ಆ್ಯಪ್ನಗರ

ಟ್ರ್ಯಾಕ್ಟರ್‌ ಪಲ್ಟಿ, ಚಾಲಕ ಸೇರಿ ಇಬ್ಬರ ಸಾವು

ಹುಬ್ಬಳ್ಳಿ: ವೇಗವಾಗಿ ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಕುಸುಗಲ್‌ ಮತ್ತು ಇಂಗಳಹಳ್ಳಿ ರಸ್ತೆಯಲ್ಲಿಶುಕ್ರವಾರ ನಡೆದಿದೆ.

Vijaya Karnataka 23 May 2020, 5:45 pm
ಹುಬ್ಬಳ್ಳಿ: ವೇಗವಾಗಿ ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಕುಸುಗಲ್‌ ಮತ್ತು ಇಂಗಳಹಳ್ಳಿ ರಸ್ತೆಯಲ್ಲಿಶುಕ್ರವಾರ ನಡೆದಿದೆ.
Vijaya Karnataka Web tractor pulse drivers death
ಟ್ರ್ಯಾಕ್ಟರ್‌ ಪಲ್ಟಿ, ಚಾಲಕ ಸೇರಿ ಇಬ್ಬರ ಸಾವು


ಕುಸುಗಲ್‌ ಗ್ರಾಮದ ನಿವಾಸಿ, ಟ್ರ್ಯಾಕ್ಟರ್‌ ಚಾಲಕ ಇಸ್ಮಾಯಿಲ್‌ ಖಾದರಸಾಬ ಡಂಬಳ(28) ಹಾಗೂ ಅಭಿಷೇಕ ಸಿದ್ದಪ್ಪ ಈರಣ್ಣವರ(18) ಎಂಬುವರೇ ಮೃತರು. ಅಬ್ದುಲಸಾಬ್‌ ಮಹ್ಮದಸಾಬ್‌ ನದಾಫ್‌ ಗಂಭೀರ ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್‌ ಚಾಲಕ ಇಸ್ಮಾಯಿಲ್‌ ಹೊಲಕ್ಕೆ ಹೋಗಿ ಬರುತ್ತಿದ್ದ ವೇಳೆ ಅಭಿಷೇಕ ಮತ್ತು ಅಬ್ದುಲಸಾಬ ಅವರನ್ನು ಹತ್ತಿಸಿಕೊಂಡು ಕುಸುಗಲ್‌ ಕಡೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮಾರ್ಗ ಮಧ್ಯೆ ನಿರ್ಲಕ್ಷ್ಯದಿಂದ ವೇಗವಾಗಿ ಚಲಾಯಿಕೊಂಡು ಬರುತ್ತಿದ್ದ ವೇಳೆ ಇಂಗಳಹಳ್ಳಿ ಗ್ರಾಮದ ಮಡಿವಾಳರ ಎಂಬುವರ ಹೊಲದ ಬಳಿ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ.

ಇದರ ಪರಿಣಾಮದಿಂದ ಅಭಿಷೇಕ ಮತ್ತು ಇಸ್ಮಾಯಿಲ್‌ ಟ್ರ್ಯಾಕ್ಟರ್‌ ಕೆಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ನಿಂದ ಪುಟಿದು ಹೊರಗಡೆ ಬಿದ್ದ ಅಬ್ದುಲಸಾಬ್‌ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಸಿಪಿಐ ಜಾಕ್ಸನ್‌ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ