ಆ್ಯಪ್ನಗರ

ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆಯೇ ಇಲ್ಲ !

ಧಾರವಾಡ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ವಿಶೇಷ ಆಹ್ವಾನಿತರು, ಹಿರಿಯ ಸಾಹಿತಿಗಳು ಹಾಗೂ ಗಣ್ಯರಿಗೆ ಉಟೋಪಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಪರದಾಡುವಂತಾಯಿತು.

Vijaya Karnataka 6 Jan 2019, 5:00 am
ಧಾರವಾಡ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ವಿಶೇಷ ಆಹ್ವಾನಿತರು, ಹಿರಿಯ ಸಾಹಿತಿಗಳು ಹಾಗೂ ಗಣ್ಯರಿಗೆ ಉಟೋಪಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಪರದಾಡುವಂತಾಯಿತು.
Vijaya Karnataka Web there is no separate system for dignitaries
ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆಯೇ ಇಲ್ಲ !


ಸಮ್ಮೇಳನದ ಅವ್ಯವಸ್ಥೆ ಕಂಡ ವಿಶೇಷ ಆಹ್ವಾನಿತರು ಹೆಸರು ನೋಂದಣಿ ಮಾಡಿಸಿ ಊಟದ ಕೂಪನ್‌ ಪಡೆಯಲು ನೋಂದಣಿ ಕೌಂಟರ್‌ಗೆ ಹುಡುಕಾಟ ನಡೆಸಿದರು. ಆಯೋಜಕರು ನೋಂದಣಿ ಕೇಂದ್ರ ತೆರೆಯದೇ ಇರುವ ಮಾಹಿತಿ ಅರಿತ ಸಾಹಿತಿಗಳು ಹಾಗೂ ಗಣ್ಯರು ಆಯೋಜಕರ ವಿರುದ್ಧ ಹರಿಹಾಯ್ದರು. ವಿಶೇಷ ಆಹ್ವಾನಿತರು ಸಾಮಾನ್ಯ ಕೌಂಟರ್‌ನಲ್ಲಿ ಊಟ ಮಾಡಬೇಕಾದ ಅನಿವಾರ್ಯತೆ ಎದುರಿಸಿದರು. ಅಸಮಾಧಾನಗೊಂಡ ಕೇಲವರು ಸಮ್ಮೇಳನ ವೀಕ್ಷಿಸಿದರೇ ಮತ್ತೇ ಕೆಲವರು ಮನೆಗೆ ವಾಪಸ್ಸಾದರು. ದೊಡ್ಡ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಿಗೆ ಸೌಜನ್ಯಕ್ಕೂ ಕನಿಷ್ಠ ಗೌರವ ನೀಡದಿರುವುದಕ್ಕೆ ಸಮ್ಮೇಳನಕ್ಕೆ ಬಂದಿದ್ದ ನಾಗೇಶ ತಳವಾರ ಆಕ್ರೋಶ ವ್ಯಕ್ತಪಡಿಸಿದರು.

ಕೈಕೊಟ್ಟ ಕಂಪ್ಯೂಟರ್‌ಗಳು...

ಸುದಿ ಕಳಿಸಲು ಮಾಧ್ಯಮ ಕೇಂದ್ರದಲ್ಲಿ ಹಾಕಲಾಗಿದ್ದ ಬಹುತೇಕ ಕಂಪ್ಯೂಟರ್‌ಗಳು ಹಳೆಯ ಕಂಪ್ಯೂಟರ್‌ಗಳಾಗಿದ್ದವು. ನೂರಾರು ಕಂಪ್ಯೂಟರ್‌ಗಳು ಇದ್ದರೂ ಅವು ಸರಿಯಾಗಿ ಕಾರ್ಯನಿರ್ವಹಿಸದ ಕಾರಣಕ್ಕೆ ಸುದ್ದಿಗಾರರು ಪರದಾಡುವಂತಾಯಿತು. ಇಂಟರ್‌ನೆಟ್‌ ಸ್ಥಗಿತ, ಕಿಪ್ಯಾಡ್‌ ಜಾಮ್‌, ಮೌಸ್‌ ಕಾರ್ಯನಿರ್ವಹಿಸದಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಸುದ್ದಿಗಾರರನ್ನು ಕಾಡಿದವು. ಮಾಡಿದ ಸುದ್ದಿಗಳನ್ನು ಸಮಯಕ್ಕೆ ಸರಿಯಾಗಿ ಕಳಿಸಲು ಸುದ್ದಿಗಾರರು ಪರದಾಡುವಂತಾಯಿತು. ಮಾದ್ಯಮ ಕೇಂದ್ರ ಸಮಸ್ಯೆಗಳ ಕುರಿತು ಆಯೋಜಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ವರದಿಗಾರರಿಗೆ ತೆರೆಯಲಾಗಿದ್ದ ಊಟದ ಕೌಂಟರ್‌ನಲ್ಲಿಸಾಮಾನ್ಯರಿಗೂ ಅವಕಾಶ ನೀಡಿದ್ದರಿಂದ ಊಟ, ಉಪಹಾರದ ಕೊರತೆ ಎದುರಾಯಿತು.

ಕನ್ನಡ ಗೀತೆಗಳ ಮಾಧುರ್ಯ

ಸಮ್ಮೇಳನಾಧ್ಯಕ್ಷ ರ ಮೆರವಣಿಗೆಯ ಮಾರ್ಗಗಳಲ್ಲಿ ಆಟೊ ಚಾಲಕರು, ಸಂಘ-ಸಂಸ್ಥೆಯವರು ಧ್ವನಿವರ್ಧಕ ಮೂಲಕ ಕನ್ನಡ ಗೀತೆಗಳನ್ನು ಹಾಕುವ ಮೂಲಕ ಮೆರವಣಿಗೆಗೆ ಮೆರಗು ತಂದರು. ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು...ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ...ನಾವಾಡುವ ನುಡಿಯೇ ಕನ್ನಡ ನುಡಿ...ಕನ್ನಡ ನಾಡಿದ ವೀರರ ಮನಿಯ...ಸೇರಿದಂತೆ ಅನೇಕ ಕನ್ನಡ ಹಾಡುಗಳು ಗುಣಗುಣಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ