ಆ್ಯಪ್ನಗರ

ತಂಬಾಕು ಮುಕ್ತ ಜೀವನಶೈಲಿ ಅಗತ್ಯ

ಧಾರವಾಡ : ಸಮಾಜದಲ್ಲಿ ಸುಮಾರು ಶೇ.25 ರಿಂದ 30 ರಷ್ಟು ಜನ ತಂಬಾಕು ಸೇವನೆಗೆ ಅಂಟಿಕೊಂಡಿದ್ದು, ಸ್ವಾಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲಿ ಮತ್ತು ಯುವಕರಲ್ಲಿ ತಂಬಾಕಿನ ಕುರಿತು ಜಾಗೃತಿ ಮೂಡಿಸಬೇಕು ಎಂದು ಡಿಮಾನ್ಸ್‌ ಸಂಸ್ಥೆಯ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹೇಳಿದರು.

Vijaya Karnataka 1 Jun 2019, 5:00 am
ಧಾರವಾಡ : ಸಮಾಜದಲ್ಲಿ ಸುಮಾರು ಶೇ.25 ರಿಂದ 30 ರಷ್ಟು ಜನ ತಂಬಾಕು ಸೇವನೆಗೆ ಅಂಟಿಕೊಂಡಿದ್ದು, ಸ್ವಾಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲಿ ಮತ್ತು ಯುವಕರಲ್ಲಿ ತಂಬಾಕಿನ ಕುರಿತು ಜಾಗೃತಿ ಮೂಡಿಸಬೇಕು ಎಂದು ಡಿಮಾನ್ಸ್‌ ಸಂಸ್ಥೆಯ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹೇಳಿದರು.
Vijaya Karnataka Web DRW-31RANGA07
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಆದಿತ್ಯ ಪಾಂಡುರಂಗಿ ಮಾತನಾಡಿದರು.

ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಘೋಷವಾಕ್ಯದಡಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷ ತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಭಜಂತ್ರಿ ಮಾತನಾಡಿ, ವಿಶ್ವ ತಂಬಾಕು ರಹಿತ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಪ್ರತಿ ದಿನವೂ ತಂಬಾಕು ರಹಿತ ಜೀವನ ಮಾಡುವ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಡಾ.ಶೋಭಾದೇವಿ ಆರ್‌. ಪಾಟೀಲ್‌, ಡಾ.ಪ್ರಕಾಶ್‌ ಕೋರಿ, ಜಯಮ್ಮ, ಡಾ. ಮೇಘಮಾಲಾ ತಾವರಗೆರೆ, ಡಾ.ಸ್ನಪ್ನಾ ಪಾಂಡುರಂಗಿ, ಡಾ.ವಿಜಯ ಪ್ರಸಾದ್‌ ಬಿ., ಶ್ರೀದೇವಿ ಬಿರಾದಾರ್‌ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಾಂತ ಪಾಟೀಲ್‌ ನಿರೂಪಿಸಿದರು. ಅಶೋಕ ಕೋರಿ ಸ್ವಾಗತಿಸಿದರು. ರವಿ ಎಸ್‌.ಎಚ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ