ಆ್ಯಪ್ನಗರ

ವನಮಹೋತ್ಸವ, ಕಲಿಕಾ ಸಾಮಗ್ರಿ ವಿತರಣೆ

ಹುಬ್ಬಳ್ಳಿ : ಜೀವನದಲ್ಲಿ ನಾವು ಗಳಿಸಿದ ಆಸ್ತಿ ಒಡವೆ, ವಸ್ತು, ಬಂಗಾರವನ್ನು ಕಳ್ಳಕಾಕರು ಕದಿಯಬಹುದು. ಆದರೆ ನಾವು ಕಲಿತ ವಿದ್ಯೆಯನ್ನು ಯಾರು ಕದಿಯಲಾರರು ಎಂದು ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ನುಡಿದರು.

Vijaya Karnataka 14 Jun 2019, 5:00 am
ಹುಬ್ಬಳ್ಳಿ : ಜೀವನದಲ್ಲಿ ನಾವು ಗಳಿಸಿದ ಆಸ್ತಿ ಒಡವೆ, ವಸ್ತು, ಬಂಗಾರವನ್ನು ಕಳ್ಳಕಾಕರು ಕದಿಯಬಹುದು. ಆದರೆ ನಾವು ಕಲಿತ ವಿದ್ಯೆಯನ್ನು ಯಾರು ಕದಿಯಲಾರರು ಎಂದು ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ನುಡಿದರು.
Vijaya Karnataka Web vanuatuotsava learning equipment distribution
ವನಮಹೋತ್ಸವ, ಕಲಿಕಾ ಸಾಮಗ್ರಿ ವಿತರಣೆ


ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್‌, ಶ್ರೀಮತಿ.ಎಸ್‌.ಎಸ್‌.ಬಾಳನಗೌಡ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಹಾಗೂ ಮಕ್ಕಳಿಕೆ ಕಲಿಕಾ ಸಾಮಗ್ರಿ ವಿತರಣಾ ಅವರು ಸಮಾರಂಭದಲ್ಲಿ ಮಾತನಾಡಿದರು.

ಎಪಿಎಂಸಿ ಸದಸ್ಯ ಚೆನ್ನು ಹೊಸಮನಿ ಮಾತನಾಡಿ, ನಾವು ಪರಿಸರವನ್ನು ಕಾಪಾಡಿಕೊಳ್ಳದೆ ಹೋದರೆ ಮುಂದೊಂದು ದಿನ ಮನಕುಲವೇ ನಾಶವಾದೀತು. ನಾವು ಈಗಲೇ ಎಚ್ಚೆಚ್ಚತುಕೊಳ್ಳಬೇಕೆಂದರು.

ಗಣೇಶ ಕಠಾರಿ, ಮಲ್ಲಣ್ಣಾ ಬೋರಟ್ಟಿ, ಅರ್ಜುನ ಅಗ್ರವಾಲ, ಸಂಗಪ್ಪ ಕೋಲಾರ, ದುರ್ಗಪ್ಪ ಚಿಕ್ಕತುಂಬಳ, ವಿ.ವಿ.ಗುಡ್ಡದ, ಎಂ.ಎಸ್‌.ಕಲ್ಲಯ್ಯನವರ, ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಯೋಜಕಿಯರು, ಸದಸ್ಯರು ಪಾಲ್ಗೊಂಡಿದ್ದರು.

ಸಂಗಪ್ಪ ಕೋಲಾರ ಅಧ್ಯಕ್ಷ ತೆ ವಹಿಸಿಕೊಂಡಿದ್ದರು. ಪ್ರಾರಂಭದಲ್ಲಿ ಡಾ.ರಾಮು ಮೂಲಗಿ ಪರಿಸರ ಗೀತೆ ಹಾಡುವುದರ ಮೂಲಕ ಸರ್ವರಿಗೂ ಸ್ವಾಗತಿಸಿದರು. ಎಸ್‌.ಎ.ಪಾಟೀಲ ನಿರೂಪಿಸಿದರು. ಪ್ರೇಮಾ ದೊಡಮನಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ