ಆ್ಯಪ್ನಗರ

ಗೋವಿನ ಉತ್ಪನ್ನ ಬಳಸಿ

ಹುಬ್ಬಳ್ಳಿ: ಇಂದಿನ ಕಲುಷಿತ ವಾತಾವರಣ, ಪೈಪೋಟಿ ಜೀವನದಲ್ಲಿಬದುಕಿನ ಆರೋಗ್ಯದತ್ತ ಗಮನ ಹರಿಸುವುದು ಕಡಿಮೆಯಾಗಿದೆ. ಉತ್ತಮ ಆಹಾರ ಸೇವನೆ ಅತೀ ಅಮೂಲ್ಯ. ಆದ್ದರಿಂದ ಗೋವಿನ ಉತ್ಪನ್ನಗಳನ್ನು ಬಳಸಬೇಕು ಎಂದು ಡಾ.ಹನುಮಂತ ಆಳಲಿ ಹೇಳಿದರು.

Vijaya Karnataka 7 Nov 2019, 5:00 am
ಹುಬ್ಬಳ್ಳಿ: ಇಂದಿನ ಕಲುಷಿತ ವಾತಾವರಣ, ಪೈಪೋಟಿ ಜೀವನದಲ್ಲಿಬದುಕಿನ ಆರೋಗ್ಯದತ್ತ ಗಮನ ಹರಿಸುವುದು ಕಡಿಮೆಯಾಗಿದೆ. ಉತ್ತಮ ಆಹಾರ ಸೇವನೆ ಅತೀ ಅಮೂಲ್ಯ. ಆದ್ದರಿಂದ ಗೋವಿನ ಉತ್ಪನ್ನಗಳನ್ನು ಬಳಸಬೇಕು ಎಂದು ಡಾ.ಹನುಮಂತ ಆಳಲಿ ಹೇಳಿದರು.
Vijaya Karnataka Web use bovine product
ಗೋವಿನ ಉತ್ಪನ್ನ ಬಳಸಿ


ಗೋಪಾಲ ಗೋ ಸೇವಾ ಸಮಿತಿ ವತಿಯಿಂದ ಅಂಚಟಗೇರಿ ಗ್ರಾಮದ ನಾರಾಯಣ ಗೋ ಶಾಲೆಯಲ್ಲಿಬುಧವಾರ ನಡೆದ ಗೋಪಾಷ್ಠಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋ ಮಾತೆ ಜಗತ್ತಿಗೆ ತಾಯಿ ಎಂಬ ನಂಬಿಕೆ ನಮ್ಮದಾಗಿದೆ. ಗೋ ಮಾತೆಯ ಕೊಡುವ ಉತ್ಪನ್ನಗಳು ದಿವ್ಯ ಶಕ್ತಿಯಿಂದ ಕೂಡಿದೆ. ಅದರ ಬಳಕೆಯಿಂದ ಆರೋಗ್ಯ, ಚೈತನ್ಯ, ಉತ್ಸಾಹ, ಭಕ್ತಿ ಇಮ್ಮಡಿಯಾಗಲು ಸಾಧ್ಯ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಮಜೇಥಿಯಾ ಫೌಂಡೇಶನ ಚೇರ್‌ಮನ್‌ ಜಿತೇಂದ್ರ ಮಜೇಥಿಯಾ ಮಾತನಾಡಿ, ಗೋ ಮಾತೆ ಮನುಷ್ಯನ ಸುಂದರ ಬದುಕಿಗೆ ಕಾಮಧೇನುವಾಗಿದೆ. ಪ್ರಾಚೀನ ಸಂಸ್ಕೃತಿಯಿಂದ ಇವತ್ತಿನವರೆಗೂ ಗೋ ಮಾತೆಗೆ ಪೂಜ್ಯ ಭಾವನೆಯಿಂದ ಕಾಣುತ್ತಿದ್ದೇವೆ. ಇದರಿಂದ ಮನುಷ್ಯನಲ್ಲಿಮಾನವೀಯ ಸಂಸ್ಕೃತಿ ಬೆಳೆಯಲು ಸಹಾಯಕವಾಗಿದೆ ಎಂದರು.

ಕಮರಿಪೇಟ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರಾದ ಭರತ ರೆಡ್ಡಿ, ವಿ.ವಿ.ಬಂಕಾಪುರ, ಡಾ.ಗೀತಾರೆಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿಗೋ ಮಾತೆಯ ನಿರಂತರ ಸೇವೆ ಸಲ್ಲಿಸುತ್ತಿರುವ ಬಾಸ್ಕರ್‌ ಹೆಗಡೆ, ಶ್ರೀರಾಮು ದಂಪತಿಗಳನ್ನು ಸನ್ಮಾನಿಸಲಾಯಿತು.

ವಿಜಯೇಂದ್ರ ಅಗರವಾಲ, ಅಕ್ಕಮ್ಮಾ ಕಂಬಳಿ, ಸಂಗೀತಾ ಇಜಾರದ, ಶ್ರೇಯಾ ಹಿರೇಕೆರೂರ ಇದ್ದರು. ಸಮಿತಿ ಅಧ್ಯಕ್ಷ ಬಾಲಕೃಷ್ಣ ಸರಾಫ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ