ಆ್ಯಪ್ನಗರ

ಟಿಯುಸಿಸಿ 10ನೇ ಸಮ್ಮೇಳನ ಇಂದಿನಿಂದ

ಹುಬ್ಬಳ್ಳಿ: ಕಾರ್ಮಿಕರ ಸಂಕಷ್ಟಗಳ ಬಗ್ಗೆ ಚಿಂತನ ಮಂತನ ನಡೆಸಿ ಹಕ್ಕೊತ್ತಾಯ ಮಂಡಿಸುವ ಹಿನ್ನೆಲೆಯಲ್ಲಿಇಲ್ಲಿಯ ಗೋಕುಲ್‌ರೋಡ್‌ನ ಗೋಕುಲ್‌ ಗಾರ್ಡನ್‌ನಲ್ಲಿಜ. 18 ಮತ್ತು 19ರಂದು ಯೂನಿಯನ್‌ ಟ್ರೇಡ್‌ ಕೋ-ಆರ್ಡಿನೇಷನ್‌ ಸೆಂಟರ್‌(ಟಿಯುಸಿಸಿ) 10ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮುಖಂಡ ಜಿ.ಆರ್‌. ಶಿವಶಂಕರ ತಿಳಿಸಿದರು.

Vijaya Karnataka 18 Jan 2020, 5:00 am
ಹುಬ್ಬಳ್ಳಿ: ಕಾರ್ಮಿಕರ ಸಂಕಷ್ಟಗಳ ಬಗ್ಗೆ ಚಿಂತನ ಮಂತನ ನಡೆಸಿ ಹಕ್ಕೊತ್ತಾಯ ಮಂಡಿಸುವ ಹಿನ್ನೆಲೆಯಲ್ಲಿಇಲ್ಲಿಯ ಗೋಕುಲ್‌ರೋಡ್‌ನ ಗೋಕುಲ್‌ ಗಾರ್ಡನ್‌ನಲ್ಲಿಜ. 18 ಮತ್ತು 19ರಂದು ಯೂನಿಯನ್‌ ಟ್ರೇಡ್‌ ಕೋ-ಆರ್ಡಿನೇಷನ್‌ ಸೆಂಟರ್‌(ಟಿಯುಸಿಸಿ) 10ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮುಖಂಡ ಜಿ.ಆರ್‌. ಶಿವಶಂಕರ ತಿಳಿಸಿದರು.
Vijaya Karnataka Web tucc 10th conference from today
ಟಿಯುಸಿಸಿ 10ನೇ ಸಮ್ಮೇಳನ ಇಂದಿನಿಂದ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಮತ್ತು ಟಿಯುಸಿಸಿ ರಾಷ್ಟ್ರೀಯ ನಾಯಕ ಪ್ರವೀಣ ಬ್ಯಾನರ್ಜಿ ಆಗಮಿಸುವರು.

ಕಾರ್ಮಿಕ ಸಂಘಟನೆಯ 44 ಸಂಘಟನೆಗಳ ಮುಖಂಡರು ಸೇರಿದಂತೆ ಟಿಯುಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಕೇಂದ್ರ ಸರಕಾರದ ಹಲವು ನೀತಿಗಳಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕೆಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬರುತ್ತಿವೆ. ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕಾದ ಸರಕಾರ ಇದೀಗ ಇರುವ ಉದ್ಯೋಗಕ್ಕೂ ಅಪಾಯ ತರುತ್ತಿದೆ. ಹೀಗಾಗಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಆತಂಕದ ವಾತಾವರಣದಲ್ಲಿಬದುಕಬೇಕಾದ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಈ ಹಿನ್ನೆಲೆಯಲ್ಲಿಸಮ್ಮೇಳನದ ಮೂಲಕ ಕೇಂದ್ರ ಸರಕಾರವನ್ನು ಬಡೆದೆಬ್ಬಿಸುವ ಜತೆಗೆ ಟಿಯುಸಿಸಿ ಅಂಗೀಕರಿಸಿದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಇದರೊಂದಿಗೆ ಕಾರ್ಮಿಕ ವರ್ಗಕ್ಕೆ ಸೇವಾ ಭದ್ರತೆ ಜತೆಗೆ ಅಗತ್ಯ ಸಂಬಳ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಅಶೋಕ ಬಾರಕೇರ, ವೆಂಕಟೇಶ ಪ್ಯಾಟಿ, ಶಿರೀಷ ಸೂರಿ, ವಿವೇಕ ಪಾಟೀಲ, ಮಂಜುನಾಥ ಪ್ಯಾಟಿ, ಎಂ.ಜಿ. ಅಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ