ಆ್ಯಪ್ನಗರ

ಇಂದು ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ

ಹುಬ್ಬಳ್ಳಿ : ಇಲ್ಲಿನ ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ ಸಂಭ್ರಮ (25 ವರ್ಷದ ಸಂಭ್ರಮ) ಫೆ.10 ರಂದು ಸಂಜೆ 4ಕ್ಕೆ ವಿದ್ಯಾನಗರದ ಶ್ರೀ ವಿಘ್ನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್‌.ಎನ್‌. ಕಡಬಗೇರಿ ಹೇಳಿದರು.

Vijaya Karnataka 10 Feb 2019, 5:00 am
ಹುಬ್ಬಳ್ಳಿ : ಇಲ್ಲಿನ ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ ಸಂಭ್ರಮ (25 ವರ್ಷದ ಸಂಭ್ರಮ) ಫೆ.10 ರಂದು ಸಂಜೆ 4ಕ್ಕೆ ವಿದ್ಯಾನಗರದ ಶ್ರೀ ವಿಘ್ನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್‌.ಎನ್‌. ಕಡಬಗೇರಿ ಹೇಳಿದರು.
Vijaya Karnataka Web today is the silver jubilee of the vigneshwar vidya vidhaksha sangha
ಇಂದು ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ತರಬಾಳು ಜಗದ್ಗುರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ನಮ್ಮ ಸಂಸ್ಥೆಯಲ್ಲಿ 1050 ವಿದ್ಯಾರ್ಥಿಗಳಿದ್ದು, 38 ಜನ ಶಿಕ್ಷ ಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಜತ ಮಹೋತ್ಸವದ ಅಂಗವಾಗಿ ಶೈಕ್ಷ ಣಿಕ ವರ್ಷದಿಂದ ನರ್ಸಿಂಗ್‌ ಕಾಲೇಜು ಪ್ರಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಬಸವರಾಜ ಬೊಮ್ಮಾಯಿ, ಇಂಚಗೇರಿ ಸಂಸ್ಥಾನಮಠ ಪೀಠಾಧಿಪತಿಗಳಾದ ಡಾ.ಎ.ಸಿ. ವಾಲಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಲಕ್ಷ್ಮಿ ಉಪ್ಪಾರ, ದಾವಣಗೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ, ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಚನ್ನಪ್ಪ, ಸಂಘದ ನಿರ್ದೇಶಕಿ ಗಿರಿಜಾ ಕಡಬಿಗೇರಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಸಂಘದ ಕಾರ್ಯದರ್ಶಿ ವಿನಯಕುಮಾರ ಕಡಬಿಗೇರಿ, ಶಿಕ್ಷಕ ವಿ.ಐ. ಪಾಟೀಲ್‌ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ