ಆ್ಯಪ್ನಗರ

ವಿದ್ಯಾದಾಸರೇ ಪ್ರಧಾನ ಅರ್ಚಕರು

ಧಾರವಾಡ : ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದ ಅಂಜನಾದ್ರಿ ಬೆಟ್ಟ (ಕಿಷ್ಕಿಂದಬೆಟ್ಟ) ದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ವಿದ್ಯಾದಾಸ್‌ ಬಾಬಾಜಿ ಪ್ರಧಾನ ಅರ್ಚಕರು. ಅಲ್ಲಿ ಅವರೇ ಪೂಜೆ ಕೈಂಕರ್ಯ ನಡೆಸಬೇಕು ಎಂದು ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

Vijaya Karnataka 22 Dec 2018, 5:00 am
ಧಾರವಾಡ : ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದ ಅಂಜನಾದ್ರಿ ಬೆಟ್ಟ (ಕಿಷ್ಕಿಂದಬೆಟ್ಟ) ದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ವಿದ್ಯಾದಾಸ್‌ ಬಾಬಾಜಿ ಪ್ರಧಾನ ಅರ್ಚಕರು. ಅಲ್ಲಿ ಅವರೇ ಪೂಜೆ ಕೈಂಕರ್ಯ ನಡೆಸಬೇಕು ಎಂದು ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
Vijaya Karnataka Web vidyadas are the chief priests
ವಿದ್ಯಾದಾಸರೇ ಪ್ರಧಾನ ಅರ್ಚಕರು


ಕೊಪ್ಪಳ ಜಿಲ್ಲಾಧಿಕಾರಿಗಳು ದೇವಸ್ಥಾನವನ್ನು ಸರಕಾರದ ಸುಪರ್ದಿಗೆ ಪಡೆದಿದ್ದ ಸಂದರ್ಭದಲ್ಲಿ ಆಗ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್‌ ಅವರನ್ನು ಪೊಲೀಸ್‌ ಬಲ ಬಳಸಿಕೊಂಡು ಹೊರಹಾಕಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆಹೋಗಿದ್ದರು. ಆ ಪ್ರಕರಣ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಪೂಜೆ ಮಾಡುವ ಹಕ್ಕು ಅರ್ಜಿದಾರರಿಗೆ (ವಿದ್ಯಾದಾಸ್‌) ಇಲ್ಲ ಎಂದು ಡಿ.6ರಂದು ಮಧ್ಯಂತರ ಆದೇಶ ನೀಡಿತ್ತು. ಮಧ್ಯಂತರ ಆದೇಶ ಪ್ರಶ್ನಿಸಿ ವಿದ್ಯಾದಾಸ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೂ. ಡಿ.ವಿ. ನಾಗರತ್ನ ಹಾಗೂ ನ್ಯಾ.ಮೂ. ಬೆಳ್ಳುಂಕಿ ಅವರಿದ್ದ ಹೈಕೋರ್ಟ್‌ ದ್ವಿಸದಸ್ಯ ಪೀಠ ವಿದ್ಯಾದಾಸ್‌ ಅವರೇ ಇಲ್ಲಿ ಅರ್ಚಕರು. ಅವರೇ ಪೂಜೆ ಮಾಡಬೇಕು ಎಂದು ತೀರ್ಪು ನೀಡಿದೆ.

ಅರ್ಜಿದಾರರ ಪರವಾಗಿ ಹೈಕೋರ್ಟ್‌ ಸೀನಿಯರ್‌ ಕೌನ್ಸೆಲರ್‌ ಸುಬ್ರಹ್ಮಣ್ಯ ಜೋಯಿಸ್‌ ಹಾಗೂ ಹಿರಿಯ ನ್ಯಾಯವಾದಿ ವಿದ್ಯಾವತಿ ಕೊಟ್ಟೂರಶೆಟ್ಟರ್‌ ವಾದ ಮಂಡಿಸಿದ್ದರು.

ಸುಪರ್ದಿ ಯಥಾಸ್ಥಿತಿ : ಅಂಜನಾದ್ರಿ ಬೆಟ್ಟವನ್ನು ಸರಕಾರದ ಸುಪರ್ದಿಗೆ ಪಡೆದಿದ್ದ ಜಿಲ್ಲಾಧಿಕಾರಿಗಳು ಅದರ ನಿರ್ವಹಣೆಗೆ ಗಂಗಾವತಿ ತಹಸೀಲ್ದಾರ ಎಲ್‌.ಡಿ. ಚಂದ್ರಕಾಂತ ಹಾಗೂ ಹುಲಗಿ ದೇವಾಲಯದ ಆಡಳಿತಾಧಿಕಾರಿ ಸಿ.ಎಚ್‌. ಚಂದ್ರಮೌಳಿ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿಗಳನ್ನಾಗಿ ನೇಮಿಸಿದ್ದರು. ಅಲ್ಲದೇ ಪ್ರಧಾನ ಅರ್ಚಕರನ್ನು ದೇವಸ್ಥಾನದಿಂದ ಬಲವಂತ ಹೊರ ಹಾಕಲಾಗಿತ್ತು. ಇದು ವಿವಾದದ ಅಲೆ ಎಬ್ಬಿಸಿತ್ತು. ದೇವಸ್ಥಾನ ಸುಪರ್ದಿ ಕುರಿತ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಆ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ ಏಕಸದಸ್ಯ ಪೀಠ ಜಿಲ್ಲಾಧಿಕಾರಿಗಳ ನಿರ್ಧಾರ ನಿಯಮ ಬಾಹಿರ ಎಂದು ಡಿ. 6ರಂದೇ ಮಧ್ಯಾಂತರ ತಡೆ ನೀಡಿತ್ತು. ಇದೀಗ ಅರ್ಚನೆ ಹಕ್ಕು ಪ್ರಕರಣ ಮುಗಿದಿದ್ದು, ದೇವಸ್ಥಾನ ಸುಪರ್ಧಿ ಕುರಿತ ಮಧ್ಯಾಂತರ ಆದೇಶ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ