ಆ್ಯಪ್ನಗರ

ವೀರಶೈವ ವಧು-ವರರ ಸಮಾವೇಶ 14ಕ್ಕೆ

ಹುಬ್ಬಳ್ಳಿ : ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಹಾಗೂ ಕರ್ನಾಟಕ ವೀರಶೈವ ವಧು-ವರರ ಅನ್ವೇಷಣಾ ಕೇಂದ್ರದ ಆಶ್ರಯದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಹಾಗೂ ಪಾಲಕರ ಬೃಹತ್‌ ಸಮಾವೇಶವನ್ನು ಜು.14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಗದಗನ ಚೇಂಬರ್‌ ಆಫ್‌ ಕಾಮರ್ಸ್‌ ಎಪಿಎಂಸಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರವಿ ಹಂದಿಗೋಳ ತಿಳಿಸಿದರು.

Vijaya Karnataka 13 Jul 2019, 5:00 am
ಹುಬ್ಬಳ್ಳಿ : ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಹಾಗೂ ಕರ್ನಾಟಕ ವೀರಶೈವ ವಧು-ವರರ ಅನ್ವೇಷಣಾ ಕೇಂದ್ರದ ಆಶ್ರಯದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಹಾಗೂ ಪಾಲಕರ ಬೃಹತ್‌ ಸಮಾವೇಶವನ್ನು ಜು.14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಗದಗನ ಚೇಂಬರ್‌ ಆಫ್‌ ಕಾಮರ್ಸ್‌ ಎಪಿಎಂಸಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರವಿ ಹಂದಿಗೋಳ ತಿಳಿಸಿದರು.
Vijaya Karnataka Web veerasaiva bride groom convention 14th
ವೀರಶೈವ ವಧು-ವರರ ಸಮಾವೇಶ 14ಕ್ಕೆ

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಪ್ರಕಾರ ವಿವಾಹ ಮಾಡುವ ಸದುದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಜಂಗಮ ಲಿಂಗಾಯತ, ಬಣಜಿಗ, ಪಂಚಮಸಾಲಿ, ಬಣಗಾರ, ಶಿವಶಿಂಪಿ, ನೇಕಾರ, ಕುರವಿನಶೆಟ್ಟಿ ಸಾಧರು, ಗಾಣಿಗೇರ, ಲಿಂಗಾಯತ ರೆಡ್ಡಿ, ಪಾಕನರೆಡ್ಡಿ, ನಾಮದರೆಡ್ಡಿ, ಒಕ್ಕಲಿಗ, ಕುಡವಕ್ಕಲಿಗ, ಹಡಪದ, ಹೂಗಾರ, ತೋಟಗಾರ ಸಮುದಾಯದ ಉನ್ನತ ವ್ಯಾಸಂಗ ಹೊಂದಿದ ಹಾಗೂ ಸರಕಾರಿ, ಅರೇ ಸರಕಾರಿ, ಬ್ಯಾಂಕ್‌ ಹಾಗೂ ಖಾಸಗಿ ಕಂಪನಿಯ ನೌಕರಸ್ಥರು, ಉದ್ಯಮದಾರರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವವರು ಎರಡು ಫೋಟೊ, ಜಾತಕದೊಂದಿಗೆ ಭಾಗವಹಿಸಬಹುದು. ಮಾಹಿತಿಗೆ 7204139739, 9686927111 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಶಿವಕುಮಾರ ಹಿರೇಮಠ, ಶಕುಂತಲಾ ನಂದಿಮಠ , ಜ್ಯೋತಿ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ