ಆ್ಯಪ್ನಗರ

ಇದೇನಾ ಕ್ರೀಡಾಪಟುವಿನ ಗೌರವ?

ಧಾರವಾಡ:ರಾಷ್ಟ್ರ ಮಟ್ಟದ ಕುಸ್ತಿ ಹಬ್ಬದ ಸಿದ್ಧತೆಯಲ್ಲಿತೊಡಗಿರುವ ಜಿಲ್ಲಾಡಳಿತ 2017ರ ರಾಜ್ಯ ಒಲಿಂಪಿಕ್‌ನಲ್ಲಿಗಾಯಗೊಂಡು ಆಸ್ಪತ್ರೆಯಲ್ಲಿಮೃತಪಟ್ಟ ಕುಸ್ತಿ ಪಟುವಿನ ಕುಟುಂಬದ ನೋವಿಗೆ ಸ್ಪಂದಿಸುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳು ತಾವೇ ನೀಡಿದ ಭರವಸೆಗಳನ್ನೂ ಈಡೇರಿಸದೆ ಮರೆತು ಕುಳಿತಿದ್ದಾರೆ!

Vijaya Karnataka 12 Feb 2020, 5:00 am
ನಿಜಗುಣಿ ದಿಂಡಲಕೊಪ್ಪ
Vijaya Karnataka Web the same athletes honor
ಇದೇನಾ ಕ್ರೀಡಾಪಟುವಿನ ಗೌರವ?

ಧಾರವಾಡ:ರಾಷ್ಟ್ರ ಮಟ್ಟದ ಕುಸ್ತಿ ಹಬ್ಬದ ಸಿದ್ಧತೆಯಲ್ಲಿತೊಡಗಿರುವ ಜಿಲ್ಲಾಡಳಿತ 2017ರ ರಾಜ್ಯ ಒಲಿಂಪಿಕ್‌ನಲ್ಲಿಗಾಯಗೊಂಡು ಆಸ್ಪತ್ರೆಯಲ್ಲಿಮೃತಪಟ್ಟ ಕುಸ್ತಿ ಪಟುವಿನ ಕುಟುಂಬದ ನೋವಿಗೆ ಸ್ಪಂದಿಸುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳು ತಾವೇ ನೀಡಿದ ಭರವಸೆಗಳನ್ನೂ ಈಡೇರಿಸದೆ ಮರೆತು ಕುಳಿತಿದ್ದಾರೆ!

2017 ಫೆ.3ರಿಂದ 10ರ ವರೆಗೆ ಧಾರವಾಡದಲ್ಲಿನಡೆದ ರಾಜ್ಯ ಮಟ್ಟದ ಒಲಿಂಪಿಕ್‌ನಲ್ಲಿ, ಕಡಪಾ ಮೈದಾನದಲ್ಲಿನಡೆದ ಕುಸ್ತಿ ರೋಚಕ ಮಾತ್ರವಲ್ಲಶೋಕಕ್ಕೂ ಕಾರಣವಾಯಿತು. ಕುಸ್ತಿ ಜಟಾಪಟಿಯಲ್ಲಿಧಾರವಾಡದ ಸಂತೋಷ ಹೊಸಮನಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆಗ ಸಾಂತ್ವನ ಹೇಳಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರಿಗೆ ವಿಮೆ ಪರಿಹಾರ, ಆಶ್ರಯ ಮನೆ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಯಾವ ಭರವಸೆಗಳೂ ಈಡೇರಿಲ್ಲ. ಹೀಗಾಗಿ ನ್ಯಾಯ ಕೊಡಿ ಎಂದು ಅಲವತ್ತುಕೊಳ್ಳುತ್ತಿರುವ ಅವರ ಕುಟುಂಬದವರಿಗೆ ಯಾರೂ ಸ್ಪಂದಿಸಿಲ್ಲ.

ಒಲಿಂಪಿಕ್‌ ಕ್ರೀಡಾಕೂಟದಲ್ಲಿಕುಸ್ತಿಪಟು ಗಾಯಗೊಂಡು ಸಾವಿಗೀಡಾದ ಕೂಡಲೇ ಸರಕಾರ 6 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪಾಲಿಕೆ 2 ಲಕ್ಷ ರೂ. ನೀಡಿತ್ತು. 2017 ಮಾ.8ರಂದು ಪರಿಹಾರದ ಚೆಕ್‌ ವಿತರಿಸಲಾಗಿದೆ. ಆದರೆ, ಉಳಿದ ಯಾವ ಸೌಲಭ್ಯಗಳೂ ದೊರೆತಿಲ್ಲ. 'ಇದೇನಾ ಕ್ರೀಡಾಪಟುಗಳಿಗೆ ನೀಡುವ ಗೌರವ ?' ಎಂದು ಪ್ರಶ್ನಿಸುತ್ತಿರುವ ಹೊಸಮನಿ ಕುಟುಂಬ ಕುಸ್ತಿಹಬ್ಬದಲ್ಲಾದರೂ ಕುಸ್ತಿಪಟುಗಳಿಗೆ ಮೋಸ ಮಾಡಬೇಡಿ ಎಂದು ನೋವಿನಿಂದಲೇ ಛೇಡಿಸುತ್ತಿದೆ.

ವಿಮೆ ಕೊಡಿಸಲು ಯಾಕೀ ನಿರ್ಲಕ್ಷ್ಯ?
ಕ್ರೀಡಾಕೂಟ ಆರಂಭಗೊಳ್ಳುವ ಮುಂಚೆಯೇ ಎಲ್ಲಕ್ರೀಡಾಪಟುಗಳು ಹಾಗೂ ವೀಕ್ಷಕರ ಮೇಲೆ ಜೀವವಿಮೆ ಮಾಡಿಸಲಾಗಿತ್ತು. ಇದಕ್ಕಾಗಿ ಜಿಲ್ಲಾಡಳಿತದಿಂದ ಜನರಲ್‌ ಇನ್ಶೂರೆನ್ಸ್‌ಗೆ 42,601 ರೂ. ವಿಮಾ ಕಂತು ಪಾವತಿಸಿದೆ. ಒಲಿಂಪಿಕ್‌ ಸಂದರ್ಭ ಅವಘಡಗಳು ಸಂಭವಿಸಿ ಕ್ರೀಡಾಪಟುಗಳು ಮಾತ್ರವಲ್ಲವೀಕ್ಷಕರು ಮೃತಪಟ್ಟರೆ ತಲಾ 10 ಲಕ್ಷ ರೂ., ಗಾಯಗೊಂಡರೆ ಗಾಯದ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ಅಂದಿನ ಜಿಲ್ಲಾಧಿಕಾರಿಗಳು (ಡಾ. ಎಸ್‌.ಬಿ. ಬೊಮ್ಮನಹಳ್ಳಿ) ಪ್ರಕಟಿಸಿದ್ದರು. ಆದರೆ, ಸಾವಿರಾರು ಜನರ ಎದುರಿನಲ್ಲಿಯೇ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿಮೃತಪಟ್ಟ ಕ್ರೀಡಾಪಟುವಿಗೇ ವಿಮೆ ಪರಿಹಾರ ನೀಡದಿರುವುದು ಆಶ್ಚರ್ಯ ಮೂಡಿಸಿದೆ.

ಈ ಕುರಿತಂತೆ ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೃತ ಕುಸ್ತಿಪಟುವಿನ ಕುಟುಂಬಕ್ಕೆ ವಿಮೆ ಪರಿಹಾರ ನೀಡಲು ವಿಮಾ ಕಂಪನಿ ಒಪ್ಪುತ್ತಿಲ್ಲ. ಈ ಸಾವು ನಮ್ಮ ವಿಮಾ ಒಪ್ಪಂದದ ವ್ಯಾಪ್ತಿಗೆ ಬಾರದು ಎನ್ನುತ್ತಿದ್ದಾರೆ. ಇನ್ನು ಆಶ್ರಯ ಮನೆ, ಅನುಕಂಪದ ನೌಕರಿ ಬಗ್ಗೆ ಭರವಸೆ ನೀಡಿದವರನ್ನೇ ಕೇಳಬೇಕು ಎನ್ನುತ್ತಿದ್ದಾರೆ. ಆದರೆ, ಅಂದು ಭರವಸೆ ನೀಡಿದ್ದ ಸಚಿವರಾದ ಸಂತೋಷ ಲಾಡ್‌, ವಿನಯ ಕುಲಕರ್ಣಿ ಈಗ ಅಧಿಕಾರದಲ್ಲಿಇಲ್ಲ. ಜಿಲ್ಲಾಧಿಕಾರಿ ಆಗಿದ್ದ ಬೊಮ್ಮನಹಳ್ಳಿ ಅವರು ವರ್ಗವಾಗಿದ್ದಾರೆ. ಹೀಗಾಗಿ ನಾವು ಪರಿಹಾರಕ್ಕೆ ಯಾರನ್ನು ಕೇಳಬೇಕು ಎಂದು ಹೊಸಮನಿ ಕುಟುಂಬ ಪ್ರಶ್ನಿಸುತ್ತಿದೆ.

ಆಶ್ರಯ ಮನೆಗೂ ದಿಕ್ಕಿಲ್ಲ
ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಭರವಸೆ ನೀಡುತ್ತಿರುವ ಸರಕಾರ ಇಲ್ಲಿಮೃತ ಸಂತೋಷ ಕುಟುಂಬಕ್ಕೆ ಒಂದು ಆಶ್ರಯ ಮನೆಯನ್ನೂ ನೀಡುತ್ತಿಲ್ಲ. ಸಂತೋಷನದ್ದು ತೀರ ಬಡ ಕುಟುಂಬ. ಇವರಿಗೆ ಸ್ವಂತಕ್ಕೆ ಯಾವ ಆಸ್ತಿಯೂ ಇಲ್ಲ. ಹೀಗಾಗಿ ಆಶ್ರಯ ಯೋಜನೆಯಡಿ ನಿವೇಶನ ಸೌಲಭ್ಯ ಕಲ್ಪಿಸಿಕೊಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿ ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಏಕೆ ಮೂರು ದಶಕಗಳ ಹಿಂದೆ ಸಂತೋಷನ ತಂದೆ ದ್ಯಾಮಣ್ಣ ಅವರ ಹೆಸರಿನಲ್ಲಿಮಂಜೂರಿ ನೀಡಿ ಹಕ್ಕುಪತ್ರವನ್ನೂ ಕೊಟ್ಟಿದ್ದ 40*60 ನಿವೇಶನವನ್ನೂ ಸರಕಾರ ಈಗ ಒತ್ತುವರಿ ಹೆಸರಿನಲ್ಲಿಕಸಿದುಕೊಳ್ಳಲು ಹೊರಟಿದೆ. ಆ ನಿವೇಶನದಲ್ಲಿಯೇ ನಮಗೆ ಮನೆ ನಿರ್ಮಿಸಿಕೊಡಿ ಎಂದು ಹೊಸಮನಿ ಕುಟುಂಬ ಸಲ್ಲಿಸುತ್ತಿರುವ ಮನವಿ ಪುರಸ್ಕಾರಗೊಳ್ಳುತ್ತಿಲ್ಲ. ಇನ್ನು ಅನುಕಂಪದ ನೌಕರಿ ಬಗ್ಗೆ ಯಾರೊಬ್ಬರೂ ಮಾತನಾಡುವವರೇ ಇಲ್ಲದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ