ಆ್ಯಪ್ನಗರ

ವಚನ, ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಇಂದು

ಹುಬ್ಬಳ್ಳಿ : ಹುಬ್ಬಳ್ಳಿಯ ಬಸವ ಕೇಂದ್ರವು ಸಾಹಿತಿ, ಗಾಯಕ ಪ್ರೊ.ಬಸವರಾಜ ಕೇಂಧೂಳಿ ಬಳಗದ ವತಿಯಿಂದ ಏರ್ಪಡಿಸಿದ್ದ ವಚನ ಸ್ಪರ್ಧೆ, ನಿಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದಲ್ಲಿ ವಿಜೇತರಿಗೆ ಫೆ.10ರಂದು ಸಂಜೆ 6ಕ್ಕೆ ನಡೆಯುವ ದತ್ತಿ ಕಾರ‍್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಬಸವ ಕೇಂದ್ರದ ಅಧ್ಯಕ್ಷ ಡಾ.ಬಿ.ವಿ.ಶಿರೂರ ತಿಳಿಸಿದ್ದಾರೆ.

Vijaya Karnataka 10 Feb 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿಯ ಬಸವ ಕೇಂದ್ರವು ಸಾಹಿತಿ, ಗಾಯಕ ಪ್ರೊ.ಬಸವರಾಜ ಕೇಂಧೂಳಿ ಬಳಗದ ವತಿಯಿಂದ ಏರ್ಪಡಿಸಿದ್ದ ವಚನ ಸ್ಪರ್ಧೆ, ನಿಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದಲ್ಲಿ ವಿಜೇತರಿಗೆ ಫೆ.10ರಂದು ಸಂಜೆ 6ಕ್ಕೆ ನಡೆಯುವ ದತ್ತಿ ಕಾರ‍್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಬಸವ ಕೇಂದ್ರದ ಅಧ್ಯಕ್ಷ ಡಾ.ಬಿ.ವಿ.ಶಿರೂರ ತಿಳಿಸಿದ್ದಾರೆ.
Vijaya Karnataka Web the prize for the winner and regulator winner today
ವಚನ, ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಇಂದು

ವಿದ್ಯಾರ್ಥಿಗಳ ಹೆಸರು ಹಾಗೂ ಶಾಲೆಯ ವಿವರ ಇಂತಿದೆ: ವಿಭಾಗ 1: ಪ್ರಾಥಮಿಕ 1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳು ಶರಣರ ವಚನಗಳನ್ನು ಹೆಚ್ಚು ಹೆಚ್ಚು ಕಂಠಪಾಠ ಮಾಡಿ ಸ್ಪಷ್ಟವಾಗಿ ಹೇಳುವುದು ಹಾಗೂ ಹಾಡುವುದು. ಪ್ರಥಮ: ಪವಿತ್ರಾ ಪಿತಾಂಬರ, ಕೆಎಲ್‌ಇ, ಎಚ್‌.ಎಫ್‌.ಕಟ್ಟಿಮನಿ ಶಾಲೆ, ದ್ವಿತೀಯ: ಧರೇಶ ಶಿ. ಸುಭೇಧಾರ, ವಿದ್ಯಾನಿಧಿ ಶಾಲೆ, ಶಿರಗುಪ್ಪಿ. ತೃತೀಯ: ದೀಪಕಾ ಎಸ್‌. ರೆಡ್ಡಿ, ಪರಿವರ್ತನ ಗುರುಕುÇ ಶಾಲೆ ಹಾಗೂ ಕೀರ್ತಿ ಕಲ್ಲಪ್ಪ ಕಾಮಧೇನು, ಸ.ಹಿ.ಪ್ರಾಥಮಿಕ ಶಾಲೆ, ರಾಮಾಪೂರ.

ವಿಭಾಗ 2: 5 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಚನಗಳನ್ನು ಸ್ಪಷ್ಠವಾಗಿ ಹೇಳುವುದರ ಜತೆಗೆ ಅವುಗಳ ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸುವುದು. ಪ್ರಥಮ: ಸಂಜನಾ ಭೀಮಸೇನ ಗರಗದ, ಚೈತ್ರಾ ಶಾಲೆ, ದ್ವಿತೀಯ: ಸಿಹಿ ಸಂಕಾಲ, ಪರಿವರ್ತನ ಗುರುಕುಲ ಶಾಲೆ, ತೃತೀಯ: ಭುವನ್‌ ಎಸ್‌ ಧರಣಿ, ವಿವೇಕಾನಂದ ಶಾಲೆ.

ವಿಭಾಗ 3: 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶರಣರ ವಚನಗಳು ಇಂದಿನ ಬದುಕಿಗೆ ಮಾರ್ಗದರ್ಶಕಗಳು ಎಂಬ ವಿಷಯ ಕುರಿತು ನಿಬಂಧ ಸ್ಪರ್ಧೆ. ಪ್ರಥಮ: ಸೃಷ್ಠಿ ಲೋಹಾರ, ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ದ್ವಿತೀಯ: ಅಮೃತ ಗು. ಬುಗ್ಗಿ, ವೇಮನ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆ, ತೃತೀಯ: ಸೈರಕ್ಷಿತಾ ಜಿ. ಪಾಟೀಲ, ಪರಿವರ್ತನ ಗುರುಕುಲ ಶಾಲೆ ಬಹುಮಾನ ಪಡೆದಿದ್ದಾರೆ.

ವಿಜೇತರಿಗೆ ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ಫೆ.10 ರಂದು ಸಂಜೆ 6ಕ್ಕೆ ಅಕ್ಷ ಯ ಕಾಲೊನಿಯ ನಳಂದ ಕಾಲೇಜಿನ ಎದುರಿಗೆ, ಸಿಲ್ವರ್‌ ರೆಸಿಡೆನ್ಸಿ ಸಭಾಭವನದಲ್ಲಿ ಜರಗುವ ದತ್ತಿ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ