ಆ್ಯಪ್ನಗರ

ಪಕ್ಷದ ನಾಯಕತ್ವ ಪ್ರಶ್ನೆ ಮಾಡಿಯೇ ಇಲ್ಲ: ಹೊರಟ್ಟಿ

ಹುಬ್ಬಳ್ಳಿ: ಸಮ್ಮಿಶ್ರ ಸರಕಾರ ಸಂದರ್ಭದಲ್ಲಿನಮ್ಮನ್ನು ಕಡೆಗಣಿಸಿರುವ ಬಗ್ಗೆ ಚರ್ಚಿಸಿದ್ದೇವೆ ಹೊರತು ಪಕ್ಷದ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

Vijaya Karnataka 19 Oct 2019, 7:35 pm
ಹುಬ್ಬಳ್ಳಿ: ಸಮ್ಮಿಶ್ರ ಸರಕಾರ ಸಂದರ್ಭದಲ್ಲಿನಮ್ಮನ್ನು ಕಡೆಗಣಿಸಿರುವ ಬಗ್ಗೆ ಚರ್ಚಿಸಿದ್ದೇವೆ ಹೊರತು ಪಕ್ಷದ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web the question of party leadership is not over
ಪಕ್ಷದ ನಾಯಕತ್ವ ಪ್ರಶ್ನೆ ಮಾಡಿಯೇ ಇಲ್ಲ: ಹೊರಟ್ಟಿ


ನನ್ನ ನಾಯಕತ್ವ ಬೇಡವಾದರೆ ಬೇರೆಯವರನ್ನು ನೋಡಿಕೊಳ್ಳಲಿ, ನನ್ನ ನಾಯಕತ್ವದ ಬಗ್ಗೆ ಹೊರಟ್ಟಿ ಸೇರಿದಂತೆ ಯಾರ ಸರ್ಟಿಫಿಕೇಟ್‌ ಬೇಕಿಲ್ಲಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ''ನಾವು ಹನ್ನೊಂದು ಜನ ಸೇರಿಕೊಂಡು ನಮಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಯಕತ್ವದ ಕುರಿತು ಚರ್ಚೆಯನ್ನೇ ಮಾಡಿಲ್ಲ'' ಎಂದರು.

''ಮಾಜಿ ಸಿಎಂ ಹಾಗೂ ನಮ್ಮ ನಾಯಕರೂ ಆಗಿರುವ ಕುಮಾರಸ್ವಾಮಿ ಯಾಕೆ ಈ ಮಾತನ್ನು ಹೇಳಿದರು ಎಂಬುದು ಗೊತ್ತಾಗಿಲ್ಲ. ಪಕ್ಷದ ಹಿತದೃಷ್ಟಿಯಿಂದ ನೇರವಾಗಿ ಮಾತನಾಡಿದ್ದೇವೆ. ಅದನ್ನು ತಪ್ಪು ತಿಳಿದುಕೊಂಡರೆ ಅದು ನಮ್ಮ ತಪ್ಪಲ್ಲ'' ಎಂದು ತಿಳಿಸಿದರು.

''ಪ್ರತಿಯೊಂದು ಚುನಾವಣೆಯಲ್ಲಿನಮ್ಮನ್ನು ಬಳಕೆ ಮಾಡಿಕೊಳ್ಳುವ ಪಕ್ಷ, ಸಮ್ಮಿಶ್ರ ಸರಕಾರ ಇದ್ದಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲದೇ ನಮಗೆ ಯಾವುದೇ ಮಾನ್ಯತೆ ನೀಡಲಿಲ್ಲ. ಈ ಬಗ್ಗೆ ಅಸಮಾಧಾನವಿದೆ. ಮಾಜಿ ಪ್ರಧಾನಿ ದೇವೇಗೌಡರು ದೂರವಾಣಿ ಕರೆ ಮಾಡಿ ಅ.18 ರಂದು ಬೆಂಗಳೂರಿಗೆ ಬರಲು ತಿಳಿಸಿದ್ದರು. ಆದರೆ, ಮೊದಲೆ ನಿಗದಿಯಾದ ಕಾರ್ಯಕ್ರಮ ಹಾಗೂ ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿಹೋಗಲು ಆಗಲಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಹಮತವಿದೆ ಎಂಬುದನ್ನು ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ'' ಎಂದು ಹೊರಟ್ಟಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ