ್ಳಿ, ರಾಮಣ್ಣ ಕಿಲಾರಿ,ಮಲ್ಲಪ್ಪ ಸಂಗಟಿ,ಅಮೃತ ನಾರಾಯಣ ಕದಂ,ಮಲ್ಲೇಶಪ್ಪ ಕುಂಬಾರ, ಮಲ್ಲೇಶ ಉಪ್ಪಾರ,ಹನಮಂತಪ್ಪ ಸೀರಿ,ಅಲ್ಲಾಭಕ್ಷ ಹಂಚಿನಾಳ ಇದ್ದರು.

ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ

ರೈತರ ಬೇಡಿಕೆ ಹಾಗೂ ಉತ್ತರ ಕರ್ನಾಟಕ ನಿರ್ಲಕ್ಷ್ಯ ಧೋರಣೆ ತಾಳಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ