ಆ್ಯಪ್ನಗರ

ರಾಮರಾಜ್ಯ ತಂಡದ ಮುಡಿಗೆ ಟ್ರೋಫಿ

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ8 ದಿನ ಕೆಪಿಎಲ್‌ ಮಾದರಿಯಲ್ಲಿನಡೆದ ಧಾರವಾಡ ಪ್ರೀಮೀಯರ್‌ ಲೀಗ್‌ 2ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿಓಂಕಾರ ರಾಯಚೂರ ಮಾಲೀಕತ್ವದ ರಾಮರಾಜ್ಯ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಡಿಪಿಎಲ್‌ ಟ್ರೋಫಿ ತನ್ನದಾಗಿಸಿಕೊಂಡಿತು. ನಗದು ಪ್ರಶಸ್ತಿಯನ್ನು ಪ್ರಶಾಂತ ಸಿಂಧೆ ಪ್ರದಾನ ಮಾಡಿದರು.

Vijaya Karnataka 16 Jan 2020, 5:00 am
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ8 ದಿನ ಕೆಪಿಎಲ್‌ ಮಾದರಿಯಲ್ಲಿನಡೆದ ಧಾರವಾಡ ಪ್ರೀಮೀಯರ್‌ ಲೀಗ್‌ 2ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿಓಂಕಾರ ರಾಯಚೂರ ಮಾಲೀಕತ್ವದ ರಾಮರಾಜ್ಯ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಡಿಪಿಎಲ್‌ ಟ್ರೋಫಿ ತನ್ನದಾಗಿಸಿಕೊಂಡಿತು.
Vijaya Karnataka Web trophy for the utopia team
ರಾಮರಾಜ್ಯ ತಂಡದ ಮುಡಿಗೆ ಟ್ರೋಫಿ

ನಗದು ಪ್ರಶಸ್ತಿಯನ್ನು ಪ್ರಶಾಂತ ಸಿಂಧೆ ಪ್ರದಾನ ಮಾಡಿದರು.

ಫೈನಲ್‌ ಪಂದ್ಯದಲ್ಲಿಸಂತೋಷ ಬಂಡಿ, ಸಂತೋಷ ಮೇಟಿಯವರ ಮಾಲೀಕತ್ವದ ಫಯಾಜ ನಾಯಕತ್ವದ ಓಂ ಸಾಯಿ ತಂಡವು ದ್ವಿತೀಯ ಸ್ಥಾನ ಪಡೆದಿದ್ದು, ಬಾಬಾಜಾನ ತಂಡಕ್ಕೆ ನಗದು ಹಾಗೂ ಟ್ರೋಫಿಯನ್ನು ಪ್ರಧಾನ ಮಾಡಲಾಯಿತು.

ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿನಿಗದಿತ 8 ಓವರ್‌ಗಳ ಪಂದ್ಯದಲ್ಲಿಓಂ ಸಾಯಿ ತಂಡವು 91ರನ್‌ ಗಳ ಗುರಿ ನೀಡಿತು.ಇದನ್ನು ಬೆನ್ನಟ್ಟಿದ ರಾಮರಾಜ್ಯ ತಂಡವು 7.3 ಓವರ್‌ಗಳಲ್ಲಿಗೆಲುವಿನ ನಗೆ ಬೀರಿತು. ಅಂತಿಮವಾಗಿ 4ಬಾಲ್‌ಗಳಲ್ಲಿ5ರನ್‌ ಬೇಕಾದಾಗ ರಾಮರಾಜ್ಯ ತಂಡದ ಸಿಕ್ಸರ್‌ ಹೊಡೆಯುವ ಮುಖಾಂತರವಾಗಿ ಗೆಲುವು ಸಾಧಿಸಿದರು.

ಪಂದ್ಯಾವಳಿಯುದ್ದಕ್ಕೂ ಉತ್ತಮವಾಗಿ ಆಟವಾಡಿದ ಕಮಲಾಪೂರ ಕೇಸರಿ ತಂಡದ ನಾಯಕ ಶಿವು ಮಾದರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅಂತಿಮ ಪಂದ್ಯದಲ್ಲಿರಾಮರಾಜ್ಯ ತಂಡದ ಮಂಜುನಾಥ ಹೊಸಮನಿ ಮ್ಯಾನ್‌ ಆಪ್‌ ದಿ ಮ್ಯಾಚ್‌ ಪ್ರಶಸ್ತಿ ಪಡೆದರು. ರಾಮರಾಜ್ಯ ತಂಡದ ನಾಯಕ ಸಂತೋಷ ಬಂಡಿ ಸರಣಿಯುದ್ದಕ್ಕೂ ಅತ್ಯುತ್ತಮವಾಗಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಕ್ಕಾಗಿ ಅತ್ಯುತ್ತಮ ಬ್ಯಾಟ್ಸಮನ್‌ ಪ್ರಶಸ್ತಿ ಪಡೆದರು. ಎಮರ್ಜಿಂಗ್‌ ಪ್ಲೇಯರ್‌ ಆಪ್‌ ದಿ ಟೂರ್ನಾಮೆಂಟ್‌ ಆದಿತ್ಯ ಪಡೆದರು. ಅತ್ಯುತ್ತಮ ಬೌಲರ್‌ ಪ್ರಶಸ್ತಿಯನ್ನು ಸ್ವಾಮಿ ಬೆಟಗೇರಿ ಪಡೆದರು. ಅತ್ಯುತ್ತಮ ಫೀಲ್ಡರ್‌, ಬೆಸ್ಟ ಪ್ಲೇಯರ್‌ ಆಪ್‌ ದಿ ಟೂರ್ನಾಮೆಂಟ್‌, ಇನ್ನೂ ಹಲವಾರು ಪ್ರಶಸ್ತಿಗಳನ್ನು ವಿವಿಧ ಆಟಗಾರರು ಮುಡಿಗೇರಿಸಿಕೊಂಡರು.

ಚಂದ್ರಶೇಖರ ಭೈರಪ್ಪನವರ, ತುಳಜಪ್ಪ ಪೂಜಾರಿ, ವೈ.ಎಸ್‌. ಮೇಟಿ, ಈರಣ್ಣ ಮಲ್ಲಿಗವಾಡ, ಪ್ರವೀಣ ಲಾಂಡೆ, ಶಂಬು ಸಾಲ್ಮನಿ, ರಾಕೇಶ ನಾಝರೆ, ನರಸಿಂಹ ಪೂಜಾರ, ವರುಣ ಸಾಂಬ್ರಾಣಿ, ಮುತ್ತು ಗಡಾದ, ಸಂತೋಷ ಬಂಡಿ, ನಜೀರ್‌ ದರಗಾದ, ಹನೀಫ್‌, ಬಾಬು ಮಂಗಳಗಟ್ಟಿ, ಸಂದೀಪ ಪೈ, ಪ್ರಜ್ವಲ ದೇವಾಡಿಗ, ವಿಶಾಲ, ಹರ್ಷದ್‌, ಶಂಕರ ದೊಡ್ಡಮನಿ, ಅನೀಲ ಯಂಡೂರಿ, ಶಿವು ಮಾದರ, ಸಂತೋಷ, ಚೇತನ ಪೂಜಾರ, ಸಾಗರ ಮುಗಳೇಕರ, ಸುದೀಪ, ಸುಮಿತ ಸಿಂಗ್‌, ಗಣೇಶ, ಗಗನ, ರಾಜೇಶ, ವಿರಾಟ, ಮಹಾಂತೇಶ, ಶಾಹಬಾಜ್‌, ಮಾಥ್ಯೂಸ್‌, ರಾಕೇಶ್‌, ಅನಿಲ್‌ ದೊಡ್ಡಮನಿ, ಅರ್ಜುನ ಯಮನೂರ, ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ಸಂದೀಪ ಪೈ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ