ಆ್ಯಪ್ನಗರ

ಶಿಕ್ಷಕರಿಂದ ದೇಶದ ಪ್ರಗತಿ ಸಾಧ್ಯ

ಹುಬ್ಬಳ್ಳಿ : ಶಿಕ್ಷ ಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕು ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ ಹೇಳಿದರು.

Vijaya Karnataka 15 Aug 2019, 5:00 am
ಹುಬ್ಬಳ್ಳಿ : ಶಿಕ್ಷ ಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕು ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ ಹೇಳಿದರು.
Vijaya Karnataka Web the progress of the country by teachers is possible
ಶಿಕ್ಷಕರಿಂದ ದೇಶದ ಪ್ರಗತಿ ಸಾಧ್ಯ


ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಸಿಬ್ಬಂದಿ ಉದ್ದೇಶಿಸಿ ಬುಧವಾರ ಮಾತನಾಡಿ, ಶಿಕ್ಷ ಕರಿಂದ ದೇಶದ ಪ್ರಗತಿ ಸಾಧ್ಯ ಎಂದರು.

ಕೆಲಸಕ್ಕೆ ಸೇರಿದ ನಂತರ ಕಲಿಕೆ ಕಡಿಮೆಯಾಗುತ್ತಿರುವದಕ್ಕೆ ಮತ್ತು ಸಂಶೋಧನೆ ಎಂಬುದು ಇಂದು ಹೊರಗುತ್ತಿಗೆ ಆಗುತ್ತಿರುವದಕ್ಕೆ ವಿಷಾದಿಸಿದರು.13 ದೇಶಗಳ 55 ವಿಶ್ವವಿದ್ಯಾಲಯಗಳಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ ವಿದ್ಯಾರ್ಥಿಗಳ ಶ್ರೇಯಸ್ಸಿಗೆ ನಿರಂತರ ಕಾರ್ಯ ಮಾಡುವ ಸೇವೆಯನ್ನು ಬೆಳೆಸಿಕೊಳ್ಳಬೇಕೆಂದರು.

ಶಿಕ್ಷ ಕರು ಸಂವಹನ ಕೌಶಲ್ಯದೊಂದಿಗೆ ಮತ್ತು ಸಂಶೋಧನೆಗಳ ಬಗೆಗೆ ಆಸಕ್ತಿ ಹೊಂದಬೇಕೆಂದರು.ವಿದ್ಯಾರ್ಥಿಗಳ ಮನಸ್ಸು ಪರಿವರ್ತನೆ ಆಗುವಂತೆ ಕಾರ್ಯ ಮಾಡಿ ,ತಮ್ಮ ತಮ್ಮ ಸೇವೆಗಳ ಬಗೆಗೆ ಸಂತೃಪ್ತಿ ಹೊಂದಬೇಕೆಂದರು. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅವುಗಳನ್ನು ತಡೆಗಟ್ಟಲು ಎಲ್ಲರೂ ಪ್ರಯತ್ನಿಸಬೇಕೆಂದರು.

ಪ್ರಾಚಾರ್ಯ ಡಾ. ಎಸ್‌.ವಿ. ಹಿರೇಮಠ ಅಧ್ಯಕ್ಷ ತೆ ವಹಿಸಿದ್ದರು. ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಡಾ.ಎಂ.ವಾಯ್‌.ಮೋಳೆಕರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ