ಆ್ಯಪ್ನಗರ

ಇಂದು ಮಧ್ವನವಮಿ: ಭವ್ಯ ಶೊಭಾಯಾತ್ರೆ

ಹುಬ್ಬಳ್ಳಿ : ವಿಶ್ವಗುರು ಶ್ರೀಮದಾನಂದತೀರ್ಥ ಭಗವತ್ಪಾದರ 702 ನೇ ಮಧ್ವನವಮಿ ಹಾಗೂ ಸರ್ವಮೂಲ ಗ್ರಂಥಗಳ ಶೋಭಾಯಾತ್ರೆ ಫೆ.14ರಂದು ಸಂಜೆ 5ಕ್ಕೆ ನಗರದ ತೊರವಿಗಲ್ಲಿಯ ರಾಯರಮಠದಿಂದ ಹೊರಡಲಿದೆ.

Vijaya Karnataka 14 Feb 2019, 5:00 am
ಹುಬ್ಬಳ್ಳಿ : ವಿಶ್ವಗುರು ಶ್ರೀಮದಾನಂದತೀರ್ಥ ಭಗವತ್ಪಾದರ 702 ನೇ ಮಧ್ವನವಮಿ ಹಾಗೂ ಸರ್ವಮೂಲ ಗ್ರಂಥಗಳ ಶೋಭಾಯಾತ್ರೆ ಫೆ.14ರಂದು ಸಂಜೆ 5ಕ್ಕೆ ನಗರದ ತೊರವಿಗಲ್ಲಿಯ ರಾಯರಮಠದಿಂದ ಹೊರಡಲಿದೆ.
Vijaya Karnataka Web today madhnavami a grand event
ಇಂದು ಮಧ್ವನವಮಿ: ಭವ್ಯ ಶೊಭಾಯಾತ್ರೆ


ಮಧ್ವಾಚಾರ್ಯರು ಬದರಿಕಾಶ್ರಮ ಪ್ರವೇಶಿಸಿದ ಸ್ಮರಣೆ ಹಿನ್ನೆಲೆಯಲ್ಲಿ ನಗರದ ವಿವಿಧ ವಿಪ್ರ ಸಂಘಟನೆಗಳ ಮುಖಂಡರ ಜತೆಗೂಡಿ ಶ್ರೀ ರಾಮಸೇವಾ ಪರಿಷತ್‌ ಈ ಭವ್ಯ ಮೆರವಣಿಗೆ ಹಮ್ಮಿಕೊಂಡಿದೆ. ಉತ್ತರಾದಿಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ಆಶೀರ್ವಾದ ಹಾಗೂ ಆದೇಶದ ಮೇರೆಗೆ ಈ ಭವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಲಾತಂಡಗಳು ಹಾಗೂ ವಾದ್ಯಮೇಳಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ. ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನದ ಶ್ರೀ ರಘುವಿಜಯ ತೀರ್ಥರು ಮೆರವಣಿಗೆಗೆ ಚಾಲನೆ ನೀಡುವರು. ಪಂಡಿತ ಪ್ರದ್ಮುಮ್ನಾಚಾರ್ಯ ಜೋಶಿ ಹಾಗೂ ಪಂಡಿತ ಜಯತೀರ್ಥ ಹುಂಡೇಕರ್‌ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಗೌಳಿಗಲ್ಲಿ, ದುರ್ಗದಬೈಲ್‌ ಮೂಲಕ ಕೊಪ್ಪೀಕರ ರಸ್ತೆ ಮಾರ್ಗವಾಗಿ ಲ್ಯಾಮಿಂಗ್ಟನ್‌ ಹೈಸ್ಕೂಲ್‌ ಆವರಣಕ್ಕೆ ಮೆರವಣಿಗೆ ಬಂದು ಸಂಪನ್ನಗೊಳ್ಳಲಿದೆ.

ಇದೇ ವೇಳೆ ನಗರದ ಖ್ಯಾತ ಪಂಡಿತರು ಮಧ್ವಾಚಾರ್ಯರ ಬಗ್ಗೆ ಉಪನ್ಯಾಸ ನೀಡಲಿದ್ದು, ಸಮಾರಂಭದಲ್ಲಿ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮುಖ್ಯ ಭಾಷಣ ಮಾಡಲಿದ್ದು ಸ್ವಸ್ಥ ಸಮಾಜಕ್ಕೆ ಮಧ್ವಾಚಾರ್ಯರ ಸಂದೇಶದ ಬಗ್ಗೆ ಮಾತನಾಡುವರು. ನಗರದ ಸಮಸ್ತ ರಾಯರ ಅಷ್ಟೋತ್ತರ ಮಂಡಳಿಗಳು, ಭಜನಾ ಮಂಡಳಿಗಳು,ಎಲ್ಲ ವಿಪ್ರ ಸಂಘಟನೆಗಳು , ಲ್ಯಾಮಿಂಗ್ಟನ್‌ ಹೈಸ್ಕೂಲ್‌ ಸಮಿತಿ ಶ್ರೀರಾಮ ವಿದ್ಯಾ ಕೇಂದ್ರ ಜತೆಗೂಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ರಾಮ ಸೇವಾ ಪರಿಷತ್‌ನ ಪ್ರಕಟಣೆ ತಿಳಿಸಿದೆ.

ಸಾಧಕರಿಗೆ ಸನ್ಮಾನ

ಶತಾಯುಷಿ ಕೃಷ್ಣಾಚಾರ್ಯ ನಾಗನೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿ.ಜಿ.ನಾಡಗೌಡ ಮತ್ತು ಡಾ. ಜಿ.ಬಿ. ಸತ್ತೂರ, ಅವರನ್ನು ಸನ್ಮಾನಿಸಲಾಗುವುದು. ಮಾಹಿತಿಗೆ ಮಿಲಿಂದ ಮಡಿ-7899068051, ವೆಂಕಟೇಶ ಕುಲಕರ್ಣಿ-9448631674 ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ