ಆ್ಯಪ್ನಗರ

ಬಿಎಸ್‌ವೈ ಸಿಎಂ ಮಾಡಲು ಉಪ ಚುನಾವಣೆ ಬಂದಿದೆ: ಭಾರತಿ ಶೆಟ್ಟಿ

ಹುಬ್ಬಳ್ಳಿ : ದೇವರು ಯಡಿಯೂರಪ್ಪನವನ್ನು ಸಿಎಂ ಮಾಡಬೇಕೆನ್ನುವ ಕಾರಣಕ್ಕಾಗಿಯೇ ಈ ಎರಡು ಉಪಚುನಾವಣೆ ರೂಪದಲ್ಲಿ ಬಿಜೆಪಿಗೆ ಸದಾವಕಾಶ ಒದಗಿಸಿದ್ದಾನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

Vijaya Karnataka 11 May 2019, 5:00 am
ಹುಬ್ಬಳ್ಳಿ : ದೇವರು ಯಡಿಯೂರಪ್ಪನವನ್ನು ಸಿಎಂ ಮಾಡಬೇಕೆನ್ನುವ ಕಾರಣಕ್ಕಾಗಿಯೇ ಈ ಎರಡು ಉಪಚುನಾವಣೆ ರೂಪದಲ್ಲಿ ಬಿಜೆಪಿಗೆ ಸದಾವಕಾಶ ಒದಗಿಸಿದ್ದಾನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.
Vijaya Karnataka Web vice presidential elections bsy bharathi shetty
ಬಿಎಸ್‌ವೈ ಸಿಎಂ ಮಾಡಲು ಉಪ ಚುನಾವಣೆ ಬಂದಿದೆ: ಭಾರತಿ ಶೆಟ್ಟಿ


ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಡಿಮೆ ಶಾಸಕರ ಬಲ ಹೊಂದಿದ್ದರೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಪವಿತ್ರ ಮೈತ್ರಿಯಲ್ಲಿ ಸರಕಾರ ರಚಿಸಿದ್ದಾರೆ. ಆದರೆ ಸರಕಾರ ನಡೆಸಲು ಮೈತ್ರಿ ಅರ್ಹವಲ್ಲ ಎಂಬ ಕಾರಣಕ್ಕಾಗಿ ಈ ಉಪಚುನಾವಣೆ ಎದುರಾಗಿದೆ. ಆದ್ದರಿಂದ ಮತದಾರರು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಯಡಿಯೂರಪ್ಪ ಅವರನ್ನು ಸಿಎಂ ಆಗಿ ಮಾಡಬೇಕು ಎಂದು ಮನವಿ ಮಾಡಿದರು.

ಯಾರದೋ ಉದ್ಧಾರಕ್ಕಾಗಿ ಕಣ್ಣೀರು ಹಾಕಿ ಅನುಕಂಪ ಸೃಷ್ಟಿಸುತ್ತಿರುವ ಪಕ್ಷಕ್ಕೆ ಮತ ಹಾಕಬೇಡಿ. ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತಾವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ತುಲನಾತ್ಮಕವಾಗಿ ತೂಗಿ ಮತ ನೀಡಿ. ಯಡಿಯೂಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಡಿಲು ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳು ಹತ್ತಾರು ಜನಪರ ಯೋಜನೆ ನೀಡಿದ್ದಾರೆ ಎಂದು ತಿಳಿಸಿದರು.

ಅವರಪ್ಪನ ಮನೆ ದುಡ್ಡಾ

ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುವ ಕುಮಾರಸ್ವಾಮಿ ಅವರೇನಾದರೂ ಅವರಪ್ಪನ ದುಡ್ಡಿನಿಂದ ಸಾಲಮನ್ನಾ ಮಾಡ್ತಾರಾ? ಅದು ಜನರ ತೆರಿಗೆ ಹಣ . ಸಿಎಂ ಕುಮಾರಸ್ವಾಮಿ ಪಂಚವಾರ್ಷಿಕ ಯೋಜನೆ ರೀತಿಯಲ್ಲಿ ರೈತರ ಸಾಲಮನ್ನಾ ಮಾಡಲು ಹೊರಟಿದ್ದಾರೆ. ಈಗಿಷ್ಟು ಮುಂದಿನ ವರ್ಷ ಇಷ್ಟು ಸಾಲಮನ್ನಾ ಮಾಡ್ತೀನಿ ಎಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರೈತರು ಸಾಲಗಾರಾಗದಂತೆ ಯೋಜನೆ ರೂಪಿಸಿದೆ ಎಂದರು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಜಾತಿ, ಧರ್ಮ ಒಡೆಯುವ ಕೆಲಸವಾಗಿದೆಯೇ ಹೊರತಾಗಿ ಯಾವುದೇ ಅಭಿವೃದ್ಧಿ ಆಗಿಲ್ಲ. ಅನ್ನಭಾಗ್ಯದ ರೂವಾರಿ ಎಂದು ಪ್ರಚಾರ ಪಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ, ಕೇಂದ್ರ ಸರಕಾರದಿಂದ ಬರುವ ಅನುದಾನವನ್ನು ಮರೆಮಾಚುತ್ತಿದ್ದಾರೆ. ಕೇವಲ ರಾಜ್ಯ ಸರಕಾರದ ಯೋಜನೆ ಎಂಬಂತೆ ಪ್ರಚಾರ ಪಡೆಯುತ್ತಿರುವ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮೀನಾಕ್ಷಿ ಒಂಟಮೊರೆ, ಚಿಕ್ಕನಗೌಡ್ರ ಪುತ್ರಿ ನಂದಾ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ