ಆ್ಯಪ್ನಗರ

ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರ

ಧಾರವಾಡ : ಕೃಷಿ ಕ್ಷೇತ್ರ ಚೆನ್ನಾಗಿ ಬೆಳೆಸುವಲ್ಲಿ ಮಹಿಳೆಯರ ಶ್ರಮ ಮತ್ತು ಸಾಧನೆ ಅಪಾರವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ವಿಠ್ಠಲ ಬೆಣಗಿ ಹೇಳಿದರು.

Vijaya Karnataka 24 Jul 2019, 5:00 am
ಧಾರವಾಡ : ಕೃಷಿ ಕ್ಷೇತ್ರ ಚೆನ್ನಾಗಿ ಬೆಳೆಸುವಲ್ಲಿ ಮಹಿಳೆಯರ ಶ್ರಮ ಮತ್ತು ಸಾಧನೆ ಅಪಾರವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ವಿಠ್ಠಲ ಬೆಣಗಿ ಹೇಳಿದರು.
Vijaya Karnataka Web the role of women in agriculture is immense
ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರ


ನಗರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಭವನದಲ್ಲಿ 39ನೇ ರೈತ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡ ಉತ್ತರ ಕರ್ನಾಟಕದ ನೂತನ ರೈತ ಮಹಿಳಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಯಾವುದೇ ಪ್ರತಿಫಲವಿಲ್ಲದೇ ಕನಿಷ್ಠ 60ಗಂಟೆಗಳ ಕಾಲ ಶ್ರಮ ಹಾಕುತ್ತಾರೆ. ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದರೂ ಕೂಲಿಯ ವೇತನ ಪುರುಷರಿಗಿಂತ ಶೇ.70ರಷ್ಟು ಸಂಬಳ ಕಡಿಮೆ ಪಡೆಯುತ್ತಾರೆ. ಇದು ನೋವಿನ ಸಂಗತಿ ಎಂದರು.

ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ, ಪುಷ್ಪೋಧ್ಯಮ, ಹೈನುಗಾರಿಕೆ, ಕುರಿ ಕೋಳಿ ಮೇಕೆ ಜೇನು ಸಾಕಾಣಿಕೆಯಂತಹ ಕಸಬುಗಳಲ್ಲಿ ಧಾರವಾಡದ ಕೃಷಿ ವಿಸ್ತರಣಾ ಕ್ಷೇತ್ರದಲ್ಲಿ ಸೂಕ್ತ ತರಬೇತಿ ಪಡೆದು ಆದಾಯ ಸಂಪಾದಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ ್ಮಣ ಬಕ್ಕಾಯಿ ಮಾತನಾಡಿ, ಕೃಷಿ ಕೂಲಿಕಾರರು ನಿರಂತರ ಉದ್ಯೋಗ, ಕನಿಷ್ಠ ವೇತನ ಮತ್ತು ಸಂಘಟಿತ ಕಾರ್ಮಿಕರಿಗಿರುವ ವಿಶೇಷ ಸೌಲತ್ತು ಪಡೆಯದೆ ತೀವ್ರ ಪರದಾಡುತ್ತಿದ್ದಾರೆ. ಎಲ್ಲರಿಗೂ ಸರಕಾರದ ಸೌಲಭ್ಯ ಹಾಗೂ ಸಾಲ ದೊರೆಯಬೇಕು ಎಂದರು.

ಭಾರತೀಯ ಜೀವ ವಿಮಾ ನಿಗಮ ನಿವೃತ್ತ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಭೀಮಸೇನ ಕಾಗಿ ಮಾತನಾಡಿ, ಕೃಷಿ ಕ್ಷೇತ್ರದಡಿ ಗುರುತಿಸಿಕೊಂಡ ರೈತ ಮಹಿಳೆಯರು, ಕೃಷಿ ಕೂಲಿಕಾರರು, ಸಣ್ಣ ರೈತರಿಗೆ ಸರಕಾರರದಿಂದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಮತ್ತು ಕೆಲವು ಅಗತ್ಯ ಸಲಕರಣೆಗಳು ರೈತರಿಗೆ ಸಿಗದೇ ರೈತರು ಇಂದು ಅಳಿವಿನ ಅಂಚಿಗೆ ತಲುಪಿದ್ದಾರೆ. ಸರಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಉತ್ತರ ಕರ್ನಾಟಕ ರೈತ ಮಹಿಳಾ ವೇದಿಕೆಯ ಅಧ್ಯಕ್ಷೆ ಶೋಭಾ ಛಲವಾದಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಮಹಿಳಾ ರೈತ ಸಂಘಟನೆ, ರೈತ ಹೆಣ್ಣು ಮಕ್ಕಳ, ಕೃಷಿ ಕೂಲಿಕಾರರ, ಸಣ್ಣ ರೈತರ, ಉದ್ಧಾರಕ್ಕಾಗಿ ಶ್ರಮ ವಹಿಸುತ್ತೇನೆ ಎಂದರು.

ನಿವೃತ್ತ ಪ್ರಾಚಾರ್ಯ ಸರೋಜಾ ಎಂ.ಮುಶೇಣ್ಣವರ ಮಾತನಾಡಿದರು. ಇದೇ ವೇಳೆ 39ನೇ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಉತ್ತರ ಕರ್ನಾಟಕ ರೈತ ಮಹಿಳಾ ವೇದಿಕೆ ಉದ್ಘಾಟನೆ ನಡೆಯಿತು.

ಶೋಭಾ ಶಂಕರ ಯಡಳ್ಳಿ, ಲೀಲಾವತಿ ವಾಗಮೋಡೆ, ಚಿನ್ನವ್ವ ಶಿವಬಸಯ್ಯನವರ, ಮಾದೇವಿ ಬೇಲೂರ, ಉಮಾ ಅಂಗಡಿ ಸೇರಿದಂತೆ ಜಿಲ್ಲೆಯ ಮಹಿಳಾ ರೈತರು ಉಪಸ್ಥಿತರಿದ್ದರು. ಉಮಾ ಅಂಗಡಿ ನಿರೂಪಿಸಿದರು. ಪಾಂಡುರಂಗ ಕಾಳೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ