ಆ್ಯಪ್ನಗರ

ಹುಬ್ಬಳ್ಳಿ: ಬಸ್‌ ಏರಲು ಬಂದ ಸೀಲ್‌ ಹಾಕಿದ ವ್ಯಕ್ತಿ, ಆತಂಕ

ಹೋಮ್‌ ಕ್ವಾರಂಟೈನ್‌ ಸೀಲ್‌ ಹೊಂದಿದ್ದ ವ್ಯಕ್ತಿಯೊಬ್ಬ ಬಸ್‌ ಪ್ರಯಾಣಕ್ಕೆ ಬಂದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಹುಬ್ಬಳ್ಳಿಯ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು.

Vijaya Karnataka 20 May 2020, 7:42 pm
ಹುಬ್ಬಳ್ಳಿ: ಹೋಮ್‌ ಕ್ವಾರಂಟೈನ್‌ ಸೀಲ್‌ ಹೊಂದಿದ್ದ ವ್ಯಕ್ತಿಯೊಬ್ಬ ಬಸ್‌ ಪ್ರಯಾಣಕ್ಕೆ ಬಂದು, ಸಾರ್ವಜನಿಕರಲ್ಲಿಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ.
Vijaya Karnataka Web ಕೊರೊನಾ
ಕೊರೊನಾ

ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ದೊಡ್ಡಮನಿ ಎಂಬ ವ್ಯಕ್ತಿ ಕೈಯಲ್ಲಿ ಹೋಮ್‌ ಕ್ವಾರಂಟೈನ್‌ ಸೀಲ್‌ ಇದ್ದರೂ, ಮನೆಯಲ್ಲಿರದೇ ಬಸ್ಸಿನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದನು. ಇದೇ ವೇಳೆ ಹುಬ್ಬಳ್ಳಿ ಹೊಸೂರ ಬಸ್‌ ನಿಲ್ದಾಣ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ತಡೆದು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದರು.

ಆ ವ್ಯಕ್ತಿಗೆ ಬುಧವಾರವೇ ಹೋಮ್‌ ಕ್ವಾರಂಟೈನ್‌ ಸೀಲ್‌ ಹಾಕಲಾಗಿದ್ದು, ಆತ ಊರಿಗೆ ಪ್ರಯಾಣಿಸಲು ಮುಂದಾಗಿರುವುದು ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.

ಮಂಜುನಾಥ ಕಿಮ್ಸ್‌ ಆಸ್ಪತ್ರೆಗೆ ಕೋವಿಡ್‌-19 ಟೆಸ್ವ್‌ ಮಾಡಿಸಲು ಬಂದಿದ್ದರು. ಅವರಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ14 ದಿನ ಹೋಮ್‌ ಕ್ವಾರಂಟೈನ್ನಲ್ಲಿ ಇರುವಂತೆ ಸೀಲ್‌ ಹಾಕಲಾಗಿತ್ತು. ಆದರೂ ಆತ ಊರಿಗೆ ಹೋಗಲು ಹುಬ್ಬಳ್ಳಿ ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿ ತಡೆದು ಪ್ರಯಾಣಕ್ಕೆ ಅನುಮತಿ ಕೊಡದೇ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ